ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ವನಮಹೋತ್ವವ – ಹುಟ್ಟುಹಬ್ಬದ ಸವಿನೆನಪಿಗಾಗಿ ಗೀಡಗಳನ್ನು ನೆಡೆಯಿರಿ- ರೇಂಜರ್ ಪ್ರಭಾಕರ್ ಕುಲಾಲ್

JANANUDI NETWORK

ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ವನಮಹೋತ್ವವ ಹುಟ್ಟುಹಬ್ಬದ ಸವಿನೆನಪಿಗಾಗಿ ಗೀಡಗಳನ್ನು ನೆಡೆಯಿರಿ- ರೇಂಜರ್ ಪ್ರಭಾಕರ್ ಕುಲಾಲ್

ಕುಂದಾಪುರ. ಜು. 30 :  ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ದಿನಾಂಕ 30 ರಂದು ಕುಂದಾಪುರ ಅರಣ್ಯ ಇಲಾಖೆಯ ಆಶ್ರಯದಲ್ಲಿ ವನಮಹೋತ್ಸವ  ಕಾರ್ಯಕ್ರಮ ನಡೆಯಿತು. ಕುಂದಾಪುರ ಅರಣ್ಯ ಇಲಾಖೆಯ ರೆಂಜರ್ ಆಫಿಸರ್ ಆಗಿರುವ ಪ್ರಭಾಕರ್ ಕುಲಾಲ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ 150ಕ್ಕೂ ಅಧಿಕ ಸಸ್ಯಗಳನ್ನು ಹಂಚಿ ವಿದ್ಯಾರ್ಥಿಗಳಿಗೆ ಸಸ್ಯಗಳನ್ನು ನೆಡುವ ಹಾಗೂ ಹೇಗೆ ಆರೈಕೆ ಮಾಡುವುದು ಎಂಬುವುದರ ಅರಿವನ್ನು ಮೂಡಿಸುತ್ತಾ ’ಹುಟ್ಟುಹಬ್ಬಕ್ಕೆ ಅನಗತ್ಯ ಖರ್ಚು ಮಾಡುವುದಕ್ಕಿಂತ ಹುಟ್ಟುಹಬ್ಬದ ಸವಿನೆನಪಿಗಾಗಿ ಒಂದೋಂದು ಗಿಡಗಳನ್ನು ನೆಟ್ಟು ಆರೈಕೆ ಮಾಡಿದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೆಂದು ತಿಳಿಸಿ’ ಸ್ಥಳಲ್ಲೆ ವಿದ್ಯಾರ್ಥಿಗಳಿಗೆ 15 ಮರಗಳ ಹೆಸರುಗಳನ್ನು ಕೇಳಿ ಹೆಚ್ಚು ಮರಗಳ ಹೆಸರುಗಳನ್ನು ಹೇಳಿದ ವಿದ್ಯಾಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೇರೆಜ್ ಶಾಂತಿರವರು ವಹಿಸಿದ್ದರು.

      ವಿಧ್ಯಾರ್ಥಿಗಳು ವನಮಹೋತ್ಸವದ ಮಹತ್ವವನ್ನು ಕಿರುನಾಟಕ ಹಾಗೂ ಹಾಡಿನ  ಮೂಲಕ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ವೆನೀಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಹರ್ಷಲ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಲ್ವಿಟಾ ವಂದಿಸಿದರು.