ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಪಿ ಯು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅಣಕು ಸಿಇಟಿ ಪರೀಕ್ಷೆ 

JANANUDI.COM NETWORK
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಪಿ ಯು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅಣಕು ಸಿಇಟಿ ಪರೀಕ್ಷೆ  
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇ-ಲರ್ನಿಂಗ್ ವಿಭಾಗದ ವತಿಯಿಂದ ಪಿಯುಸಿ  ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅಭ್ಯಾಸವಾಗಲಿ ಅಂತ ಆನ್ ಲೈನ್ ಮುಖಾಂತರ ಅಣಕು ಪರೀಕ್ಷೆ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.  ಸಂಸ್ಥೆಯ ಚೇರ್ಮನ್,  ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಮಾರ್ಗಸೂಚಿ ಮೇರೆಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಮನೆಯಲ್ಲೇ ಇದ್ದು ತಟಸ್ಥ ಆಗಿರುವ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತಾಗಿದೆ. ಈವಾಗಲೇ ಹಲವಾರು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪಿ ಯು ಸಿ ಕಾಲೇಜಿನ ಪ್ರಾಂಶುಪಾಲರು ಮತ್ತು  ಉಪನ್ಯಾಸಕರು ಉತ್ತಮ ಕಾರ್ಯಕ್ರಮ ಎಂದು  ಶ್ಲ್ಯಾಘನೆ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಲಾಗಿನ್ ಪಾಸ್ವರ್ಡ್ ನೀಡುತ್ತಿದ್ದು, ಕಾಲೇಜಿನ ಪ್ರಕಾರವಾಗಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಬರೆದ ಕ್ಷಣಾರ್ಧದಲ್ಲಿ ಫಲಿತಂಶ ಲಭಿಸಲಿದ್ದು ವಿದ್ಯಾರ್ಥಿಗಳು ತಾವು ಅಭ್ಯಾಸಿಸಿದ ಪಠ್ಯಗಳನ್ನ ವಿಮರ್ಶಿಸಲು ಹಾಗೆಯೆ ಅಣಕು ಪರೀಕ್ಷೆಯಲ್ಲಿ ಏನಾದ್ರು ತಪ್ಪು ಮಾಡಿದ್ದಲ್ಲಿ ಅದನ್ನ ಸಿಇಟಿ ಪರೀಕ್ಷೆಯಲ್ಲಿ ಮರುಕಳಿಸದಂತೆ ತಿದ್ದಿಕೊಳ್ಳಲು ಸಹಕಾರಿಯಾಗಲಿದೆ.ಪರೀಕ್ಷೆ ದಿನಾಂಕ ಮತ್ತು ಸಮಯವನ್ನ ಮುಂಚಿತವಾಗಿ ತಿಳಿಸಲಾಗುತ್ತದೆ. 
 ಹಾಗೆಯೇ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೌನ್ಸೆಲ್ಲಿಂಗ್ ಕೂಡ ಮಾಡುವ ವ್ಯವಸ್ಥೆ ಮಾಡಲಾಗಿದೆ. 
          ಈ ಪರೀಕ್ಷೆಯಲ್ಲಿ ಭಾಗವಹಿಸಲು  ಇಚ್ಛಿಸುವ ವಿದ್ಯಾರ್ಥಿಗಳು +916364220020/9742078826 ಗೆ  ಕರೆಮಾಡಿ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳಬಹುದು