ಬೋಳ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದಲ್ಲಿ ಗಮನ ಸೆಳೆದ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ “ನಮ್ಮ ಬೋಳ-ಸ್ವಚ್ಛ ಬೋಳ”

ಬೋಳ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದಲ್ಲಿ ಗಮನ ಸೆಳೆದ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ “ನಮ್ಮ ಬೋಳ-ಸ್ವಚ್ಛ ಬೋಳ”


ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ನೇತೃತ್ವದಲ್ಲಿ ಇತಿಹಾಸಿಕ ಪ್ರಸಿದ್ಧ ಬೋಳ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದಂದು ಶ್ರೀ ಕ್ಷೇತ್ರದ ಆವರಣದ ಸುತ್ತ ಕಸದ ಬುಟ್ಟಿಗಳನ್ನು ಇರಿಸಿ ಕಸ-ಕಟ್ಟಿ, ಕಾಗದ, ಪ್ಲಾಸ್ಟಿಕ್‍ಗಳನ್ನು ಕಸದ ಬುಟ್ಟಿಗೆ ಹಾಕಿ ಪರಿಸರÀ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಸಕಾರಾತ್ಮಕ ಸ್ಪಂದನೆಗಾಗಿ ವಿನಂತಿ ಮಾಡಿಕೊಳ್ಳುವ ಫಲಕವನ್ನು ಆಳವಡಿಸಲಾಯಿತು.
“ನಮ್ಮ ಬೋಳ-ಸ್ವಚ್ಛ ಬೋಳ” ಕಲ್ಪನೆಯ ಯಶಸ್ಸಿಗೆ ಜಾಗೃತಿ ಮೂಡಿಸಿದ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಸಂಸ್ಥೆಯ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದರ ರಾಮಚಂದ್ರ ಹೆಗ್ಡೆಯವರು ಪ್ರಶಂಶಿಸಿದರು.
ಈ ಸಂಧರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಲೀಲಾ ನಾರಾಯಣ ಪೂಜಾರಿ ಹಾಗೂ ಬೋಳ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘ (ರಿ.)ನ ಸದಸ್ಯರು ಮೊದಲಾದವರು ಉಪಸ್ಥಿತಿತರಿದ್ದರು.