ಮಂಗಳೂರಿನಲ್ಲಿ  ಪ್ರತಿಭಟನೆಯ ಗೋಳಿಬಾರ್ ನಲ್ಲಿ  ಮೃತಪಟ್ಟುಪಟ್ಟವರ ಕುಟುಂಬಕ್ಕೆ, ಘಾಯಾಉಗಳಿಗೆ ಸಾಂತ್ವನ ಹೇಳಲು ಹೋರಟ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೇಸ್ ಮುಖಂಡರನ್ನು ವಿಮಾನ ನಿಲ್ದಾಣದಲ್ಲಿ ಬಂದಿಸಿದಕ್ಕೆ ಪ್ರತಿಭಟನೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಮಂಗಳೂರಿನಲ್ಲಿ  ಪ್ರತಿಭಟನೆಯ ಗೋಳಿಬಾರ್ ನಲ್ಲಿ  ಮೃತಪಟ್ಟುಪಟ್ಟವರ ಕುಟುಂಬಕ್ಕೆ, ಘಾಯಾಉಗಳಿಗೆ ಸಾಂತ್ವನ ಹೇಳಲು ಹೋರಟ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೇಸ್ ಮುಖಂಡರನ್ನು ವಿಮಾನ ನಿಲ್ದಾಣದಲ್ಲಿ ಬಂದಿಸಿದಕ್ಕೆ ಪ್ರತಿಭಟನೆ.

 

 

ಶ್ರೀನಿವಾಸಪುರ – ಡಿಸೆಂಬರ್ 20 ಪೌರತ್ವವನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಇಬ್ಬರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರ ಯೋಗಕ್ಷೇಮವನ್ನು ವಿಚಾರಿಸಲು ಹೋಗುತ್ತಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೇಸ್ ಮುಖಂಡರನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಸಿರುವುದನ್ನು ಖಂಡಿಸಿ ಶ್ರೀನಿವಾಸಪುರ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಇದ್ದರೂ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಪಿ.ಎಲ್.ಡಿ. ಬ್ಯಾಂಕ್ ಅದ್ಯಕ್ಷ ದಿಂಬಾಲ ಅಶೋಕ್ ಪ್ರತಿಭಟನೆ ನಡೆಸುವುದು ಸಾರ್ವಜನಿಕರ ಹಕ್ಕು ವಿನಾಕಾರಣ ಪೊಲೀಸರು 144 ಸೆಕ್ಷನ್‌ನನ್ನು ಜಾರಿಗೊಳಿಸಿ ಮೌನವಾಗಿ ಪ್ರತಿಭಟನೆ ನಡೆಸುವವರ ಮೇಲೆ ಹಲ್ಲೆ ನಡೆಸಿ ಮನಬಂದAತೆ ಗುಂಡು ಹಾರಿಸಿದ ಹಿನ್ನಲೆಯಲ್ಲಿ ಇಬ್ಬರು ಮೃತಪಟ್ಟು ಅನೇಕರು ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾರೆ.

ಮುಖಂಡರು ಎನಿಸಿಕೊಂಡವರು ಅವರ ಯೋಗಕ್ಷೇಮವನ್ನು ವಿಚಾರಿಸುವುದು ಅವರ ಕರ್ತವ್ಯ ಅದಕ್ಕಾಗಿ ಮಂಗಳೂರಿಗೆ ಹೋಗಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರನ್ನು ಬಂಧಿಸಿರುವುದು ಬಿ.ಜೆ.ಪಿ. ಸರ್ಕಾರದ ತೊಘಲಕ್ ದರ್ಬಾರವಾಗಿದೆ. ಹೀಗೆಯೇ ಗಲಭೆಗಳು ಮುಂದುವರೆದರೆ ಅದಕ್ಕೆ ಸರ್ಕಾರ ಹಾಗೂ ಪೊಲೀಸರೆ ಹೊಣೆಗಾರರಾಗುತ್ತಾರೆ. ಮೌನವಾಗಿ ಪ್ರತಿಭಟನೆ ನಡೆಸುವುದಕ್ಕೆ ಯಾಕೆ ಅವಕಾಶ ನೀಡಬಾರದು ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ರಾಯಲ್ಪಾಡು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಸಂಜಯ್‌ರೆಡ್ಡಿ ಮಾತನಾಡಿ ಮಂಗಳೂರಿನ ಗಲಭೆಗೆ ಕಾಂಗ್ರೇಸ್ ಕಾರಣ ಹಾಗೂ ಕಾಂಗ್ರೇಸ್ ಪಕ್ಷವನ್ನು ಭಯೋತ್ಪಾದನೆಗೆ ಹೋಲಿಸಿರುವ ಬಿ.ಜೆ.ಪಿ. ಶಾಸಕ ರೇಣುಕಾಚಾರ್ಯರವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೇಸ್ ಪಕ್ಷಕ್ಕೆ ಇತಿಹಾಸ ಇದೆ. ಎಲ್ಲ ಮತೀಯರನ್ನು ಗೌರವಿಸುವ ಏಕೈಕ ಪಕ್ಷ ಕಾಂಗ್ರೇಸ್. ರೇಣುಕಾಚಾರ್ಯರವರಿಗೆ ನರ್ಸ್ ಕೇಸ್ ಸಾಕ್ಷಿ ಅಂತಹವರಿAದ ಕಾಂಗ್ರೇಸ್ ಪಕ್ಷ ಕಲಿಯಬೇಕಾಗಿಲ್ಲ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ರೇಣುಕಾಚಾರ್ಯ ಕಲಿಯಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಸೋಮಯಾಜಪಲ್ಲಿ ಮಂಜುನಾಥರೆಡ್ಡಿ, ವಿ. ಅಯ್ಯಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಆಲಂಬಗಿರಿ ಮನೋಹರ್, ಕೆ.ಕೆ. ಮಂಜುನಾಥರೆಡ್ಡಿ, ಪಾಳ್ಯಗೋಪಾಲ್‌ರೆಡ್ಡಿ, ಕಲ್ಲೂರು ವೆಂಕಟರೆಡ್ಡಿ, ಜಾಮಶೆಟ್ಲು ಶ್ರೀನಿವಾಸರೆಡ್ಡಿ, ಗಂಗಾಧರ್, ವರ್ತನಹಳ್ಳಿ ವೆಂಕಟೇಶ್, ಈರಪ್ಪ, ವೆಂಕಟಮ್ಮ ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.