JANANUDI.COM NETWORK
ಭಂಡಾರ್‍ಕಾರ್ಸ್‍ಕಾಲೇಜಿನಲ್ಲಿ ಜೀವನ ಮೌಲ್ಯ ಶಿಕ್ಷಣ ಶಿಬಿರ: ಟಿವಿಗಳಿಂದ ಸಿಗುವಂತಹ ಸಂದೇಶಗಳು ಉತ್ತಮವಾದ ಮೌಲ್ಯಗಳಿಂದ ಕೂಡಿಲ್ಲ – ಫಾ|ಸ್ಟಾನಿ ತಾವ್ರೊ
ಕುಂದಾಪುರ: ಜೀವನಮೌಲ್ಯವಿಲ್ಲದೆ ನಾವು ಬೇರೆಕಡೆಗೆ ಸಾಗುತ್ತಿದ್ದೇವೆ. ಇಂದು ಮನೆಯಲ್ಲಿ ಮಕ್ಕಳಿಗೆ ನೈತಿಕವಾದ ಮೌಲ್ಯಯುತವಾದ ಶಿಕ್ಷಣ ನೀಡುತ್ತಿಲ್ಲ. ಧಾರಾವಾಹಿ, ಟಿವಿಗಳಿಂದ ಸಿಗುವಂತಹ ಸಂದೇಶಗಳು ಉತ್ತಮವಾದ ಮೌಲ್ಯಗಳಿಂದ ಕೂಡಿಲ ್ಲಇದರ ಪರಿಣಾಮ ಮನುಷ್ಯನ ಮೇಲಾಗುತ್ತಿದೆ. ಜೀವ£ Àಕ್ರಮದಲ್ಲಿ ಬದಲಾವಣೆ ಆಗಿರುವುದರಿಂದ ಮೌಲ್ಯದಲ್ಲಿ ಕುಸಿತ ಕಾಣುತ್ತಿದ್ದು, ಧಾರ್ಮಿಕ ಗ್ರಂಥಗಳಿಂದ ಮೌಲ್ಯಯುತವಾದ ಶಿಕ್ಷಣ ಸಿಗುತ್ತವೆ. ಹೀಗಾಗಿ ಪಠ್ಯಪುಸ್ತಕಗಳಿಂದ ಜೀವನ ಮೌಲ್ಯ ಶಿಕ್ಷಣಗಳು ಸಿಗುವುದಿಲ್ಲ ಬದಲಾಗಿ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿ ಜತೆಗೆದೇವರಲ್ಲಿ ನಂಬಿಕೆ ಇರಬೇಕು ಎಂದು ಹೋಲಿ ರೋಜರಿ ಚರ್ಚ್‍ನ ಪ್ರಧಾನ ಧರ್ಮಗುರು ಅ|ವಂ| ಸ್ಟಾನಿ ತಾವ್ರೋ ಹೇಳಿದರು.
ಆಗಸ್ಟ್ 21ರಂದು ಇಲ್ಲಿನ ಭಂಡಾರ್‍ಕಾರ್ಸ್ ಪದವಿ ಹಾಗೂ ಪದವಿಪೂರ್ವ ಕಾಲೇಜು, ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ, ಮತ್ತು ಕುಂದೇಶ್ವg Àದೇವಸ್ಥಾನ ಕುಂದಾಪುರ ಇವರ ಸಹಯೋಗದಲ್ಲಿ ನಡೆದಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೆಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಕೆ.ಶಾಂತರಾಮ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಎಂ.ಗೊಂಡ, ಸಂಯೋಜP Àಅರುಣ್ ಕುಮಾರ್ ಉಪಸ್ಥಿತರಿದ್ದರು.
ಪ್ರೊ.ರಾಮಚಂದ್ರ ಸ್ವಾಗತಿಸಿದರು. ಉಪನ್ಯಾಸಕ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶುಭಕರ್ ಸದ್ಭಾವನಾ ದಿನಾಚರಣೆಯ ಪ್ರಮಾಣವಚನ ಬೋಧಿಸಿದರು.
ಸಭಾಕಾರ್ಯಕ್ರಮದ ಬಳಿಕ ಸುಬ್ರಯ ಸಂಪಾಜೆ ಮಡಿಕೇರಿ ಇವರಿಂದ ರಾಮಾಯಣದಲ್ಲಿನ ಮೌಲ್ಯಯುತ ಪ್ರಸಂಗಗಳು ವಿಷಯದಲ್ಲಿ ಉಪನ್ಯಾ¸ Àಜರಗಿತು. ಅಧ್ಯಾಪಕಿಕವಿತಾ ಅಡೂರು ಪುತ್ತೂರು ಅವರಿಂದ ಮಂಕು ತಿಮ್ಮನಕಗ್ಗದಲ್ಲಿ ಜೀವನಮೌಲ್ಯ, ವಿಶ್ರಾಂತ ಪ್ರಾಧ್ಯಾಪಕ ಡಾ.ಇ.ಮಹಾಬಲ ಭಟ್ಟಅವರಿಂದ ಮಹಾಭಾರತದಲಿ ್ಲಯಕ್ಷಪ್ರಶ್ನೆ ಪ್ರಸಂಗ ವಿಷಯದಲ್ಲಿ ವಿಶೇಷ ಉಪನ್ಯಾಸಜರಗಿತು.
ತದನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಬಿರದ ಕುರಿತುತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜೀವನ ಮೌಲ್ಯ ಶಿಕ್ಷಣ ಶಿಬಿರದ ಸಂಯೋಜಕರಾz Àಡಾ.ಎಸ್.ಆರ್.ಅರುಣಕುಮಾರ್ ವಂದಿಸಿದರು. ಕಾಲೇಜಿ£ Àಎನ್.ಎಸ್.ಎಸ್. ಅಧಿಕಾರಿ ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು