ಪಲ್ಸ್ ಪೋಲಿಯೊ ವಿರುದ್ಧ ಜಾಗೃತಿ ಅಭಿಯಾನ ಮಕ್ಕಳಿಗೆ ಪೋಲಿಯೊ ವಿರುದ್ಧ ರಕ್ಷಣೆ ಸಿಗಲಿ-ವಿಜಯಕುಮಾರ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಜನಿಸಿದ ಪ್ರತಿ ನವಜಾತ ಶಿಶುವನ್ನು ಪೆÇೀಲಿಯೋ ವಿರುದ್ಧ ರಕ್ಷಣೆಗೊಳಪಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಹೇಳಿದರು.
ನಗರದ ಗಾಂಧಿವನದಲ್ಲಿ ಪಲ್ಸ್ ಪೋಲಿಯೊ ಅರಿವು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಡ್ಡಾಯವಾಗಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಅವರ ಆರೋಗ್ಯದ ಹಿತದೃಷ್ಟಿಯಿಂದ ಪೋಷಕರು ಮೊದಲ ಆದ್ಯತೆಯನ್ನು ನೀಡಬೇಕು ಎಂದರು.ಪೋಲಿಯೊ ರಹಿತವಾಗಿ ನಮ್ಮ ದೇಶವನ್ನು ಉಳಿಸಲು ವಿದೇಶಾಂಗ ಸಚಿವಾಲಯ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದೆ. ಈ ನಿಟ್ಟಿನಲ್ಲಿ ಪೋಲಿಯೊ ಪೀಡಿತ ವ್ಯಾ„ಗ್ರಸ್ತೇ ರಾಷ್ಟ್ರಗಳಿಂದ ನಮ್ಮ ನೆಲದಲ್ಲಿ ಕಾಲಿಡುವ ಕನಿಷ್ಠ ಆರು ವಾರಗಳ ಮುಂಚಿತವಾಗಿ ಆದರೂ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದರು.
ದೇಶದಲ್ಲಿ ಪ್ರತಿ ವರ್ಷ ಜನಿಸುವ 2.7 ಕೋಟಿ ಶಿಶುಗಳಿಗೆ ಪೋಲಿಯೊ ಯೋದಿಂದ ರಕ್ಷಣೆ ನೀಡುವುದು ಅತ್ಯಂತ ದೊಡ್ಡ ಸವಾಲು ದೇಶದಲ್ಲಿ ಯಾವ ಪೋಲಿಯೊ ಪತ್ತೆಯಾಗಿಲ್ಲ ಎಂದರು.
ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ಜನರು ಬೇಜವಾಬ್ದಾರಿ ತನವನ್ನು ತೋರದೆ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೋವಿಡ್ 19 ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮುಂದಿನ ಮೂರು ತಿಂಗಳ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಎಚ್ಚರವಹಿಸುವುದಾಗಿ ಪ್ರಮಾಣ ಸ್ಪೀಕರಿಸಲಾಯಿತು.
ಈ ಸಂದರ್ಭದಲ್ಲಿ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಇಂದು ಭಾರತ ಪೋಲಿಯೋ ಮುಕ್ತವಾಗಿದೆ ಎಂಬುದು ಸಂತಸದ ವಿಷಯವಾದರೂ, ಅಕ್ಕಪಕ್ಕದ ದೇಶಗಳಲ್ಲಿ ಇನ್ನೂ ಜೀವಂತವಾಗಿರುವುದರಿಂದ ಲಸಿಕೆ ಅಭಿಯಾನ ಮತ್ತಷ್ಟು ವರ್ಷ ಮುಂದುವರೆಸುವ ಅಗತ್ಯತೆ ಇದೆ ಎಂದರು.
ಪೋಲಿಯೋ ನಿಯಂತ್ರಣದಲ್ಲಿ ಸರ್ಕಾರದ ಜತೆಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ, ರೋಟರಿ, ಸೇವಾದಳ, ರೆಡ್‍ಕ್ರಾಸ್ ಮತ್ತಿತರ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ರೋಟೇರಿಯನ್ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್, ರೋಟೇರಿಯನ್‍ಗಳಾದ ವಿ.ಪಿ.ಸೋಮಶೇಖರ್, ಗೋಪಾಲ್ ಗೌಡ, ಆರ್ ಶ್ರೀನಿವಾಸ್, ಮಹೇಶ್ ಬಾಬು, ಸಂಪತ್, ಶ್ರೀ ರಾಮ್, ಭುವನೇಶ್ವರಿ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್, ಕಾಂಗ್ರೆಸ್ ಮುಖಂಡ ಕೆ. ಜಯದೇವ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಆರ್.ಗೋಪಾಲ್, ಯಲ್ಲಪ್ಪ ಇತರರು ಇದ್ದರು.
ಕಾರ್ಯಕ್ರಮದ ನಂತರ ಜಾಗೃತಿ ಅಭಿಯಾನ ರೇಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರೇಲಿಯಲ್ಲಿ ಮಾಲೂರು ಭಾರತ ಸೇವಾದಳ ಬ್ಯಾಂಡ್‍ಸೆಟ್ ತಂಡದ ಮಕ್ಕಳು, ಬಸವಶ್ರೀ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸೇವಾದಳ ಮತ್ತು ರೋಟರಿ ಸಂಸ್ಥೆಯವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಾಗೂ ಸಾರ್ವಜನಿಕರಿಗೆ ಮುಖಗವಸು ಶೀಲ್ಡ್, ಮಾಸ್ಕ್, ಸ್ಯಾನಿಟೈಜರ್‍ಗಳನ್ನು ಎಸ್ಸಿಲಾರ್ ಆಪ್ಟಿಕಲ್ಸ್‍ವತಿಯಿಂದ ಹಂಚಲಾಯಿತು.