JANANUDI.COM NETWORK
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ವಿ.ವಿ. ಟೇಬಲ್ ಟೆನಿಸ್ ಟೂರ್ನಾಮೆಂಟ್ ನಲ್ಲಿ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ಅತ್ಯುತ್ತಮ ಪ್ರದರ್ಶನ
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಪುರುಷ ಮತ್ತು ಮಹಿಳಾ 2019-20 ರ ಆಗಸ್ಟ್ 21 ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಟೇಬಲ್ ಟೆನಿಸ್ ಟೂರ್ನಾಮೆಂಟ್ ನಲ್ಲಿ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ಅತ್ಯುತ್ತಮ ಪ್ರದರ್ಶನ ನೀಡಿತು.
ಫಲಿತಾಂಶದ ವಿವರ
ಪುರುಷರ ವಿಭಾಗ; ಪ್ರಥಮ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ
ದ್ವಿತೀಯ; ಮಿಲಾಗ್ರೀಸ್ ಕಾಲೇಜು, ಕಲ್ಯಾಣಪುರ
ತೃತೀಯ; ಪೂರ್ಣಪ್ರಜ್ಞ ಕಾಲೇಜು ಉಡುಪಿ
ಮಹಿಳಾ ವಿಭಾಗ
ಪುರುಷರ ವಿಭಾಗ; ಪ್ರಥಮ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ
ದ್ವಿತೀಯ; ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರು
ತೃತೀಯ; ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಮಂಗಳೂರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ವಿಪ್ಲವ್ ರಾವ್ ಕುಂದಾಪುರದ ಟೋರ್ಪಡಸ್ ಸ್ಪೋಟ್ರ್ಸ್ ಕ್ಲಬ್‍ನ ಅಶ್ವಿನ್ ಕುಮಾರ್ ಪಡುಕೋಣೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಐಕ ನಿರ್ದೇಶಕರಾದಡಾ.ಜೆರಾಲ್ಡ್ ಸಂತೋಷ್ ಡಿಸೋಜಾ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಜೇಮ್ಸ್ ಒಲಿವೆರಾ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.