ಭೂಮಿ ಕುಸಿದು ಕೊಳವೆ ಬಾವಿಯೊಳಗೆ ಬಿದ್ದ ಕಾರ್ಮಿಕ ರೋಹಿತ್ :  ಸತತ ಆರು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ

JANANUDI.COM METWORK

 

ಭೂಮಿ ಕುಸಿದು ಕೊಳವೆ ಬಾವಿಯೊಳಗೆ ಬಿದ್ದ ಕಾರ್ಮಿಕ ರೋಹಿತ್ :  ಸತತ ಆರು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ 

 

 

ಕುಂದಾಪುರ, ೧೬  ಕಾಮಗಾರಿಯ ವೇಳೆ ಭೂಮಿ ಕುಸಿದ ಪರಿಣಾಮ ತೆರೆದ ಕೊಳವೆ ಬಾವಿಯೊಳಗೆ ಕಾರ್ಮಿಕ ಬಿದ್ದು ಸಿಕ್ಕಿಹಾಕಿಕೊಂಡ ಘಟನೆ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ನಡೆದಿದೆ. ಬೋರ್ ವೆಲ್ ಕೊಳೆಯೊಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯನ್ನು ಉಪ್ಪುಂದ ಫಿಶರೀಸ್ ಕಾಲೋನಿಯ ಕಂಪ್ಲಿಮನೆ ನಿವಾಸಿ ಸುಬ್ಬ ಖಾರ್ವಿ ಎಂಬುವರ ಪುತ್ರ ರೋಹಿತ್ ಖಾರ್ವಿ (35) ಎಂದು ತಿಳಿದು ಬಂದಿದೆ.

ಬೈಂದೂರು ತಾಲೂಕಿನ ಮರವಂತೆ ಎಂಬಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದ್ದು, ಎನ್ ಎಸ್ ಕೆ ಸೈಟ್ ನಲ್ಲಿ ಹ್ಯಾಂಡ್ ಪಂಪ್ ಬಳಸಲು ಕೊಳವೆ ಬಾವಿ ನಿರ್ಮಿಸಲಾಗುತ್ತಿತ್ತು. ಇದಕ್ಕಾಗಿ ಸಾಮಾನ್ಯ ಕೊಳವೆ ಬಾವಿಗಿಂತ ಸ್ವಲ್ಪ ಅಗಲವಾದ ಬಾವಿ ತೋಡಲಾಗುತ್ತಿತ್ತು. ಇದರ ಒಳಗೆ ಕೊಳವೆ ಅಳಡಿಸಲಾಗುತ್ತಿತ್ತು. ಇದೇ ಸಂದರ್ಭ ಮರವಂತೆಯಲ್ಲಿ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಕಾರ್ಮಿಕನಾಗಿದ್ದ ರೋಹಿತ್ ಖಾರ್ವಿ ಬೋರ್ ವೆಲ್ ಕೊರೆಯುವ ಸ್ಥಳಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ. ದುರ್ದೈವವಶಾತ್ ಅದೇ ವೇಳೆ ಕೊಳವೆ ಬಾವಿಯ ಸುತ್ತಲಿನ ಜಾಗ ಕುಸಿದಿದೆ, ನಿಯಂತ್ರಣ ಕಳೆದಕೊಂಡ ರೋಹಿತ್ ಸುಮಾರು 15 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

    ತಕ್ಷಣ ಅಗ್ನಿಶಾಮಕದಳ, ವೈದ್ಯರು ಸ್ಥಳಕ್ಕೆ ಆಗಮಿಸಿದ್ದು, ರೋಹಿತ್ ಖಾರ್ವಿಯನ್ನು ಮೇಲೆತ್ತಲು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಸತತ ಆರು ಗಂಟೆಗಳ ಕಾಲ ನಡೆಸಿದ ಪ್ರಯತ್ನದ ಬಳಿಕ ಕ್ರೇನ್ ಬಳಸಿ ರೋಹಿತ್ ಖಾರ್ವಿಯನ್ನು ಕೊಳವೆ ಬಾವಿಯಿಂದ ಮೇಲಕ್ಕೆತ್ತಲಾಯಿತು. ಘಟನಾ ಸ್ಥಳಕ್ಕೆ ಸಹಾಯಕ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಹರಿರಾಂ ಶಂಕರ್, ಉಪವಿಭಾಗಾಧಿಕಾರಿ ರಾಜು, ಜೆಡಿಎಸ್ ನಾಯಕ ಮನ್ಸೂರ್ ಇಬ್ರಾಹಿಂ ಮೊದಲಾದವರು ಆಗಮಿಸಿದ್ದರು. ಬಳಿಕ ರೋಹಿತ್ ಖಾರ್ವಿಯವರನ್ನು ಹೆಚ್ಚಿನ ಆರೋಗ್ಯ ತಪಾಸಣೆಗೆಗಾಗಿ ಕುಂದಾಫುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಲಾಗಿದ್ದು, ರೋಹಿತ್ ಆರೋಗ್ಯ ಸ್ಥಿರವಾಗಿದೆಯೆಂದು ತಿಳಿದು ಬಂದಿದೆ.