JANANUDI.COM NETWORK
ಪುನರುತ್ಥಾನ ಗೊಂಡ ಯೇಸು ಸ್ವಾಮಿ ಸಂತೋಷ, ಸಮಾಧಾನ ಯಶಸ್ಸು ಹಾಗೆಯೇ ಸರ್ವ ಮನಕುಲದ ಒಳಿತಿಗಾಗಿ ಕೊರೊನಾ ವೈರಸ್ ನಿವಾರಣೆ ಮಾಡಲಿ:ಫಾ.ಸ್ಟ್ಯಾನಿ ತಾವ್ರೊ
ಕೊರೊನಾ ಮಾರಕ ಪೀಡೆಯಿಂದ ಸಂಪೂರ್ಣ ಲಾಕ್ ಡೌನ್ ಆದದ್ದರಿಂದ ಬಹಳ ಪವಿತ್ರವಾದ ಫಾಸಕ ಹಬ್ಬದ ಆಚರಣೆಯನ್ನು ಭಕ್ತರು ಚರ್ಚುಗಳಲ್ಲಿ ಸೇರಿ ಎರ್ಪಡಿಸಲು ಅಸಾಧ್ಯವಾಗಿ ಭಾರತಾದ್ಯಾಂತ ಕ್ರೈಸ್ತರು ಮನೆಯಲ್ಲೇ ಸಾಮಾಜಿಕ ಜಾಲಾ ತಾಣಗಳ ಮೂಲಕ ಧರ್ಮಗುರುಗಳ ಪೂಜೆಯನ್ನು ವಿಕ್ಷೀಸಿ ಅದರಂತೆ ದೇವವಾಕ್ಯಗಳಿಗೆ ಉತ್ತರಿಸುತ್ತಾ ಆಚರಿಸಿದರು.
ಅದರಂತೆ ಕುಂದಾಪುರದಲ್ಲಿ ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಪಾಸ್ಕ ಹಬ್ಬದ ಬಲಿದಾನವನ್ನು ಅರ್ಪಿಸಿದರು. 450 ವರ್ಷದ ಚರಿತೆಯುಳ್ಳ ಕುಂದಾಪುರ ರೋಜರಿ ಮಾತ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಾಧ್ಯಮದ ಮೂಲಕ ಸಂದೇಶ ನೀಡಿದ್ದಾರೆ.
‘ಪುನರುತ್ಥಾನ ಗೊಂಡ ಯೇಸು ಸ್ವಾಮಿ ನಿಮಗೆ ಸಂತೋಷ, ಸಮಾಧಾನ ಯಶಸ್ಸು ಹಾಗೆಯೇ ಸರ್ವ ಮನಕುಲದ ಒಳಿತಿಗಾಗಿ ಕೊರೊನಾ ವೈರಸ್ ನಿವಾರಣೆ ಮಾಡಲಿ. ನಾವೂ ಕೂಡ ಈ ಮಹಾಮಾರಿ ಸಾಂಕ್ರಮಿಕ ರೋಗವು ಹರಡದಂತೆ, ಇದಕ್ಕೆ ಯಾರೂ ಬಲಿಯಾಗದಂತೆ ನಾವು ಜಾಗ್ರತೆಯನ್ನು ಮಾಡೋಣ. ವೀಶೆಷವಾಗಿ ನಮ್ಮ ನೆರೆ ಹೊರೆಯವರು ಕಷ್ಟದಲ್ಲಿ, ಉಪವಾಸ ಇದ್ದರೆ ಅವರಲ್ಲಿ ನಾವು ನಾವು ದಯೆ ತೊರೋಣ’ ಎಂದು ಅವರು ಹೇಳಿದರು
‘ಪುನರುತ್ಥಾನ ಗೊಂಡ ಯೇಸು ನಮಗೆ ಆದರ್ಶ,ತಮ್ಮ ಪಿತನ ಇಚ್ಚೆಯಂತ್ತೆ ಮನುಕುಲದ ಪಾಪದ ಕತ್ತಲೆಯಿಂದ, ಸೈತಾನನ ಮತ್ತು ಮ್ರತ್ಯುವಿನ ಪಾಶದಿಂದ ಮನುಕುಲ ಬಿಡುಗಡೆ ಹೊಂದಲು ಶಿಲಿಭೆಯ ಮರಣದ ಮುಖಾಂತರ ತನ್ನನ್ನು ಬಲಿ ಅರ್ಪಿಸಿಕೊಂಡ. ಯೇಸು ವಿದೇಯನಾಗಿ ಬಾಳಿದ, ಯೇಸುವಿನ ವಾಗ್ದಾನದಂತೆ ಪಿತನು ಯೇಸುವನ್ನು ಪುನರುತ್ಥಾನ ಗೊಳಿಸಿದ, ಮತ್ತು ಇಂದು ನಮ್ಮ ನಡುವೆ ಆತ ಜೀವಂತವಾಗಿದ್ದಾನೆ’
‘ಪುನರುತ್ಥಾನ ಗೊಂಡ ಜೀವಂತ ಯೇಸು ನಮಗೆ ಹೊಸದಾಗಿ ಜೀವ ತುಂಬುತ್ತಾನೆ, ಸಮಾಧಾನ ನೀಡುತ್ತಾನೆ, ಧೈರ್ತ ತುಂಬುತ್ತಾನೆ, ಜಯವನ್ನು ನೀಡುತ್ತಾನೆ. ಆತನು ನಮಗೆ ನೀಡಿದ ಪವಿತ್ರ ಆತ್ಮದೊಂದಿಗೆ ಬೆರೆತು ನಾವು ಭಾಗ್ಯವಂತ, ಕ್ರಪಾಪೂರಿತಾ ಜೀವನವನ್ನು ಜಿವಿಸೋಣ’ ಎಂದು ಅವರು ತಮ್ಮ ಸಂಗಡಿಗರಾದ ಧರ್ಮಗುರು ವಂ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್ ಭಕ್ತರಿಗೆ ಫಾಸ್ಕ ಹಬ್ಬದ ಸಂದೇಶವನ್ನು ನೀಡಿದ್ದಾರೆ