ಮೂಲೆ ಗುಂಪಾಗುತ್ತಿರುವ ಉತ್ತಮ ಬರಹಗಾರರನ್ನು ಹಾಗೂ ಯುವ ಬರಹಗಾರನ್ನು ಗುರ್ತಿಸಿ ಸನ್ಮಾನಿಸಿ: ವಿ. ಮುನಿರಾಜು

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಆ.29: ಮೂಲೆ ಗುಂಪಾಗುತ್ತಿರುವ ಉತ್ತಮ ಬರಹಗಾರರನ್ನು ಹಾಗೂ ಯುವ ಬರಹಗಾರನ್ನು ಗುರ್ತಿಸಿ ಸನ್ಮಾನಿಸಿ: ವಿ. ಮುನಿರಾಜು

ಕೋಲಾರ,ಆ.29: ಜಿಲ್ಲೆಯಲ್ಲಿ ಮೂಲೆ ಗುಂಪಾಗುತ್ತಿರುವ ಉತ್ತಮ ಬರಹಗಾರರನ್ನು ಹಾಗೂ ಯುವ ಬರಹಗಾರನ್ನು ಗುರ್ತಿಸುವ ನಿಟ್ಟಿನಲ್ಲಿ ವಿಕೆಎಫ್ ಸಂಸ್ಥೆ ಉತ್ತಮ ಸೇವೆಯನ್ನು ಮಾಡುತ್ತಿದೆ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ. ಮುನಿರಾಜು ಅವರು ಹೇಳಿದರು.

ಇಲ್ಲಿನ ಮುನೇಶ್ವರ ನಗರದ ಬಡಾವಣೆಯಲ್ಲಿ ವಿಶ್ವ ಮಾನವ ಕುವೆಂಪು ಫೌಂಡೇಷನ್ ವತಿಯಿಂದ ಸಾಹಿತಿ ಹಾಗೂ ಉಪನ್ಯಾಸಕ ಡಾ.ಶರಣಪ್ಪ ಗಬ್ಬೂರ್ ಅವರಿಗೆ ತಾಲ್ಲೂಕು ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿ, ಇದ್ದರಿಂದ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ಮೂಲಕ ಸಮಾಜಮುಖಿಯಾಗಿ ಹೊರತರುವ ಪ್ರಯತ್ನವನ್ನು ಈ ಸಂಸ್ಥೆ ಮಾಡುತ್ತಿದೆ ಎಂದರು.

ನಾನಾ ರೀತಿಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬರಲ್ಲೂ ಸಹ ವಿಕೆಎಫ್ ಸಂಸ್ಥೆ ಇಂದು ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಯುವ ಬರಹಗಾರ ಹಾಗೂ ಸಾಹಿತಿಗಳನ್ನು ಗುರ್ತಿಸಿ ಸನ್ಮಾನಿಸುವ ಜತೆಯಲ್ಲಿ ರಕ್ತದ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳಿಗೆ ತಕ್ಷಣ ರಕ್ತದ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಮೂಲಮ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ನುಡಿದರು.

ಫಿಟ್ನೆಸ್ ಮಾಲೀಕರ ಸಂಘದ ರಾಜ್ಯ ಅಧ್ಯಕ್ಷ ಡಾ.ಎ.ವಿ.ರವಿ ಮಾತನಾಡಿ, ಸಾಹಿತಿಗಳು ಪುಸ್ತಕಗಳನ್ನು ಬರೆಯುವ ಮೂಲಕ ಸರಳತೆ ಮತ್ತು ಸಂತೃಪ್ತಿಯನ್ನು ಸ್ವೀಕರಿಸುತ್ತಾರೆ, ಹಾಗಾಗಿ ಕವಿಗಳಿಗೆ ಈ ಸಮಾಜ ಸಮರ್ಪಕವಾದ ಸ್ಪಂದನೆ ನೀಡಬೇಕು ಎಂದರಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ಇಂತಹ ಕವಿಗಳನ್ನು ಗುರ್ತಿಸಿ, ಅವರಿಗೆ ಪೆÇ್ರೀತ್ಸಾಹವನ್ನು ನೀಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕೆಲ ಪ್ರಾರಂಭದ ಕವಿ, ಮತ್ತು ಕವಿತೆಯೇ ಬೇರೆ ನಂತರದ ಕವಿ ಮತ್ತು ಕವಿತೆ ಬೇರೆ ಅದು ಬರು ಬರುತ್ತಾ ಎತ್ತರಕ್ಕೆ ಪ್ರಬುದ್ದವಾಗಿ ಬೆಳೆಯುತ್ತದೆ ಎಂಬುದಕ್ಕೆ ಕವಿ ಮಿತ್ರ ಡಾ.ಶರಣಪ್ಪ ಗಬ್ಬೂರ್ ರವರು ವಾಸ್ತವಿಕ ಉದಾಹರಣೆ ಎಂದರೆ ತಪ್ಪಗಲಾರದು, ಅಂತಹವರನ್ನು ಗುರ್ತಿಸಿ ಪ್ರಶಸ್ತಿ ನೀಡಿರುವ ವಿ.ಕೆ.ಎಫ್ ಸಂಸ್ಥೆಗ ಅಭಿನಂದನೆಗಳನ್ನು ತಿಳಿಸಿದರು.

ಸಾಹಿತ್ಯದಲ್ಲಿ ಬದ್ದತೆಯ ಜತೆಗೆ ನಡೆ-ನುಡಿ ಎಂಬುದು ಬಹುಮುಖ್ಯವಾಗಿರಬೇಕು ಎಂದು ಜಿಲ್ಲಾ ಕನ್ನಡ ಭಾಷಾ ಉಪನ್ಯಾಸಕರ ವೇದಿಕೆ ಜಿಲ್ಲಾ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.

ನಾವು ಮಾತನಾಡುವ ಮಾತು ಇತರರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದು ಅರಿತು ವ್ಯಕ್ತಿತ್ವವನ್ನು ಇನ್ನೊಬ್ಬರ ಮನಸ್ಸಿನ ಮೇಲೆ ಶಕ್ತಿ ತುಂಬುವ ಕಾರ್ಯ ಆಗಬೇಕು ಎಂದ ಅವರು, ಕಾರ್ಯಕ್ರಮ ಮಾಡುವ ಮೂಲಕ ಸಮಾಜಮುಖಿಯಾಗಿ ನಮ್ಮನ್ನು ನಾವು ತೊಡಗಿಸಕೊಳ್ಳಬೇಕು ಆ ಕಾರ್ಯವನ್ನು ವಿಶ್ವಮಾನವ ಕುವೆಂಪು ಫೌಂಡೇಶನ್ ಮಾಡುತ್ತಿದೆ ಎಂದರು.

ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಂಘದ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಬಹಳಷ್ಟು ಬಹುಮುಖದ ಪ್ರತಿಭೆಗಳಿದ್ದು, ಅವರನ್ನು ಗೌರವಿಸುವುದು ಆದ್ಯ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರ ಕೆ.ಆರ್.ತ್ಯಾಗರಾಜ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ತಾಲ್ಲೂಕು ಕಸಾಪ ಗೌರವ ಅಧ್ಯಕ್ಷ ಪರಮೇಶ್ವರನ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಮುಖ್ಯೋಪಾಧ್ಯಾಯ್ಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಕವಿ ಕಾಳಿದಾಸ, ರೈತ ಸಂಘದ ನಾಯಕಿ ನಳಿನಿಗೌಡ, ಸಮಾಜ ಸೇವಕ ವೇಣು, ಕೆ. ಸೋಮಶೇಖರ್, ಸುಪ್ರೀಮ್, ಅರಿನಾಗನಹಳ್ಳಿ ಅಮರಾನಾಥ್, ಡಾ.ಎಚ್.ಎನ್.ಪುಷ್ಪಲತಾ, ಮಾಸ್ತೆನಹಳ್ಳಿ ನಾರಾಯಣಸ್ವಾಮಿ, ಚಿಟ್ನಹಳ್ಳಿ ರಾಮಚಂದ್ರ, ಇ.ಸಿ.ಓ ಆರ್.ಶ್ರೀನಿವಾಸನ್, ವಿಶ್ವಮಾನವ ಕುವೆಂಪು ಫೌಂಡೇಶನ್ ತಾಲ್ಲೂಕು ಘಟಕದ ಕೋಲಾರ ಅಧ್ಯಕ್ಷ ವಾಲಿಬಾಲ್ ಸೋಮು, ಸಿಮಿಯೋನ್ ಉಪಸ್ಥಿತರಿದ್ದರು.