JANANUDI NETWORK
ರೋಟರಿಯಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಇ ಲರ್ನಿಂಗ್ ಕೊಡುಗೆ ಹಸ್ತಾಂತರ
ಕುಂದಾಪುರ್, ಜು.3: ರೋಟರಿ ಸಂಸ್ಥೆಯಿಂದ ಸಂತ ಜೋಸೆಫ್ ಪ್ರೌಢ ಶಾಲೆಗೆ ಸುಮಾರು ಒಂದು ಕಾಲು ಲಕ್ಷ ರೂಪಾಯಿ ಮೌಲ್ಯದ ಇ ಲರ್ನಿಂಗ್ ಕೊಡುಗೆ ಎರಡು ಪ್ರೊಜೆಕ್ಟರಗಳು ಮತ್ತು ಎರಡು ಪರದೆಗಳನ್ನು ಸಂತ ಜೋಸೆಫ್ ಪ್ರೌಢ ಶಾಲೆಯ ಸಭಾಭವನದಲ್ಲಿ ಅಗೋಸ್ತ್ 2 ರಂದು ಹಸ್ತಾಂತರಿಸಲಾಯಿತು.
ಇದರ ಉದ್ಘಾಟನೆಯನ್ನು ಜಿಲ್ಲಾ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್. ರವಿರಾಜ್ ಶೆಟ್ಟಿ ಉದ್ಘಾಟಿಸಿ ರೋಟರಿ ಸಂಸ್ಥೆ ಸಮಾಜದ ಕಳಕಳಿಯಿಂದ ಸೇವೆ ಮಾಡುತ್ತದೆ. ಎಲ್ಲಿ ಕುಂದು ಕೊರೆತೆ ಇದನ್ನು ಮನಗಂಡು ಅವರಿಗೆ ಕೊಡುಗೆಗಳನ್ನು ನೀಡುತ್ತದೆ. ಈ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ನಾವು ಮಹತ್ವವನ್ನು ಕೊಟ್ಟಿದ್ದೆವೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕುಂದು ಕೊರತೆ ನೀಗಿಸಲು ನಾವು ಸಾಧ್ಯವಿದಷ್ಟು ಶ್ರಮಿಸುತ್ತೇವೆ’ ಎಂದು ನುಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕಳೆದ ಸಾಲಿನ ರೋಟರಿ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ. ಪಿ.ಎಚ್.ಎಫ್. ರೋ ಜಾನ್ಸನ್ ಡಿಆಲ್ಮೇಡಾ ’ಸಂಸ್ಥೆಯಲ್ಲಿ ಎಲ್ಲವು ಪಾರದರ್ಶಕ ಆಡಳಿತ ಇರುತ್ತದೆ, ಕಳೆದ ಸಾಲಿನ ಕೊನೆಯ ದಿನ ಈ ಕೊಡುಗೆಯ ಮಂಜುರು ಆಗಿದ್ದು, ನನ್ನ ಶ್ರಮಕ್ಕೆ ರೋ. ಗಣೇಶ್ ಕಾಮತ್ ರೋ. ಶ್ರೀಧರ್ ಶೆಟ್ಟಿಯವರು ಶ್ರಮ ವಹಿಸಿ ಈ ಯೋಜನೆಯನ್ನು ಸಾಕಾರ ಗೊಳಿಸಿದ್ದಾರೆ ಎಂದರು. ರೋ. ಕುಂದಾಪುರ ದಕ್ಷಿಣ ಇದರ ನೂತನ ಅಧ್ಯಕ್ಷ ದೇವರಾಜ್ ಕೆ. ‘ಮಾತಾಡಿ ರೋಟರಿ ಸಂಸ್ಥೆ ತುಂಬ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ, ಕುಗ್ರಾಮದಲ್ಲಿರುವ ಶಾಲೆಗೆ ಸೋಲಾರ್ ಕೊಟ್ಟಿದ್ದೆವೆ, ಬೆಂಚು ಕುರ್ಚಿ ಮತ್ತು ಕಲಿಕಾ ಸಾಮಾಗ್ರಿಗಳನ್ನು ಕೊಡುವ ಯೋಜನೆಯನ್ನು ಮಾಡಿದ್ದೇವೆ’ ಎಂದು ತಿಳಿಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಶಿವಾನಂದ್ ರೋಟರಿಯ ಸೇವೆ ತಿಳಿಸುತ್ತಾ ಕಾನ್ವೆಂಟ್ ಶಾಲೆಗಳ ಶಿಸ್ತು, ಸ್ವಚತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲ ಸಂಚಾಲಕರಾದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ ಶುಭ ನುಡಿದರು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ‘ರೋಟರಿಯ ನಿಸ್ವಾರ್ಥ ಸೇವೆಗೆ ಕ್ರತಜ್ಞತೆ ಸಲ್ಲಿಸುತ್ತಾ, ಅನುದಾನಿತ ಶಾಲೆಗಳಿಗೆ ಇಂತಹ ಆಧುನಿಕ ಶೈಕ್ಷಣಿಕ ವ್ಯವಸ್ಥೆಗಳಿಂದ ವಂಚಿತರಾಗಿದ್ದೆವೆ, ನಮ್ಮಲ್ಲಿ ಬರುವ ಬಡ ಮಕ್ಕಳಿಗೂ ಇಂತಹ ವ್ಯವಸ್ಥೆ ಬೇಕು’ ಎಂದು ತಿಳಿಸಿದರು. ರೋಟರಿಯನ್ಗಳಾದ ವಿವಿಯನ್ ಕ್ರಾಸ್ಟೊ, ಮನೋಹರ್ ಭಟ್, ಶ್ರೀನಾಥ್ ರಾವ್, ಲೋಯ್ ಕರ್ವಾಲ್ಲೊ, ಮುಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಮೆಲ್ವಿನ್ ಡಿಸೋಜಾ ಮುಂತಾದವರು ಉಪಸ್ತಿತರಿದ್ದರು. ಶಿಕ್ಷಕ ಮೈಕಲ್ ಪುರ್ಟಾರ್ಡೊ ಸ್ವಾಗತಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.