ಬಜರಂಗದಳದಕ್ಕೆ ತಿಲಾಂಜಲಿ ಇತ್ತ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಶ್ರದ್ದಾಂಜಲಿ

JANANUDI.COM NETWORK

 

 

 

 

ಬಜರಂಗದಳದಕ್ಕೆ ತಿಲಾಂಜಲಿ ಇತ್ತ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಶ್ರದ್ದಾಂಜಲಿ

 

 

 

ಕುಂದಾಪುರ:ಎ ಬಜರಂಗದಳದ ಒಂದು ಕಾಲದ ಕಟ್ಟಾ ಅಭಿಮಾನಿ  ಮಾಜಿ ಸಂಚಾಲಕರಾಗಿದ್ದ, ನಂತರ ಬಜರಂಗ ದಳದ ಅಜೆಂಡಾ ತಿಳಿದುಕೊಂಡ ನಂತರ ಪ್ರಗತಿಪರ ಚಿಂತಕರಾಗಿ ಮಾರ್ಪಟ್ಟಿದ್ದ ಮಹೇಂದ್ರ ಕುಮಾರ್(47) ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ,  ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಂತ್ಯ ಸಂಸ್ಕಾರ ನಡಯಲಿದೆ.ಎಂದು ತಿಳಿದು ಬಂದಿದೆ.

ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಹೇಂದ್ರ ಕುಮಾರ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಬಜರಂಗದಳದ ಕರ್ನಾಟಕ ರಾಜ್ಯ ಸಂಚಾಲಕರಾಗಿದ್ದ ಅವರು ವಜರಂಗದಳದ  ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿದ್ದರು.

    ಆದರೆ ಕೆಲ ಸಮಯದ ಬಳಿಕ ಅವರಿಗೆ ಬಜರಂಗ ದಳದ ಕಾರ್ಯ ವೈಖರಿ ಸರಿ ಬಿಳದೆ ಸಂಘಟನೆಯಿಂದ ಹೊರ ಬಂದಿದ್ದ  ಮಹೇಂದ್ರ ಕುಮಾರ್ ಬಜರಂಗ ದಳವನ್ನು ಕಟುವಾಗಿ ಟೀಕಿಸ ತೊಡಗಿದರು ಇಷ್ಟೇ ಅಲ್ಲದೇ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಂಘಟನೆಯನ್ನೂ ಕಟುವಾಗಿ ವಿರೋಧಿಸಿದರು ಆ ಬಳಿಕ ತೂಕದ ನ್ಯಾಯಪರ.ಪ್ತಗತಿ ಪರ ಚಿಂತಕಾರಾಗಿ ತಮ್ಮ ಸಂದೇಶಗಳನ್ನು ಸಾರುತ್ತ ಬಹಳ ಹೆಸರು ಗಳಿಸಿದ್ದರು.

   ಸಾಮಾಜಿಕ, ರಾಜಕೀಯ, ಜಾಗೃತಿ ಚಟುವಟಿಕೆಯಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಿದ್ದ ಮಹೇಂದ್ರ ಕುಮಾರ್, ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಕಾಯ್ದೆ ವಿರುದ್ಧವೂ ಹಲವಾರು ಪ್ರತಿಭಟನೆಗಳಲ್ಲಿ ಭಾವವಹಿಸಿ,ಮಾತನಾಡಿದ್ದರು. ನಮ್ಮ ಧ್ವನಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕವೂ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರು.

    ಒಂದು ಕಾಲದಲ್ಲಿ ಬಜರಂಗ ಬಿಜೆಪಿ ಗೆ ಬಹಳವಾಗಿ ಪ್ರೀತಿಸುತಿದ್ದ ಮಹೇಂದರ್ ಕೊನೆಗೆ ಅವರ ದೋರಣೆಗೆ ಬಜರಂಗ ಮತ್ತು ಬಿಜೆಪಿ ಗೆ ತಿಲಾಂಜಲಿ ಇತ್ತು ಹೊರ ಬಂದು ನೇರ ನುಡಿಯ, ಕಟು ಸತ್ಯ ಮಾತನಾಡುವ, ಕೂಲಂಕುಷವಾಗಿ ಪರಿಶೀಲಿಸಿ ಅಧ್ಯಯನ ಮಾಡಿ ಸಂದೇಶ ಸಾರಿ ಜಾಗ್ರತಿ ಸಾರುತಿದ್ದ ಹಠಾತ್ತನೆ ಸಿಡಿಲಿನಂತ್ತೆ ಮಿಂಚಿ  ಮರೆಯಾದ ಒರ್ವ ಧಿಮಂತ ವ್ಯಕ್ತಿಯನ್ನು  ನಮ್ಮ ಅಂತರ್ ಜಾಲಾ ಮಾಧ್ಯಮ ಮಹೇಂದ್ರ ಕುಮಾರಗೆ ಶ್ರದ್ದಾಂಜಲಿ ಅರ್ಪಿಸುತಿದೆ.