ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವ: ಪ್ರತಿಯೊಂದು ಮಗು ದೇವರ ವರವಾಗಿದೆ

ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವ: ಪ್ರತಿಯೊಂದು ಮಗು ದೇವರ ವರವಾಗಿದೆ


ಕುಂದಾಪುರ, ಮಾ.30: ‘ಪ್ರತಿಯೊಂದು ಮಗು ಒಂದು ದೇವರ ವರವಾಗಿದೆ, ಮಕ್ಕಳನ್ನು ತಮ್ಮ ಮಕ್ಕಳಂತ್ತೆ, ಕಾಳಜಿ ವಹಿಸಿ, ಪ್ರೀತಿಸಿ ಅವರನ್ನು ಈಗಿನ ಕಾಲಕ್ಕೆ ತಕ್ಕಂತೆ ಶಿಕ್ಷಣದ ಜೊತೆ ಸಂಸ್ಕ್ರತಿಯನ್ನು ಹೇಳಿಕೊಟ್ಟರೆ, ಮಗುವಿನಲ್ಲಿ ಪ್ರಗತಿ ಕಾಣುತ್ತದೆ’ ಎಂದು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವಂ|ಭಗಿನಿ ಜೊಯಿಸ್ಲಿನ್ ಹೇಳಿದರು. ಅವರು ಕುಂದಾಪುರ ಹೋಲಿ ರೋಜರಿ ಸಭಾ ಭವನದಲ್ಲಿ (30-3-19) ನೆಡೆದ ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವದ ದಿನ ಮಾತಾನಾಡುತಿದ್ದರು ‘ಅಂಥ ಪ್ರಗತಿ ನಿಮ್ಮ ಮಕ್ಕಳಲ್ಲಿ ಮುಂದೆಯು ಕಾಣ ಬೇಕಿದ್ದರೆ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸ ಬೇಕು, ಹಾಗೇ ನಮ್ಮ ಶಾಲೆ ಕಳೆದ ಕೆಲವು ವರ್ಷಗಳಿಂದ ಉತ್ತಮ ಹೆಸರನ್ನು ಗಳಿಸಿಕೊಂಡಿದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೇರಿಸ್ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿ ಉತಿರ್ಣತೆಯ ಪ್ರಮಾಣ ಪತ್ರವನ್ನು ಮಕ್ಕಳಿಗೆ ನೀಡಿ ‘ಎನೂ ಅರಿಯದ ಮಕ್ಕಳು ಇಲ್ಲಿ ಕಲಿತು ಜಾಣೆಯರಾಗಿದ್ದಾರೆ, ಇಲ್ಲಿ ಸಣ್ಣ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಥರಹದ ತರಬೇತಿಯನ್ನು ನೀಡುತ್ತೇವೆ, ಮುಂದೆಯು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಿಮ್ಮ ಮಕ್ಕಳನ್ನು ಭರ್ತಿ ಮಾಡಿದರೆ, ಇನ್ನೂ ಉತ್ತಮ ಪ್ರಗತಿ ನಿಮ್ಮ ಮಗುವಿಗೆ ದೊರಕುತ್ತದೆ’ ಎಂದು ಹೇಳಿದರು. ಕಲಿಕೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಗೌರವಿಸಲಾಯಿತು. ರೋಜರಿ ಕಿಂಡರ್ ಗಾರ್ಟನ್ ಮುಖ್ಯೋಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು. ಶಿಕ್ಷಕಿ ಅನ್ನಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.