JANANUDI.COM NETWORK
ಭಂಡಾರ್ಕಾರ್ಸ್ಕಾಲೇಜಿನಲ್ಲಿ ವಿವೇಕಾನಂದರಜನ್ಮದಿನಾಚರಣೆಮತ್ತುರಾಷ್ಟ್ರೀಯಯುವಸಪ್ತಾಹಕಾರ್ಯಕ್ರಮ
ಕುಂದಾಪುರ:ನಾವು ಸಂಬಂಧ ಬೆಸೆಯುವ ಸೂಜಿಯಾಗಬೇಕು. ನಿಮ್ಮಲ್ಲಿಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಚಿಕಿತ್ಸಕ ಮನೋಭಾವದಿಂದ ನಿರಂತರ ಪ್ರಯತ್ನದಿಂದಯಶಸ್ಸನ್ನು ಪಡೆಯಬಹುದುಎಂದು ನರೇಂದ್ರಕುಮಾರಕೋಟಅವರು ಹೇಳಿದರು.
ಅವರುಇತ್ತೀಚೆಗೆ ಭಂಡಾರ್ಕಾರ್ಸ್ಕಾಲೇಜಿನಲ್ಲಿಯುಥ್ರೆಡ್ಕ್ರಾಸ್ ವಿಂಗ್, ಎನ್.ಎಸ್.ಎಸ್, ಮತ್ತು ನೆಹರುಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ನಡೆದ ವಿವೇಕಾನಂದರಜನ್ಮದಿನಾಚರಣೆಮತ್ತುರಾಷ್ಟ್ರೀಯಯುವಸಪ್ತಾಹಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರ ಮನಸ್ಸು ವಿಶಾಲವಾಗಿತ್ತು. ಅವರು ಪ್ರೀತಿ ವಿಶ್ವಾಸಕರುಣೆ, ಆತ್ಮವಿಶ್ವಾಸಗಳ ಸಂಕೇಂತವಾಘಿದ್ದರು. ವಿವೇಕಾನಂದರ ವ್ಯಕ್ತಿತ್ವವೇಒಂದು ಪ್ರೇರಣೆ. ವಿವೇಕಾನಂದರ ವಿಚಾರಧಾರೆಮತ್ತು ನಿಲುವುಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಂತಯೇ ಮೊದಲು ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳಬೇಕು.ದೊರೆಯುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಆಧ್ಯಾತ್ಮದ ಮೂಲಕ ವಿಕಸನದ ಹಾದಿಗಳನ್ನು ಹುಡುಕಿಕೊಳ್ಳಬೇಕು. ಬೆಳಕಿಗೋಸ್ಕರ ನಮ್ಮಲ್ಲಿ ನಾವೆ ಹುಡುಕಬೇಕು. ಸಹನೆ ಪ್ರೀತಿ ವಿಶ್ವಾಸಕರುಣೆ ಪ್ರಜ್ಞೆಯಕುರಿತುಯೋಚಿಸಬೇಕು. ನಿನ್ನ ಒಳಗಿನ ಅಂತರಂಗ ಮತ್ತು ಸಾಮಥ್ರ್ಯದಅರಿವಾದಾಗಜ್ಞಾನೋದಯವಾಗುತ್ತದೆ. ಅದರಿಂದಆತ್ಮಸಾಕ್ಷಾತ್ಕಾರವಾಗುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವಿದ್ದರೆಯಾವುದೇ ಸಮಸ್ಯೆಯನ್ನುಎದುರಿಸಬಹುದು ಹಲವು ಉದಾಹರಣೆಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ನೆಹರುಯುವಕೇಂದ್ರ, ಉಡುಪಿಯ ಸಮನ್ವಯಧಾಕಾರಿ ವಿಲ್ಫ್ರೆಡ್ಡಿಸೋಜಾ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದಡಾ.ಜಿ.ಎಂ.ಗೊಂಡಯುಥ್ರೆಡ್ಕ್ರಾಸ್ ವಿಂಗ್ಅಧಿಕಾರಿ ಪ್ರೊ.ಸತ್ಯನಾರಾಯಣ, ಎನ್.ಎಸ್.ಎಸ್ಅಧಿಕಾರಿರಾಮಚಂದ್ರಆಚಾರಿ ವಿದ್ಯಾರ್ಥಿಗಳಾದ ಅನುಷಾ ಮತ್ತುತನೋಜ್ಉಪಸ್ಥಿತರಿದ್ದರು.
ಉಪನ್ಯಾಸಕರಾದ ಹರ್ಷಿತಾಕಾರ್ಯಕ್ರಮ ನಿರ್ವಹಿಸಿ, ಅಮೋಘ ಸ್ವಾಗತಿಸಿ, ಸವಿತಾ ಕೆ. ವಂದಿಸಿದರು