ಭಂಡಾರ್ಕಾರ್ಸ್ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್-19 ನ ಆರ್ ಟಿಪಿಸಿ ಆರ್ ಪರೀಕ್ಷೆ

JANANUDI.COM NETWORK

ಕುಂದಾಪುರ: ಅಕ್ಟೋಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್-19ನ ಆರ್ ಟಿಪಿಸಿ ಆರ್ ಪರೀಕ್ಷೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂದಾಪುರದ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ ಪ್ರಜ್ಞಾವಂತ ನಾಗರಿಕ ಸಮುದಾಯ ನಾವೆಲ್ಲರೂ ಕೋವಿಡ್-19 ರೋಗವನ್ನು ಬರದಂತೆ ತಡೆಯುವಲ್ಲಿ ನಮ್ಮೆಲ್ಲರ ಪಾತ್ರ ಬಹಳವಿದೆ. ಕೋವಿಡ್-19 ಬರದಂತೆ ತಡೆಯುವಲ್ಲಿ ಅಳವಡಿಸಿ ಕೊಂಡಿರುವಂತಹ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿ ಕೋವಿಡ್-19ನ್ನು ಕುರಿತು ಜಾಗೃತರಾಗಿ ಜನರಲ್ಲಿಯೂ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.
ಕೋವಿಡ್-19 ಬರದಂತೆ ಕೆಲವು ನೀತಿ ನಿಯಮಗಳ ಪಾಲನೆಯ ಕುರಿತು ಪ್ರತಿಜ್ಞಾ ವಿಧಿ ಭೋಧಿಸಿ ನಾವು ಕೋವಿಡ್-19 ಹೋಗಲಾಡಿಸುವಲ್ಲಿ ಕಟಿಬದ್ಧರಾಗೋಣ ಎಂದು ಕರೆ ನೀಡಿದರು.
ಕಾಲೇಜಿನ ಸುಮಾರು 144 ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಆರ್ ಟಿಪಿಸಿ ಆರ್ ಪರೀಕ್ಷೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ರೇಖಾ ಬನ್ನಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಅರೋಗ್ಯ ಸಹಾಯಕರಾದ ನಾರಾಯಣ ಮತ್ತು ಸಿಬ್ಬಂದಿ ವರ್ಗ ಕೋವಿಡ್-19 ಪರೀಕ್ಷೆ ಮಾಡುವಲ್ಲಿ ಸಹಕರಿಸಿದರು.
ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು.