ಬಡವರು ಬಂಧು ಹೆಮ್ಮೆಯ ವಕೀಲ ಸಮಾಜ ಸೇವಕ: ಶಿರ್ತಾಡಿ ವಿಲಿಯಮ್ ಪಿಂಟೊ ಇನ್ನಿಲ್ಲಾ
ಉಡುಪಿ, ಫೆ: ೧೭: ಹೆಸರಾಂತ ವಕೀಲ ಸಮಾಜ ಸೇವಕ ಬಡವರ ಬೇಸಾಯಗಾರರ ಕಾಳಜಿಗಾರ ಶಿರ್ತಾಡಿ ವಿಲಿಯಮ್ ಪಿಂಟೊ ಇಂದು ಭಾನುವಾರ ದೈವಾಧಿನರಾರೆಂದು ಅವರ ಮನೆ ಮೂಲಕ ತಿಳಿದಿ ಬಂದಿದೆ.
ಅವರಿಗೆ ೮೦ ವರ್ಷಪ್ರಾಯವಾಗಿದ್ದು, ಅವರು ಶಿರ್ತಾಡಿ ರೈಮಂಡ್ ಮತ್ತು ಮಾಗ್ದೆಲೀನ್ ಪಿಂಟೊ ಇವರ ಪುತ್ರರಾಗಿದ್ದರು. ದೇವರಾಜು ಅರಸರು ನೂತನ ಭೂ ಕಾಯ್ದೆ ಮಾಡಿದಾಗ, ಅದರ ಅನುವಾದವನ್ನು ಕನ್ನಡ ಮತ್ತು ಕೊಂಕಣಿಯಲ್ಲಿ ಮಾಡಿ ಪುಸ್ತಕ ಬರದು ಹಲವರಿಗೆ ಪ್ರಯೋಜನವನ್ನು ಸಿಗುವಂತೆ ಮಾಡಿದರು.ಅವರು ಇಷ್ಟಕ್ಕೆ ಸುಮ್ಮನ್ನೆ ಕೂತದೆ ಹಳ್ಳಿ ಹಳ್ಳಿಗೆ, ಊರಿಗೆ ಊರಿಗೆ ತೆರಳಿ ಕುಮ್ಮಟ ಮಾಡಿ ರೈತರ ಹಕ್ಕುಗಳನ್ನು ತಿಳಿಸಿ ಅವರ ಜಾಗ್ರತಿ ಮೂಡಿಸಿ ಅವರವರ ಹಕ್ಕನ್ನು ಪಡೆಯುವಂತೆ ಮಾಡಿದರು. ಮುಂದೆ ಅವರು ವಕೀಲಿ ವ್ರತ್ತಿಕಿಂತ ಹೆಚ್ಚಾಗಿ ಜನರಿಗೆ ತಮ್ಮ ಹಕ್ಕುಗಳನ್ನು ತಿಳಿಸಿ ಅವರ ಹಕ್ಕನ್ನು ಪಡೆಯುವ ಸಮಾಜ ಸೇವೆ ಕಾರ್ಯಗಳನ್ನು ಮಾಡ ತೊಡಗಿದರು.
ಅವರ ಸೇವೆಗಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದರು, ಅವರ ಕಾನೂನು ದರ್ಶನ ಪುಸ್ತಕಕ್ಕೆ ಅನೇಕ ಪ್ರಶಸ್ತಿ ದೊರಕಿದವು, ಸಂದೇಶ ಪ್ರಶಸ್ತಿಯೂ ಪಡೆಕೊಂಡರು. ರಚನಾ ಪ್ರಶಸ್ತಿ, ಸಮಾಕ ರಚನ ಪ್ರಶಸ್ತಿ ಕೂಡ ಪಡೆದುಕೊಂಡರು.
ಅವರು ತಮ್ಮ ಹೆಂಡತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವು ಫೆಬ್ರವರಿ ೧೮ ಸೋಮವಾರದಂದು ನೆಡೆಯಲಿದೆಯೆಂದು ತಿಳಿದು ಬಂದಿದೆ.