ನ್ಯಾಯಾಂಗ ನಿಂದನೆ: ಅನಿಲ್ ಅಂಬಾನಿ ತಪ್ಪಿತಸ್ಥ: ನ್ಯಾಯಂಗ ನಿಂದನೆಗಾಗಿ ಒಟ್ಟು 3 ಕೋಟಿ ದಂಡ, ತಪ್ಪಿದಲ್ಲಿ ಜೈಲು ಶಿಕ್ಷೆ
ಫೆ. 20: ಎರಿಕ್ಸನ್ ಇಂಡಿಯಾ ಕಂಪೆನಿಗೆ 550 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿರುವ ವಿಚಾರದಲ್ಲಿ ರಿಲಾಯನ್ಸ್ ಕಮ್ಯೂನಿಕೇಷನ್ ನ ಕಾರ್ಯಾಕಾರಿ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ರಿಲಾಯನ್ಸ್ ಕಮ್ಯೂನಿಕೇಷನ್ ನ ಇತರ ಇಬ್ಬರು ನಿರ್ದೇಶಕರನ್ನು ನ್ಯಾಯಾಂಗ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್ ಹೇಳಿದೆಯೆಂದು ತಿಳಿದು ಬಂದಿದೆ..
ಒಂದು ತಿಂಗಳು ಒಳಗಡೆ ಎರಿಕ್ಸನ್ ಇಂಡಿಯಾ ಕಂಪೆನಿಗೆಗೆ 453 ಕೋಟಿ ರೂ. ಪಾವತಿ ಮಾಡಬೇಕು. ಅದಕ್ಕೆ ತಪ್ಪಿದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅಂಬಾನಿ ಮತ್ತು ಇತರ ಇಬ್ಬರು ನಿರ್ದೇಶಕರಿಗೆ ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟು ರಿಲಾಯನ್ಸ್ ಕಮ್ಯೂನಿಕೇಷನ್ ನ ಕಾರ್ಯಾಕಾರಿ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ರಿಲಾಯನ್ಸ್ ಕಮ್ಯೂನಿಕೇಷನ್ ನ ಇತರ ಇಬ್ಬರು ನಿರ್ದೇಶಕರನ್ನು ನ್ಯಾಯಾಂಗ ನಿಂದನೆಗಾಗೊ ಪ್ರತಿಯೊಬ್ಬರ ಮೇಲೆ ತಲಾ ಒಂದು ಕೋಟಿ ರೂ. ನ್ಯಾಯಾಂಗ ನಿಂದನೆ ದಂಡ ಹೇರಿದೆಯೆಂದು ತಿಳಿದು ಬಂದಿದೆ.. ಒಂದು ತಿಂಗಳ ಒಳಗಡೆ ಈ ದಂಡವನ್ನು ಪಾವತಿ ಮಾಡದೇ ಇದ್ದಲ್ಲಿ ಇವರುಗಳು ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಸೂಚಿಸಿದೆಯೆಂದು ತಿಳಿದು ಬಂದಿದೆ.
ಚಿತ್ರ: ಸಾಂದರ್ಭಿಕ (ಕ್ರಪೆಯಿಂದ)