ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಾರಾಯಣ ವಿಶೇಷ ಚೇತನ ಶಾಲೆಗೆ ಗ್ಲೋಬಲ್ ಗ್ರ್ಯಾಂಟ್ ಯೋಜನೆಯ ಹಸ್ತಾಂತರ ಕಾರ್ಯಕ್ರಮ

JANANUDI.COM NETWORK

ಕುಂದಾಪುರ, ಸೆ.7: ತಾ06-09-20 ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಾರಾಯಣ ವಿಶೇಷ ಚೇತನ ಶಾಲೆಗೆ ಕೊಡಮಾಡಲ್ಪಟ್ಟ ಗ್ಲೋಬಲ್ ಗ್ರ್ಯಾಂಟ್ GG 1989053 ಯೋಜನೆಯ ಹಸ್ತಾಂತರ ಕಾರ್ಯಕ್ರಮ ತಲ್ಲೂರಿನ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ನೆರವೇರಿತು. ಈ ಕಾರ್ಯ ಕ್ರಮಕ್ಕೆ ಆಗಮಿಸಿದ ರೋಟರಿ ಜಿಲ್ಲಾ 3182 ರ ಗವರ್ನರ್ ರೋ. ಬಿ. ರಾಜಾರಾಮ ಭಟ್ ಶೌಚಾಲಯ, ಕಂಪ್ಯೂಟರ್, ಪೀಠೋಪಕರಣ ಹಾಗೂ ಪಿಸಿಯೋಥೆರಪಿ ಉಪಕರಣಗಳನ್ನು ಶಾಲೆಯ ಆಡಳಿತ ಟ್ರಸ್ಟಿ ಸುರೇಶ್ ರಿಗೆ ಹಸ್ತಾಂತರಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯ ಈ ಕೊಡುಗೆ ಸದುಪಯೋಗವಾಗಲಿ ಎಂದು ಹಾರೈಸಿದರು.

ಈ ಕಾರ್ಯ ಕ್ರಮಕ್ಕೆ ಪಿ ಡಿ ಜಿ ಸದಾನಂದ ಚಾತ್ರ, ಪಿ ಡಿ ಜಿ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ರ್ಡಾ ನಾಗಭೂಷಣ ಉಡುಪ ಶುಭ ಹಾರೈಸಿದರು . ಈ ಯೋಜನೆಯ ಪ್ರಾಥಮಿಕ ಸಂಪರ್ಕ ವ್ಯಕ್ತಿ ರೊ ಶ್ರೀಧರ್ ಶೆಟ್ಟಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾ 28.5 ಲಕ್ಷದ ಈ ಯೋಜನೆಯಡಿಯಲ್ಲಿ ಶಾಲಾವಾಹನದ ಹಸ್ತಾಂತರ ಈ ಮೊದಲೇ ಆಗಿದ್ದು ಈಗ ಯೋಜನೆ ಸಂಪೂರ್ಣಗೊಂಡಿದೆ ಎಂದರು. ರೊ ಕೃಷ್ಣ ಕಾಂಚನ್, surgeon ಆಸ್ಪತ್ರೆಯ ರೊ ಡಾ ವಿಶ್ವೇಶ್ವರ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಡಾ ಉತ್ತಮ ಕುಮಾರ್ ಶೆಟ್ಟಿ ,ನಾರಾಯಣ ವಿಶೇಷ ಚೇತನ ಶಾಲೆಯ ಟ್ರಸ್ಟಿ ಗಳಾದ ಶ್ರೀಯುತ ಸುರೇಶ್ ಹಾಗೂ ವಸಂತ ಶ್ಯಾನುಭಾಗ್ ಉಪಸ್ಥಿತರಿದ್ದರು. ರೋಟರಿ ಕುಂದಾಪುರ ದಕ್ಷಿಣದ ಕಾರ್ಯದಶಿ ರೊ ಜೂಡಿತ್ ಮೆಂಡೊನ್ಸಾ ಎಲ್ಲರನ್ನು ಸ್ವಾಗತಿಸಿ, ರೊ ವಾಸುದೇವ ಕಾರಂತ ಕಾರ್ಯಕ್ರಮ ನಿರ್ವಹಿಸಿದರು.