JANANUDI.COM NETWORK
ಕುಂದಾಪುರ,ಡಿ.13: ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ 29 ನೇ ಸಾಮಾನ್ಯ ಸಭೆಯು ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಡಿಸೆಂಬರ್ 13 ಭಾನುವಾರದಂದು ನಡೆದ ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಂಘದ ಸದಸ್ಯರಿಗೆ ಶೇಕಡ 17.5 ಡಿವಿಡೆಂಡ್ ಘೋಶಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ನಮ್ಮ ಸೊಸೈಟಿ ಹಿಂದಿನ ನಿರ್ದೇಶಕರು, ಇಂದಿನ ನಿರ್ದೇಶಕರು ಮತ್ತು ಸಿಬಂದ್ದಿ ವರ್ಗದವರ ಶ್ರಮದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿ ಇಂದು ನಮಗೆ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ಮತ್ತು ‘ಸಾಧನ ಪ್ರಶಸ್ತಿ’ ಲಭಿಸಿದೆ. ನಾವು ಪ್ರಶಸ್ತಿಗಳಿಗಾಗಿ ಪ್ರಯತ್ನ ಪಡಲಿಲ್ಲಾ. ಆದರೆ ನಮ್ಮ ಉತ್ತಮ ಸಾಧನೆಗಳಿಂದ ನಮಗೆ ಪ್ರಶಸ್ತಿ ಹುಡುಕಿ ಬಂದಿದೆ. ಇನ್ನು ಮುಂದೆ ಇನ್ನೂ ಹೆಚ್ಚಿನ ಬೆಳವಣಿಗೆಗಾಗಿ ಹಲವು ಕಾರ್ಯ ಯೋಜನೆಗಳನ್ನು ಹಮ್ಮಿ ಕೊಂಡಿದ್ದೆವೆ. ನೂತನ ಶಾಖೆಗಳನ್ನು ತೆರೆಯಲಾಗುವುದು, ಈಗಿರುವ ಶಾಖೆಗಳಿಗೆ ಸ್ಥಿರಾಸ್ತಿ ಮತ್ತು ಸ್ವಂತ ಕಟ್ಟಡಗಳನ್ನು ಕಟ್ಟಲು ಪ್ರಯತ್ನ ಪಡಲಾಗುವುದು. ಅದಕ್ಕೆ ಕಟ್ಟಡ ನಿಧಿಯನ್ನು ಸ್ಥಾಪಿಸಿದ್ದೆವೆ, ಹಾಗೇ ಸಿಬ್ಬಂದಿ ಕ್ಷೇಮ ನಿಧಿ, ಸಹಕಾರಿ ಶಿಕ್ಷಣ ನಿಧಿ ಇಂತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೆವೆ’ ಎಂದು ತಿಳಿಸಿ ಲಾಭ ವಿಂಗಡನೆಯನ್ನು ವಿವರಿಸಿದರು.
ಸೊಸೈಟಿಯ ಮುಖ್ಯ ಸಲಹದಾರದಾದ ಕುಂದಾಪುರ ವಲಯ ಪ್ರಧಾನರಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂ| ಸ್ಟ್ಯಾನಿ ತಾವ್ರೊ ‘ಸೊಸೈಟಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಕೀರ್ತಿ ಗಳಿಸಲಿ, ಜೊತೆಗೆ ಈ ವರ್ಷ ಕೊವಿಡ್ 19 ಬಂದು ಕಷ್ಟಕಾಲದಲ್ಲಿ ನಾವು ಹೇಗೆ ಜಿವಿಸಬೇಕೆಂದು ಕಲಿಸಿಕೊಟ್ಟಿದೆ, ಹಾಗೆ ನಾವು ಒಬ್ಬರಿಂದೊಬ್ಬರಿಗೆ ಸಹಕಾರ ಕೊಟ್ಟು ಒಬ್ಬರಿಂದೊಬ್ಬರಿಗೆ ಒಳಿತು ಮಾಡುವ’ ಎಂದು ಆಶಿರ್ವಚನ ಮಾಡಿ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸಂಘದ ನೂತನ ಲಾಂಛನವನ್ನು ಪರಿಚಯಿಸಲಾಯಿತು
ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ವಾರ್ಷಿಕ ವರದಿಯನ್ನು ವಾಚಿಸಿದರು, ಕುಂದಾಪುರ ಶಾಖಾಧಿಕಾರಿ ಮೇಬಲ್ ಡಿಆಲ್ಮೇಡಾ ಲೆಕ್ಕ ಪರಿಶೋಧನ ವರದಿಯನ್ನು ವಾಚಿಸಿದರು. ನಿರ್ದೇಶಕರಾದ ಫಿಲಿಫ್ ಡಿಕೋಸ್ತಾ, ಶಾಂತಿ ಆರ್. ಕರ್ವಾಲ್ಲೊ, ಡಯಾನಾ ಡಿಆಲ್ಮೇಡ, ಜಾಕೋಬ್ ಡಿಸೋಜ, ಬ್ಯಾಪ್ಟಿಸ್ಟ್ ಡಾಯಸ್, ಪ್ರಕಾಶ್ ಲೋಬೊ, ಓಝ್ಲಿನ್ ರೆಬೆಲ್ಲೊ, ಡೆರಿಕ್ ಡಿಸೋಜಾ, ವಿಲ್ಸನ್ ಡಿಸೋಜಾ, ಸಂತೋಷ್ ಓಜ್ವಲ್ಡ್ ಡಿಸಿಲ್ವಾ, ವಿಲ್ಫ್ರೆಡ್ ಮಿನೇಜೆಸ್, ಟೆರೆನ್ಸ್ ಸುವಾರಿಸ್, ತಿಯೋದೊರ್ ಒಲಿವೆರಾ ಉಪಸ್ಥಿತರಿದ್ದರು.
ಸೊಸೈಟಿ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು, ನಿರ್ದೇಶಕಿ ಶಾಂತಿ ಡಾಯಸ್ ವಂದಿಸಿದರು. ನಿರ್ದೇಶಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.