ಬಸ್ರೂರು ಉದು೯ ಶಾಲೆಯಲ್ಲಿ ಗುರುನಮನ  ಕಾಯ೯ಕ್ರಮ

JANANUDI.COM NETWORK

ಬಸ್ರೂರು ಉದು೯ ಶಾಲೆಯಲ್ಲಿ ಗುರುನಮನ  ಕಾಯ೯ಕ್ರಮ

ಬಸ್ರೂರು ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ (ಉದು೯) ಇಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಕಾಯ೯ಕ್ರಮ ನಡೆಯಿತು. …
ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಅಧ್ಯಾಪಕ ಶ್ರೀ ವೀರಣ್ಣ ಶೆಟ್ಟಿಯವರು, ಡಾ|| ಎಸ್. ರಾಧಾಕೃಷ್ಣನ್ ಅವನ ಕುರಿತು ಮಾತನಾಡಿ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರನ್ನು ಸಿಬ್ಬಂದಿಗಳನ್ನು ಸನ್ಮಾನಿಸಿದರು…

ಅನಂತರ ಮಾತನಾಡಿದ ಅವರು ವಿದ್ಯಾದನ ಎನ್ನುವುದು ಶ್ರೇಷ್ಠದಾನ. ಶೈಕ್ಷಣಿಕವಾಗಿ ಹಿಂದುಳಿದರೂ ಈಗೀಗ ಮುಸ್ಲಿಂ ಬಾಂಧವರು ತಮ್ಮ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸುವಲ್ಲಿ ವಿಶೇಷ ಗಮನ ಕೊಡುತಿದ್ದಾರೆ. ಅದರಲ್ಲೂ ಉದು೯ ಶಾಲೆಯ ಇಲ್ಲಿಯ ಪೋಷಕರ ಕಾಳಜಿ ಮತ್ತು ಶಾಲೆಯ ಬಗೆಗಿನ ಪ್ರೀತಿ ಕಂಡು ನನಗೆ ಹೆಮ್ಮೆಯಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ಟ್ರಸ್ಟ್ಗಳಾದ ಮಹಮ್ಮದ್ ಜುನೇದ್, ನಿವೃತ್ತ ಮುಖ್ಯೋಪಾಧ್ಯಯ ಶಿಕ್ಷಣ ತಜ್ಞ ಶಾಬುನ ಉಸ್ತಾದ್ ಉಪಸ್ಥಿಥರಿದ್ದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬ್ದುಲ್ ಅಜೀಜ್, ಪ್ರಜೆಯ ಜೀವನದಲ್ಲಿ ಶಿಕ್ಷಕರ ಹಾಗೂ ಶಿಕ್ಷಕಣದ ಮಹತ್ವವನ್ನು ಅಭಿವ್ಯಕ್ತ ಪಡಿಸಿದರು. ತಾಯಂದಿರ ಸಮಿತಿಯ ಹಾಗೂ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕಾಯ೯ಕ್ರಮ
ಸಂಘಟಿಸಲಾಯಿತು.