ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ

JANANUDI.COM NETWORK

 

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ 

 

ಕುಂದಾಪುರ, ನ.3. ರಾಷ್ಟ್ರೀಯ ಹೆದ್ದಾರಿ ಪೂರ್ತಿ ಗೊಳಿಸುವ ಸಮಯ ಎಷ್ಟೊ ದಾಟಿ ವರ್ಷಗಳೇ ಕಳೆದರೂ ಇನ್ನೂ ಕೂಡ ಪೂರ್ಣಗೊಳ್ಳದೆ, ಆಮೆ ಗತಿಯಲ್ಲಿ ನಡೆಯುವ ಕಾರಣ ಹಮ್ಮಿಕೊಂಡಿದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ ಯಶಸ್ವಿಯಾಗಿ ನಡೆಯಿತು. ಈ ಹೋರಾಟದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇದರ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಹೋರಾಟ ಸಮಿತಿಯ ಬಿ,ಕೆ ಕೀಶೊರ್, ಸಿ.ಪಿಎಮ್. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ವಕೀಲರಾದ ಗೋಪಾಲ್ ಕ್ರಷ್ಣ ಶೆಟ್ಟಿ, ಎ.ಎಸ್.ಎನ್ ಹೆಬ್ಬಾರ್, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ  ಶಶಿಧರ್ ಹೆಮ್ಮಾಡಿ ಮುತಾಂದವರು ಹೆದ್ದಾರಿ ಮತ್ತು ಪ್ಲೈ ಒವರ್ ಆಗದ ಇದ್ದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಹೆದ್ದಾರಿ ಅಸಮರ್ಕವಾಗಿ ನಡೆಯುತ್ತಿದ್ದರಿಂದ ನೂರಾರು ಜನರ ಪ್ರಾಣ ಹೋಗಿದೆ, ಎಷ್ಟೊ ಜನರಿಗೆ ಇದರಿಂದ ಅನಾನುಕೂಲವಾಗಿದೆಯೆಂದು ತಿಳಿಸಿ ಬಹು ಬೇಗನೇ ಕಾಮಾಗಾರಿ ಪೂರ್ಣಗೊಳ್ಳ ಬೇಕೆಂದು ಆಗ್ರಹಿಸಿದರು. ಹೋರಾಟದ ಸುದ್ದಿ ತಿಳಿದು ಮಾಜಿ ಸಂಸದ ಜಯಪ್ರಕಾಶ್ ಶೆಟ್ಟಿ ಆಗಮಿಸಿ, ಹೆದ್ದಾರಿಯ ಕಾಮಾಗಾರಿಯ ವಿವರ ನೀಡಿ, ಇದರ ಬಗ್ಗೆ ಮಾತನಾಡಲು ದೆಹಲಿಗೆ ತೆರೆಳೋಣ ಎಂದು ಸಲಹೆ ನೀಡಿದರು. ಸಂಬಂಧ ಪಟ್ಟ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಯವರು ಬರದೆ ಇದ್ದರೆ ರಸ್ತೆ ತಡೆ ನಡೆಸಲಾಗುವುದೆಂದು ಆಗ್ರಹಿಸಿದಾಗ. ನವಯುಗ ಕಂಪೆನಿಯ ಇಂಜಿನಿಯರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಯವರು ಬಂದು ಮಾರ್ಚ್ 30 ರೊಳಗೆ ಕಾಮಾಗಾರಿಯನ್ನು ಪೂರ್ತಿಗೊಳಿಸುತ್ತೇವೆಂದು ಸ್ರಷ್ಟಿಕರಣ ನೀಡಿದರು. ಆ ಬಳಿಕ ಸಭೆ ಮುಂದೆ ಗಡವು ಕೊಟ್ಟ ಸಮಯದಲ್ಲಿ ಕಾಮಾಗಾರಿ ಪೂರ್ಣಗೊಳಿಸದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆಯೆಂದು ತಿರ್ಮಾನ ತಗೆದುಕೊಂಡಿತು, ಸಹಾಯಕ ಕಮಿಶನರ್ ಆಗಮಿಸಿ ವಾರಕ್ಕೊಂದು ಭಾರಿ ಕಾಮಾಗಾರಿಯ ಪ್ರಗತಿಯ ಬಗ್ಗೆ ನವಯುಗ ಕಂಪೆನಿ ನನಗೆ ವರದಿಯನ್ನು ನೀಡಬೇಕೆಂದು ಆದೇಶಿಸಿದರು. ಪೊಲೀಸ್ ಇಲಾಖೆಯ ಪ್ರಕಾರ ವರ್ಷಕ್ಕೆ 100 ಅಪಘಾತಗಳಾಗುತ್ತವೆ, ಸುಮಾರು 10 ಜನ ಸಾಯುತಿದ್ದಾರೆ, 80 % ಜನ ಗಂಭೀರ ಘಾಯಗಳಾಗಿ ಜೀವನವಿಡಿ ಘಾಷಿಗೊಳ್ಳುತ್ತಾರೆಂದು ಹೋರಾಟ ಸಮಿತಿ ಹೇಳಿತು.

   ರಾಷ್ಠ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರದ ಸದಸ್ಯ ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿದರು