ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರಿಂದ ಯೋಗ ದಿನಾಚರಣೆ

JANANUDI.COM NETWORK

 

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರಿಂದ ಯೋಗ ದಿನಾಚರಣೆ 

 

 

ಕುಂದಾಪುರ, ಜೂ.22: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯಾಗಿದ್ದು, ಜೂನ್ 22 ರಂದು ಗ್ರಹಣದ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ,ತನ್ನ ಬ್ಲಡ್ ಬ್ಯಾಂಕಿನಲ್ಲಿ ಯೋಗ ದಿನಚರಣೆಯನ್ನು ಆಚರಿಸಿ, ಆಸಕ್ತರಿಗಾಗಿ ಯೋಗ ತರಬೇತಿಯನ್ನು ನಡೆಸಿದರು
ಈ ತರಬೇತಿಯನ್ನು ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಸೋನಿ ಡಿಕೋಸ್ತಾ ಇವರು ನಡೆಸಿಕೊಟ್ಟರು. ಸಭಾಪತಿ ಎಸ್.ಜಯಕರ ಶೆಟ್ಟಿ ಇವರು ದೀಪ ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ವೈ.ಸೀತಾರಾಮ್ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸದಸ್ಯರಾದ ಗಣೇಶ್ ಆಚಾರ್ಯಾ, ಜಿ.ಸಂತೋಶ್ ಕುಮಾರ್ ಶೆಟ್ಟಿ ಹಾಗೂ ಬ್ಲಡ್ ಬ್ಯಾಂಕ್ ಸಿಬಂದಿಗಳು ಪಾಲ್ಗೊಂಡಿದ್ದರು.
ಕಾರ್ಯದರ್ಶಿ ವೈ.ಸೀತಾರಾಮ್ ಶೆಟ್ಟಿ ಧನ್ಯವಾದಗಳನ್ನು ಅರ್ಪಿಸಿದರು.