ಬಿಇಒ ಕಚೇರಿ, ಸೇವಾದಳ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕನ್ನಡ ಪುಸ್ತಕ, ಪತ್ರಿಕೆ ಓದಿ ಕನ್ನಡ ಅಸ್ಮಿತೆ ಕಾಪಾಡಿ – ನಾಗರಾಜಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ತಿಂಗಳಿಗೊಂದು ಕನ್ನಡ ಪುಸ್ತಕ ಖರೀದಿಸಿ, ಕನ್ನಡ ಪುಸ್ತಕ, ಪತ್ರಿಕೆಗಳನ್ನು ನಿಯಮಿತವಾಗಿ ಓದುವ ಮೂಲಕ ಕನ್ನಡದ ಆಸ್ಮಿತೆಯನ್ನು ಕಾಪಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಭಾರತ ಸೇವಾದಳ ಜಿಲ್ಲಾ ಘಟಕವತಿಯಿಂದ ಆಯೋಜಿಸಲಾಗಿದ್ದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕನ್ನಡ ಭಾಷೆ ಮತ್ತು ಸಂಸ್ಕøತಿ, ನೆಲ ಜಲದೊಂದಿಗೆ ಪ್ರತಿಯೊಬ್ಬರೂ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಾಗ ಮಾತ್ರವೇ ಕನ್ನಡ ಸಂಸ್ಕøತಿ, ಅಸ್ಮಿತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆಯೆಂದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕನ್ನಡ ಶಾಲೆಗಳ ಅವನತಿ ಭವಿಷ್ಯದಲ್ಲಿ ಕನ್ನಡ ಬೆಳವಣಿಗೆಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಆದ್ದರಿಂದ ಕನ್ನಡ ಭಾಷೆ ಉಳಿಯಬೇಕಾದರೆ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಾದುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಬೇಕು ಎಂದರು.
ಭಾರತ ಸೇವಾದಳ ಪ್ರಧಾನ ಕಾರ್ಯದರ್ಶಿ, ರೋಟರಿ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್ ಮಾತನಾಡಿ, ಕನ್ನಡಭಾಷೆ ಎಂಟು e್ಞÁನ ಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಪ್ರಾಚೀನ ಕಾಲದಿಂದ ಆಧುನಿಕ ಕಾಲಘಟ್ಟದವರೆವಿಗೂ ಎಲ್ಲಾ ಕಾಲಕ್ಕೂ ಎಲ್ಲಾ ತಂತ್ರe್ಞÁನಕ್ಕೂ ಸಲ್ಲುತ್ತದೆಯೆಂಬುದು ನಿರೂಪಿತಗೊಂಡಿದೆ. ಕನ್ನಡ ಭಾಷೆ ಬಗ್ಗೆ ಕೀಳರಿಮೆ ತೊರೆದು ನಿತ್ಯವೂ ಭಾಷೆಯನ್ನು ಬಳಸಿ ಬೆಳೆಸಬೇಕೆಂದರು.
ಶಿಕ್ಷಕಿ ಸುಜಾತಾರಿಂದ ಕನ್ನಡ ಗೀತೆ ಗಾಯನ, ಕನ್ನಡ ಧ್ವಜಾರೋಹಣ, ನಾಡಗೀತೆ, ರಾಷ್ಟ್ರಗೀತೆ ಗಾಯನ ನೆರವೇರಿತು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾ„ಕಾರಿಗಳ ಕಚೇರಿಯಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಇಒ ಕಚೇರಿಯ ಅ„ೀಕ್ಷಕ ಗಿರೀಶ್, ವ್ಯವಸ್ಥಾಪಕ ಮುನಿಸ್ವಾಮಿಗೌಡ, ಸೇವಾದಳ ಪದಾ„ಕಾರಿಗಳಾದ ಡಿ.ಮುನೇಶ್, ಅಪ್ಪಿ ನಾರಾಯಣಸ್ವಾಮಿ, ಸಂಪತ್‍ಕುಮಾರ್, ಆರ್.ಗೋಪಾಲ್, ಆರ್.ಶ್ರೀನಿವಾಸನ್, ಫಾಲ್ಗುಣ, ಶಾಲಾ ಮುಖ್ಯ ಶಿಕ್ಷಕರು ಮಮತಾ, ಸರಸ್ವತಿ, ಉಸ್ಮಾನಿಯಾ ಮತ್ತು ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸೇವಾದಳ ಜಿಲ್ಲಾ ಸಂಘಟಿಕ ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.