ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಸೆ.16 : ಕೋಲಾರ ನಗರ ಟೇಕಲ್ ರಸ್ತೆಯಲ್ಲಿರುವ ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷರು ಹಾಗೂ ಕೋಲಾರ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯ ಅಧ್ಯಕ್ಷರು ಶ್ರೀಯುತ ಎಂ.ಉದಯ್ಕುಮಾರ್ರವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಉದಯಕುಮಾರ್ರವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಅಧಿಕಾರ ಲಭಿಸಲಿ, ಜನಸಮೂದಾಯಕ್ಕೆ ಉತ್ತಮ ಸೇವೆ ಮಾಡಲಿ ಎಂದು ಆಶಿಸಲಾಯಿತು.
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಪ್ರಸಾದ್ ಬಾಬು, ಕಾರ್ಯದರ್ಶಿ ಎನ್.ಪಲ್ಗುಣ, ಖಜಾಂಚಿ ಕಲಾವಿದ ವಿಷ್ಣು, ಸದಸ್ಯರುಗಳಾದ ಶಂಕರ್ ಕೊಂಡೆ, ರಾಜಾರಾವ್, ವೇಣು, ಕೃಷ್ಣ, ದೀಪು, ರಾಜೇಶ್ ಸಿಂಗ್, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.
