ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ : ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು

JANANUDI.COM NETWORK

 

 

ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ : ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು

 

 

ಕುಂದಾಪುರ, ಜ.27: ‘ಭಾರತವು ಗಣ ರಾಜ್ಯಗಳಿಂದ ಕೂಡಿದ ದೇಶವಾಗಿದೆ, ನಮ್ಮದು ನಮ್ಮ ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತವಾಗಿದೆ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ’ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಹೇಳಿದರು. ಅವರು ರವಿವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾ ರೋಹಣ ಮಾಡಿ, ಗೌರವ ರಕ್ಷೆಯನ್ನು ಸ್ವೀಕರಿಸಿ ಮಾತನಾಡಿದರು.
‘ನಮ್ಮದು ಜನರಿಂದ ಜರಿಗಾಗಿ ನಡೆಸುವ ಪ್ರಜಾ ಪ್ರಭುತ್ವಗಾಗಿದೆ. ಇದರಿಂದ ಯಾವ ಸಾಮನ್ಯ ಜನರೂ ನಮ್ಮಲ್ಲಿ ಚುನಾವಣೆಯಲ್ಲಿ ನಿಲ್ಲಬಹುದು. ಪ್ರಧಾನ ಮಂತ್ರಿಯಾಗಬಹುದು, ಉಪಮಂತ್ರಿಯಾಗ ಬಹುದು, ಮುಖ್ಯಮಂತ್ರಿಯಾಗಬಹುದು, ಅಲ್ಲದಿದ್ದರೆ, ಪಂಚಾಯತ್ ಸದಸ್ಯನಾದರೂ ಆಗಲಿಕ್ಕೆ ಸಾಧ್ಯವಿದೆ. ಅಲ್ಲದೆ ನಮ್ಮದು ಜಾತ್ಯಾತಿತ ದೇಶವಾಗಿದೆ, ಇಲ್ಲಿ ಯಾವುದೇ ರಾಷ್ಟ್ರೀಯ ಜಾತಿ ಧರ್ಮವೆಂಬುದು ಇಲ್ಲಾ. ಭಾರತದಲ್ಲಿ 3500 ಜಾತಿಗಳಿದ್ದರೂ, ಯಾವುದು ಮೇಲಲ್ಲ ಕೀಳಲಲ್ಲಾ ಯವುದೇ ವ್ರತ್ತಿ ವ್ಯಾಪರ, ವಹಿವಾಟುಗಳನ್ನು ಮಾಡಲು, ರಾಜಕೀಯಕ್ಕೆ ಇಳಿಯಲು ಯಾವುದೆ ಥರಹದ ಅಡ್ಡಿ ಇಲ್ಲಾ, ಇಂತ ಒಳ್ಳೆಯ ಅಂಶಗಳಿರುವ ಸಂವಿಧಾನ ನಮ್ಮದು. ದೀಪದ ಕೆಳಗೆ ಕತ್ತಲಿರುವ ಹಾಗೆ, ನಮ್ಮ ದೇಶದಲ್ಲಿ ಸಾಕಸ್ಟು ಸಮಸ್ಯೆಗಳಿವೆ. ಕುಟುಂಬ ರಾಜಕೀಯ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಆದರೂ ಪ್ರಜಾಪ್ರಭುತ್ವ ವರ್ಶದಿಂದ ವರ್ಷಕ್ಕೆ ಮಾಡುತ್ತಲೆ ಇದ್ದೆವೆ. ಇವತ್ತು ನಮ್ಮ ದೇಶ ಬಲಾಢ್ಯ ದೇಶಗಳಿಗೆ ಪೈಪೆÇೀಟಿ ನೀಡಿ, ವಿಜ್ನಾನ, ಭಾಹ್ಯಕಾಶ, ಆರ್ಥಿಕ ತಾಂತ್ರಿಕತೆ ಮತ್ತು ರೀತಿಯಲ್ಲಿ ಮುಂದುವರೆಯುತ್ತಾ ಇದೆ’ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು,
ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಸೀಲ್ದಾರ್ ತಿಪ್ಪೆಸ್ವಾಮಿ ಸ್ವಾಗತಿಸಿದರು. ಎ ಎಸ್ಪಿ. ಹರಿರಾಮ್ ಶಂಕರ್, ವ್ರತ್ತ ನಿರೀಕ್ಷಕ ಗೋಪಿ ಕ್ರಷ್ಣ, ಯುವಜನ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಮತ್ತು ಹಾಲಿ ಮಾಜಿ ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಪಿ.ಎಸ್.ಐ. ಹರೀಶ್ ಆರ್. ನಾಯ್ಕ್ ಗೌರವ ರಕ್ಷೆ ನೀಡಿ ಪಥ ಸಂಚಲನದ ನೇತ್ರತ್ವ ವಹಿಸಿದರು. ಪೆÇಲೀಸ್, ಗ್ರಹ ರಕ್ಷಕ ದಳ, ಅಗ್ನಿಶಾಮಕ, ಎನ್.ಸಿ.ಸಿ, ನೇವ್, ಸ್ಕೌಟ್ ಗೈಡ್ ಸೇವಾದಳದಿಂದ ಪಥ ಸಂಚಲನ ನಡೆಯ್ತಿತು. ಸಂತ ಜೋಸೆಫ್ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಪಥ ಸಂಚಲನದ ಆಕರ್ಷಣೆಯಾಯಿತು. ಬೋರ್ಡ್ ಹೈಸ್ಕೂಲಿನ ಎಲ್ಲಾ 357 ವಿದ್ಯಾರ್ಥಿಗಳು ಏಕಾ ಕಾಲದಲ್ಲಿ ನ್ರತ್ಯ ಪರ್ದರ್ಶನ ನೀಡಿದ್ದು ವೀಶೆಷವಾಗಿತ್ತು. ಹಾಗೇ ಇನ್ನಿತರ ಶಾಲೆಗಳ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಸಂತ ಮೇರಿಸ್ ಹೈಸ್ಕೂಲಿನ ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಸೋಕ್ ಕಾಮತ್ ವಂದಿಸಿದರು.