ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಮಹಿಳಾ ಕಾರ್ಮಿಕರಿಗೆ ತೊಂದರೆಯಾದರೆ ಉಗ್ರ ಹೋರಾಟ: ಕೆ.ಎಂ.ಸಂದೇಶ್
ಮಹಿಳಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೋರಿ ಕಾರ್ಖಾನೆ ಎದುರು ಪ್ರತಿಭಟನೆ
ಕೋಲಾರ: ಅಂಬೇಡ್ಕರ್ ಸೇವಾ ಸಮಿತಿಯ 120ನೇ ಹೋರಾಟವನ್ನು ಕೋಲಾರದ ಬೆತ್ತನಿ ಗ್ರಾಮದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆ ಎದುರು ಮಹಿಳಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಕೆ.ಎಂ.ಸಂದೇಶ್ ಮಾತನಾಡಿ ಮಹಿಳಾ ಕಾರ್ಮಿಕರಿಗೆ ತೊಂದರೆಯಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಹಾಗೂ ಕಾರ್ಮಿಕರಿಗೆ ವೇತನ ಭತ್ಯ ಹೆಚ್ಚಳ, ಓಟಿ, ಕೆಲಸದ ಅವಧಿ ಕಡಿತ ಹಾಗೂ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಗೆ ಸ್ಪಂದಿಸಿದ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಅತೀ ಶೀಘ್ರವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ, ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದ ಅಶ್ವಿತಾ, ರಾಮೂರ್ತಿ, ನಾಗರಾಜ್ ರವರಿಗೆ ನೋಟಿಸ್ ಜಾರಿ ಮಾಡಿದರು.
ಈ ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್, ಜಿಲ್ಲಾಧ್ಯಕ್ಷ ಕಾಮಧೇನಹಳ್ಳಿ ಶ್ರೀನಿವಾಸ್, ತೊರಲಕ್ಕಿ ನವೀನ್ ಮಹಾರಾಜ್, ಮಾಲೂರು ಸುನೀಲ್, ಮಾಲೂರು ರಾಘವೇಂದ್ರ, ಆವೇಶ್ ಹಾಜರಿದ್ದರು.