JANANUDI.COM NETWORK

ಬೀಜಾಡಿ: ರೋಟರಿ ಕುಂದಾಪುರ ರಿವರ್ಸೈಡ್ ಪ್ರಾಯೋಜಿತ ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇದರ ಸನದು ಪ್ರದಾನ ಸಮಾರಂಭ ಬೀಜಾಡಿ ಮಿತ್ರಸೌಧದಲ್ಲಿ ಶನಿವಾರ ಜರುಗಿತು.
ರೋಟರಿ ಸಮುದಾಯ ದಳದ ಜಿಲ್ಲಾ ಚೇರ್ಮ್ಯಾನ್ ಪ್ರಭಾಕರ ಬಿ.ಕುಂಭಾಶಿ ಅವರು ಬೀಜಾಡಿ ಗೋಪಾಡಿ ರೋಟರಿ ಸಮುದಾಯ ದಳದ ಸ್ಥಾಪಕಾಧ್ಯಕ್ಷ ಚಂದ್ರಶೇಖರ ಬೀಜಾಡಿ ಅವರಿಗೆ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಮಾನ್ಯತೆ ನೀಡಿದ ಸನದು ಪ್ರಮಾಣ ಪತ್ರವನ್ನು ಪ್ರದಾನ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕುಂದಾಪುರ ರಿವರ್ಸೈಡ್ ಅಧ್ಯಕ್ಷ ಕೌಶಿಕ್ ಯಡಿಯಾಳ್ ವಹಿಸಿದ್ದರು. ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ.ನಾಗಭೂಷಣ ಉಡುಪ, ವಲಯ 1ರ ಆರ್ಸಿಸಿ ಕೊ-ಆರ್ಡಿನೇಟರ್ ರಾಮನಾಥ ನಾಯಕ್, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ ಬೀಜಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಬೀಜಾಡಿ ರೋಟರಿ ಸಮುದಾಯ ದಳದ ನಿಯೋಜಿತ ಅಧ್ಯಕ್ಷ ಗಿರೀಶ್ ಕೆ.ಎಸ್,ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ರೋಟರಿ ಕುಂದಾಪುರ ರಿವರ್ಸೈಡ್ ಕಾರ್ಯದರ್ಶಿ ಮಂಜುನಾಥ್ ಕೆ.ಎಸ್ ಮೊದಲಾದವರು ಉಪಸ್ಥಿತರಿದ್ದರು.