ಬೆಳ್ಮಣಿನಲ್ಲಿ ತಾಳೆ ಮರದಲ್ಲಿ ಮೂರ್ಛೆ ಹೋಗಿ ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿ,ಆದರೂ ಪವಾಡಸದೃಶ್ಯವಾಗಿ ಬದುಕುಳಿದ ಘಟನೆ

JANANUDI.COM NETWORK

 

ಬೆಳ್ಮಣ್: ಸುಮಾರು 20 ವರ್ಷಗಳಿಂದ ಶೇಂದಿ ವ್ಯವಹಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರಹತ್ತಿ ಶೇಂದಿ ತೆಗಿಯುವ ವೇಳೆ ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿದ್ದರು, ಆದರೂ ಅವರು ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಬೆಳ್ಮಣಿನ  ಕಡಂದಲೆಯಲ್ಲಿ ನಡೆದಿದೆ.

ಕಡಂದಲೆ ಕಲ್ಲೋಳಿಯ ಸಂತೋಷ್‌ ಎಂಬಾತರು ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರ ಎರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದು  8.30 ರ ವರೆಗೆ ಹಾಗೆಯೇ ತಾಳೆ ಮರದ ದಂಡುಗಳ ನಡುವೆ ಸಿಲುಕಿದ್ದರು. ಮರದ ಪಕ್ಕ ದಾರಿಯಲ್ಲಿ ಹೋಗುವವರು ಇವರನ್ನು ಕಂಡರೂ,ಅವರು ಮರದ ಮೇಲೆ ತಮ್ಮ ಕೆಲಸವನ್ನು ಮಾಡುತಿದ್ದಾರೆಂದು ತಿಳಿದು ಸುಮ್ಮನೆ ಹೋಗುತಿದ್ದರು.

   ನಂತರ ಅನುಮಾನ ಪಟ್ಟುಜನ ಸೇರ ತೊಡಗಿದರು,ಈ ಸಂದರ್ಭ ಸಂಕಲಕರಿಯ ಪೊರ್ಲು ಲಂಚ್ ಹೋಮ್ ಮಾಲಕರಾದ ಸುಧಾಕರ್ ಸಾಲ್ಯಾನ್ ಅವರು ಶೇಂದಿ ತರಲು ಎಂದಿನಂತೆ ತಮ್ಮ ಕಾರಿನಲ್ಲಿ ಬಂದಿದ್ದಾರೆ ಆಗ ಜನ ಸೇರಿದ್ದನ್ನು ಕಂಡ ಅವರು ವಿಷಯ ತಿಳಿದು ಕೂಡಲೇ ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ,ಅದೇ ಊರಿನ ತಾಳೆ ಮರವೇರುವ ನಾರಯಣ,ದಿನೇಶ,ಅಶೋಕರನ್ನು ಮರವೇರಿಸಿ ಸಂತೋಷರನ್ನು ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ.ಅದೇ ಸಮಯಕ್ಕೆ ಅಗ್ನಿ ಶಾಮಕ ದಳದವರೂ ಬಂದು ಸಂತೋಷನ ಶರೀರಕ್ಕೆ ಬಳ್ಳಿ ಕಟ್ಟಿ ಕೆಳಗಿಳಿಸಿದ್ದಾರೆ.

ಕೆಳಗಿಸಿದ ನಂತರವೂ ಮುರ್ಛೆ ಅವಸ್ಥೆಯಲ್ಲಿದ್ದ ಸಂತೋಷನನ್ನು ಸುಧಾಕರ್ ಸಾಲ್ಯಾನ್ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಗೊಂಡಯುವಾಗ,ದಾರಿ ಮಧ್ಯೆ ಪವಾಡಸದ್ರಸ್ಯದಂತೆ ಎಚ್ಚರಗೊಂಡು ಚೇತರಿಸಿಕೊಂಡಿದ್ದಾರೆ.ಇದನ್ನು ತಿಳಿದು ಸಂತೋಷನ ಕುಟುಂಬವು ಸಂತೋಷದಲ್ಲಿ ತೇಲಿದ್ದಾರೆ. 

ಜೀವ ಉಳಿಯಲು ಕಾರಣರಾದ ಸುಧಾಕರ್ ಸಾಲ್ಯಾನ್,ನಾರಯಣ,ದಿನೇಶ,ಅಶೋಕ ಮತ್ತು ಅಗ್ನಿ ಶಾಮಕದಳದವ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.