ಪ್ರಕ್ರತಿ ಸಸ್ಯ ವಿಸ್ಮಯ – ಸಂತ ಜೋಸೆಫ್ ಹಿ.ಪ್ರಾ.ಶಾಲೆ
ಬಾಳೆ ಗೀಡ ತಲೆಯಲ್ಲಿ ಕೊನೆ ಬಿಡದೆ ಕೆಳಭಾಗದ ಹೊಟ್ಟೆಯೊಳಗೆ ಕೊನೆ ಬಿಟ್ಟಿದೆ
ಕುಂದಾಪುರ, ಜ.25: ಪ್ರಕ್ರತಿ ಮತ್ತು ಸಸ್ಯಗಳಲ್ಲಿ ಎಷ್ಟೊಂದು ವಿಸ್ಮಯ ಕೂಡಿದೆ ಅಂದರೆ ಹೇಳ ತಿರದು, ಕೆಲವೊಂದು ಘಟನೆಗಳು ದೂರ ದೂರದಲ್ಲಿನ ಊರುಗಳಲ್ಲಿ ನೆಡೆಯುತ್ತದೆ. ಆದರೆ ಇಲ್ಲೆ ನಮ್ಮ ಕುಂದಾಪುರದ ಸಂತ ಜೋಸೆಫ್ ಹಿ.ಪ್ರಾ.ಶಾಲೆಯ ತೋಟದಲ್ಲಿ ಒಂದು ವಿಸ್ಮಯ ನೆಡೆದಿದೆ. ಶಾಲಾ ತೋಟದಲ್ಲಿ ಬಾಳೆ ಗೀಡವೊಂದು ತನ್ನ ತಲೆಯ ಮೇಲೆ ಕೊನೆ ಬಿಡದೆ ಗೀಡದ ತಳದಿಂದ 2 ಅಡಿ ಮೇಲೆ, ತನ್ನ ಹೊಟ್ಟೆಯಿಂದಲೇ ಕೊನೆ ಬಿಟ್ಟಿದೆ,
ಕೊನೆ ನಿಶ್ಚಳವಾಗಿ ದೊಡ್ಡ ಕೊನೆಯಾಗಿ ಬೆಳೆಯುವುದರಲಿತ್ತು, ಗರ್ಭಿಣಿ ಹೆಂಗಸು ಸಾಯುವ ಮೊದಲು ತನ್ನ ಕಂದನಿಗೆ ಜನ್ಮ ನೀಡ ಬೇಕಂಬತ್ತೆ, ಆ ಬಾಳೆ ಗೀಡ ಒಣಗಿದಂತ್ತೆ ಕಂಡು ಬಂತ್ತು. ಅದಕ್ಕೆ ಅದು ತನಗೆ ತನ್ನ ತಲೆ ಮೇಲಿಂದ ಕೊನೆ ಬಿಡುವಷ್ಟು ಸಮಯವಿಲ್ಲವೆಂದು ಅರಿತಂತ್ತೆ ಬಾಳೆ ಗೀಡ ತನ್ನ ತಳದಿಂದ, 2 ಅಡಿ ಎತ್ತರದಲ್ಲೆ ತನನ್ನು, ಗರ್ಭ ಸೀಳಿಕೊಂಡು ಕೊನೆ ಬಿಟ್ಟಿದೆ, ಆದರೆ ಆ ಕೊನೆ ಎಷ್ಟರ ಮಟ್ಟಿಗೆ ಬೆಳೆದು ಎಷ್ಟು ಬಾಳೆ ಹಣ್ಣು ಕೊಡ ಬಹುದೆಂಬ ಶಾಲಾ ಮುಖ್ಯೊಪಾಧ್ಯಾನಿ ಸಿಸ್ಟರ್ ಕೀರ್ತನ ಮತ್ತು ಶಿಕ್ಷಕರಿಗೆ ನಿರಾಶೆಯಾಗಿದೆ. ಅಷ್ಟರಲ್ಲಿ ಯಾರೊ ಪೋ ಕರಿ ಮಕ್ಕಳು, ಬಾಳೆ ಗೀಡಕ್ಕೂ ಅರ್ಜೆಂಟ್ ಇದ್ದಂತ್ತೆ ತಮಗೂ ಬಾಳೆ ಕೊನೆಯ ಅರ್ಜೆಂಟ್ ಇದ್ದಂತೆ, ಕೈಗೆಟುಕುವ ಬಾಳೆ ಕೊನೆಯನ್ನು, ಪೂರ್ಣ ರೀತಿಯಲ್ಲಿ ಬೆಳೆಯುವ ಮೊದಲೇ ಮುರಿದು ಬಿಟ್ಟಿದ್ದಾರೆ.