ರೋಟರಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ 2 ಶವ ಶೀತಲಿಕರಣಗಳು ಹಸ್ತಾಂತರ

JANANUDI.COM NETWORK

 

ರೋಟರಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ 2 ಶವ ಶೀತಲಿಕರಣಗಳು ಹಸ್ತಾಂತರ

 

 

ಕುಂದಾಪುರ, ಜು,೧; ರೋಟರಿ ಅಂತರರಾಷ್ಟ್ರೀಯ ಜಿಲ್ಲೆಯ ಅನುದಾನದಿಂದ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಮುಖಾಂತರ , ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಎರಡು ಅತ್ಯಾಧುನಿಕ ತಂತ್ರಜ್ಞಾನದ ಎರಡು ಶವ ಸುರಕ್ಷತೆಯ ಶೀತಲಿಕರಣ ಯನಿಟುಗಳು ಉಪಲಬ್ಧವಾಗಿದ್ದು ಇವಗಳನ್ನು ಆಸ್ಪತ್ರೆಗೆ ಹಸ್ತಾಂತರ ಗಳಿಸುವ ಕಾರ್ಯಕ್ರಮ ಜೂನ್ 30 ರಂದು ಆಸ್ಪತ್ರೆಯ ಶವಗಾರದ ಮುಂದೆ ನಡೆಯಿತು.
ರೋಟರಿ ಜಿಲ್ಲೆಯ ಪೂರ್ವ ಗವರ್ನರ್ ಅಭಿನಂದನ್ ಎ ಶೆಟ್ಟಿ ಇದರ ಸ್ಮಾರಕ ಫಲಕದ ಪರದೆಯನ್ನು ಬಿಡಿಸುವ ಮೂಲಕ ಹಸ್ತಾಂತರ ಮಾಡಿ ‘ಈ ಆಸ್ಪತ್ರೆಗೆ ಬಹಳ ಸಮಯದಿಂದ ಶವ ಸುರಕ್ಷಿತೆಯ ಯುನಿಟ್ ಗಳನನ್ನು ನೀಡು ಬೇಕೆಂಬ ಆಶಯವಾಗಿತ್ತು.ನಮ್ಮದಾಗಿತ್ತು.   ನಮ್ಮ ಹತ್ತಿರ ಪರಿಸರದ ಶಾಲಾ ಮಕ್ಕಳು ಅಪಘಾತದಲ್ಲಿ ಮಡಿದಾಗ ಇಲ್ಲಿ ಶವ ಸುರಕ್ಷತೆಯ ಯುನಿಟ್ ಕಡಿಮೆಯಿದ್ದು. ಅವಾಗ ನನ್ನ ಲ್ಲಿ ಈ ಯೋಜನೆ ಹುಟ್ಟಿತು. ಅದು ಇಂದು ರೋಟರಿಯನ್ ಗಳ ಸಹಾಯದಿಂದ ಪೂರ್ಣ ಗೊಂಡಿದೆ’ ಎಂದು ತಿಳಿಸಿ. ’ರೋಟರಿ ಅಂತರರಾಷ್ಟ್ರೀಯ ಅನುದಾನದ ಮೂಲಕ ಇಂತಹ ಅನೇಕ ಯೋಜನೆಗಳನ್ನು ಸಮಾಜಕ್ಕೆ ರೋಟರಿ ನೀಡುತ್ತದೆ’ ಎಂದರು.
    ಸುಮಾರು 5.50 ಲಕ್ಷ ರೂಪಾಯಿ ಬೆಲೆಯ ಈ ಯುನಿಟ್ ಗಳನ್ನು ಸ್ವೀಕರಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ರೊಬರ್ಟ್ ರೆಬೆಲ್ಲೊ ‘ಇಂತಹ ಮೊರ್ಚರಿಗಳು ನಮಗೆ ಲಭಿಸಿದ್ದು ಬಹಳ ಉಪಕಾರದ ಕಾರ್ಯ. ಇದರ ಕೊರತೆ ನಮಗಿತ್ತು. ಇದು ನಮಗೆ ದಯಪಾಲಿಸಿದಕ್ಕೆ ರೋಟರಿಯನ್ ಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೆವೆ’ ಎಂದರು. ತಾಲೂಕು ಆರೋಗ್ಯ ಇಲಾಖಾ ವೈದ್ಯಾಧಿಕಾರಿ ಚಂದ್ರಶೇಖರ ಉಡುಪ ರೋಟರಿಯೆನವರ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.
   ರೋಟರಿ ದಕ್ಷಿಣ ಕುಂದಾಪುರದ 2019/20 ರ ಅಧ್ಯಕ್ಷ ಜಾನ್ಸನ್ ಡಿ ಆಲ್ಮೇಡ, ಅಂದಿನ ಕಾರ್ಯದರ್ಶಿ ರಾಮ್ ಪ್ರಸಾದ್ ಶೇಟ್, ಪಿ.ಡಿ.ಜಿ. ಸದಾನಂದ ಛಾತ್ರ,ಜಿಲ್ಲಾ ಉಪ ಗವರ್ನರ್ ರವಿರಾಜ್ ಶೆಟ್ಟಿ  2020/21 ರ ಅಧ್ಯಕ್ಷ ಡಾ.ಉತ್ತಮ್ ಕುಮಾರ್ ಶೆಟ್ಟಿ ಮತ್ತು  ಇನ್ನಿತರ ಹಲವಾರು ರೋಟರಿಯನ್ ಗಳು ಉಪಸ್ಥಿತರಿದ್ದರು.ಕುಂದಾಪುರ ದಕ್ಷಿಣದ ರೋಟರಿ ಅಧ್ಯಕ್ಷ ದೇವರಾಜಾ ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾ ಭಟ್ ವಂದಿಸಿದರು