ಮಾರುಕಟ್ಟೆ ಅವರೆಕಾಯಿ ಮಂಡಿಗಳನ್ನು ಸ್ಥಳಾಂತರಿಸಬೇಕೆಂದು ಕಛೇರಿಗೆ ಬೀಗವನ್ನು ಜಡಿಯುವ ಮೂಲಕ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ 

 

ಮಾರುಕಟ್ಟೆ ಅವರೆಕಾಯಿ ಮಂಡಿಗಳನ್ನು ಸ್ಥಳಾಂತರಿಸಬೇಕೆಂದು ಕಛೇರಿಗೆ ಬೀಗವನ್ನು ಜಡಿಯುವ ಮೂಲಕ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

 

ಶ್ರೀನಿವಾಸಪುರ, ಪಟ್ಟಣದ ಮದ್ಯಭಾಗದಲ್ಲಿರುವ ತರಕಾರಿ ಮಾರುಕಟ್ಟೆ ಹಾಗೂ ಎಂ.ಜಿ.ರಸ್ತೆಯಲ್ಲಿರುವ ಅವರೆಕಾಯಿ ಮಂಡಿಗಳನ್ನು ಎ.ಪಿ.ಎಂ.ಸಿ. ಯಾರ್ಡಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕು ಕಛೇರಿಗೆ ಬೀಗವನ್ನು ಜಡಿಯುವ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ತಾಲ್ಲೂಕು ಕಛೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಹಸಿರು ಸೇನೆಯ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ ನಾವು ಕಳೆದ 4 ವರ್ಷಗಳಿಂದ ಅವರೇಕಾಯಿ ಮಂಡಿಗಳನ್ನು ಎ.ಪಿ.ಎಂ.ಸಿ.ಗೆ ಸ್ಥಳಾಂತರಿಸಬೇಕೆಂದು ಹಲವಾರು ಬಾರಿ ಮುಖ್ಯಾಧಿಕಾರಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಾಧಿಕಾರಿಗಳು ಅವರೇಕಾಯಿ ಮಂಡಿಯ ಮಾಲೀಕರ ಮುಲಾಜಿಗೆ ಒಳಗಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಈ ಮಂಡಿಯಿಂದ ಪಟ್ಟಣಕ್ಕೆ ಸಾವಿರಾರು ಜನ ದಿನಿ ನಿತ್ಯ ಕೆಲಸಗಳಿಗೆ ಬರುತ್ತಿದ್ದಾರೆ ಎಂ.ಜಿ.ರಸ್ತೆ ಓಡಾಡುವುದಕ್ಕೆ ಸಹಾ ಜಾಗವಿರುವುದಿಲ್ಲ ಮುಖ್ಯಾಧಿಕಾರಿ ಮೋಹನ್ ಕುಮಾರ್ ರೈತರ ಬಗ್ಗೆ ಕಾಳಜಿ ಇಲ್ಲ ನಮ್ಮ ಸಮಸ್ಯೆಗಳಿಗೂ ಸ್ಪಂದನೆ ನೀಡುತ್ತಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳದ ಪಕ್ಷದಲ್ಲಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಹೆಚ್ಚರಿಕೆಯನ್ನು ನೀಡಿದರು.
ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ ನಾನು ಕಛೇರಿಗೆ ಖುದ್ದಾಗಿ ಬೇಟಿ ನೀಡಿ ಪ್ರತಿಭಟನೆ ಮನವಿಯನ್ನು ನೀಡಿ ಬಂದೆ ಆದರೂ ಸಹಾ ಮುಖ್ಯಾಧಿಕಾರಿಗಳು ಸಭೆ ಇದೆ ಎಂದು ಸಬೂಬು ಹೇಳಿ ನಮ್ಮ ಮನವಿಯನ್ನು ಪರಿಗಣಿಸದೆ ವಿಳಂಬದೋರಣೆ ಅನುಸರಿಸುತ್ತಿದ್ದಾರೆ. ಅವರೇಕಾಯಿ ಮಂಡಿಯನ್ನು ಎ.ಪಿ.ಎಂ.ಸಿ.ಗೆ ಸ್ಥಳಾಂತರಿಸಿದರೆ ರಾಜ್ಯ ಮತ್ತು ಅಂತರರಾಜ್ಯ ಮಾರುಕಟ್ಟೆಗೆ ರಪ್ತು ಆಗುತ್ತದೆ. ವ್ಯಾಪಾರ ವಹಿವಾಟು ಚೆನ್ನಾಗಿ ಆಗುತ್ತದೆ ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಿಲ್ಲ, ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ ಈಗಾಗಲೇ ಟಮೋಟೋ ಮತ್ತು ಮಾವು ವ್ಯಾಪಾರಸ್ಥರು ಅಲ್ಲಿಗೆ ಬರುವುದರಿಂದ ತರಕಾರಿ ಮತ್ತು ಅವರೆಗೆ ಒಳ್ಳೆಯ ಬೆಲೆ ಸಿಗುತ್ತದೆ. ರೈತರು ಎಷ್ಟು ಸರಕು ತೆಗೆದುಕೊಂಡು ಹೋದರೂ ಅಲ್ಲಿ ಖರ್ಚಾಗುತ್ತದೆ. ಎ.ಪಿ.ಎಂ.ಸಿ.ಗೂ ಸಹಾ ಆದಾಯ ಬರುತ್ತದೆ ಕೂಡಲೇ ಆಕ್ಷನ್ ಮಾರುಕಟ್ಟೆಯನ್ನು ಮತ್ತು ಅವರೇಕಾಯಿ ಮಂಡಿಗಳನ್ನು ಎ.ಪಿ.ಎಂ.ಸಿ. ಗೆ ವರ್ಗಾಯಿಸಬೇಕು ಇಲ್ಲದ ಪಕ್ಷದಲ್ಲಿ ತಾಲ್ಲೂಕು ಬಂದ್‍ಗೆ ಕರೆ ನೀಡಲಾಗುವುದೆಂದು ಎಚ್ಚರಿಸಿದರು.

ಇದೇ ಸಮಯದಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಿರಸ್ಥೆದಾರ್ ನರೇಶ್ ಇದರ ಬಗ್ಗೆ 25 ನೇ ತಾರಿಖಿನ ಒಳಗೆ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ರೈತ ಮುಖಂಡರಿಗೆ ತಿಳಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಇದೇ ಸಂದರ್ಭದಲ್ಲಿ ಎ.ಪಿ.ಅಧ್ಯಕ್ಷ ರಾಜೇಂದ್ರ ಪ್ರಸಾದ್, ರೈತದ ಸಂಘದ ಪದಾಧಿಕಾರಿಗಳಾದ ಎಂ.ಬೈರಾರೆಡ್ಡಿ, ಹೆಬ್ಬಟ ರಮೇಶ್, ನಂಜುಂಡಪ್ಪ, ಶ್ರೀಧರ್, ರಾಜಣ್ಣ, ನಾರಾಯಣಸ್ವಾಮಿ, ಶ್ರೀರಾಮಪ್ಪ, ಕೆ.ಶ್ರೀನಿವಾಸರೆಡ್ಡಿ, ಕೆ.ರಾಮಕೃಷ್ಣ, ಎನ್.ವಿ.ನರಸಿಂಹಮೂರ್ತಿ, ವಿ.ಗೋಪಾಲರೆಡ್ಡಿ, ಚೌಡರೆಡ್ಡಿ, ದಿಂಬಾಲ ವೆಂಕಟಾದ್ರಿ, ಮುನಿರೆಡ್ಡಿ, ಯಲವಹಳ್ಳಿ ಮುನೇಗೌಡ, ನಾರಾಯಣರೆಡ್ಡಿ, ಹಾಗೂ ರೈತ ಮುಖಂಡರು ಹಾಜರಿದ್ದರು.