ವರದಿ ಮತ್ತು ಪೋಟೊಗಳು : ಜೆನ್ನಿ ಡೇಸಾ
ಪಿಯುಸ್ ನಗರ್ ಕೆಥೊಲಿಕ್ ಸ್ತ್ರೀ ಸಂಘಟನೆ ವಾರ್ಷಿಕ ಸಭೆ – ನೂತನ ಪದಾದಿಕಾರಿಗಳ ಆಯ್ಕೆ. ಅಧ್ಯಕ್ಷೆಯಾಗಿ ಜೆನ್ನಿ ಡೇಸಾ
ಪಿಯುಸ್ ನಗರ್ ಮೇ 2: ಸಂತ ಪಿಯುಸ್ ಇಗರ್ಜಿಯ ಕೆಥೊಲಿಕ್ ಸ್ತ್ರೀ ಸಂಘಟನೆಯ ವಾರ್ಷಿಕ ಸಭೆಯು ಸೋಮವಾರ ಮೇ 27 ರಂದು ಇಗರ್ಜಿಯ ಸಭಾ ಭವನದಲ್ಲಿ ನಡೆಯಿತು. ಪ್ರಾರ್ಥನಾ ವಿಧಿಯೊಂದಿಗೆ ಸಭೆ ಆರಂಭವಾಯಿತು. ಕಳೆದ ಸಾಲಿನ ಅಧ್ಯಕ್ಷೆ ಎವ್ಲಿನ್ ಫರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ರೇಶ್ಮಾ ಡಿಸೋಜಾ ವರದಿಯನ್ನು ವಾಚಿಸಿದರು. ಮೆಟಿಲ್ಡಾ ಡಿಸೋಜಾ ಖರ್ಚು ವೆಚ್ಚಗಳ ಪ್ರಸ್ತೂತ ಪಡಿಸಿದರು.
ನಂತರ 2019–20 ರ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷೆ ಯಾಗಿ ಜೆನ್ನಿ ಡೇಸಾ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷೆ ಯಾಗಿ ಮೆಟಿಲ್ಡಾ ಡಿಸೋಜಾ, ಕಾರ್ಯದರ್ಶಿಯಾಗಿ ಲವೀನಾ ಡಿಸೋಜಾ, ಸಹ ಕಾರ್ಯದರ್ಶಿಯಾಗಿ ಆಶಾ ಡಿಸೋಜಾ, ಖಜಾಂಚಿಯಾಗಿ ರೇಶ್ಮಾ ಡಿಸೋಜಾ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ನತಾಲಿನ್ ಡಿಸೋಜಾ ಹಾಗೂ ವಾರಾಡೊ ಪ್ರತಿನಿಧಿಯಾಗಿ ಪ್ರಮೀಳಾ ಡೇಸಾ ಆಯ್ಕೆಯಾದರು. ಕುಂದಾಪುರ ವಲಯದ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಪ್ರಮೀಳಾ ಡೇಸಾ ಹಾಜರಿದ್ದು,ಚುನಾವಣೆಯ ನಿಯಮಾವಳಿಗಳನ್ನು ತಿಳಿಸಿದರು. ಕೆಥೊಲಿಕ್ ಸ್ತ್ರೀ ಸಂಘಟನೆಯ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜೆನೆಟ್ ಬಾರ್ಬೊಜಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಕೊಟ್ಟು, ತಮ್ಮ ಸಂದೇಶದೊಂದಿಗೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜೆನ್ನಿ ಡೇಸಾ ಧನ್ಯವಾದವನ್ನಿತ್ತರು. ದೇವರ ಸ್ತುತಿ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು