ವರದಿ: ವಾಲ್ಟರ್ ಮೊಂತೇರೊ
ರೋಟರಿ ಕ್ಲಬ್ ಬೆಳ್ಮಣ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ಇವರ ಸಹಭಾಗಿತ್ವದಲ್ಲಿ ” ಆರೋಗ್ಯ ಮಾಹಿತಿ ಸಪ್ತಾಹ”
ರೋಟರಿ ಕ್ಲಬ್ ಬೆಳ್ಮಣ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ಇವರ ಸಹಭಾಗಿತ್ವದಲ್ಲಿ ” ಆರೋಗ್ಯ ಮಾಹಿತಿ ಸಪ್ತಾಹ”ದ ಕ ಪ್ರಥಮ ಕಾರ್ಯಕ್ರಮವಾಗಿ ” ಡೆಂಗಿ ಜ್ವರ” ದ ಬಗ್ಗೆ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸತೀಶ್ ರಾವ್ ನೀಡಿದರು. ಈ ಸಂದರ್ಭದಲ್ಲಿ ಡೆಂಗಿ ಜ್ವರದ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯುಳ್ಳ ೨ ಸಹಸ್ರ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬೆಳ್ಮಣ್ ಗ್ರಾಮದ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಬೆಳ್ಮಣ್ಣೀನ ಅಧ್ಯಕ್ಷರಾದ ರೋ| ಸಜೇಶ್ ಕುಮಾರ್ ವಹಿಸಿ ಸ್ವಾಗತಿಸಿದರು. ಸಮುದಾಯ ಸೇವಾ ನಿರ್ದೇಶಕರಾದ ರೋ| ಪ್ರಭಾಕರ ಶೆಟ್ಟಿ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ರೋ| ರನೀಶ್ ಆರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿ, ರೋ| ವಿಘ್ನೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ೫೦ ಮಂದಿ ಸಾರ್ವಜನಿಕರು ಹಾಗೂ ರೋಟರಿ ಸಂಸ್ಥೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.