ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ:- ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಧೀಕ್ಷಕರಾಗಿದ್ದ ಗೋಪಿನಾಥ್ ನಿವೃತ್ತಿ ನಂತರ ಪೂರ್ಣಪ್ರಮಾಣದ ರೈತರಾಗಿದ್ದು, ಇದೀಗ ಅವರು ಮುಳಬಾಗಿಲು ತಾಲ್ಲೂಕಿನ ಎಸ್.ಕೆಂಚನಹಳ್ಳಿಯ ತಮ್ಮ ಹೊಲದಲ್ಲಿ ಶೇಂಗಾ ಬಂಪರ್ ಬೆಳೆ ಪಡೆಯುವ ಮೂಲಕ ಮಾದರಿ ರೈತರೆನಿಸಿದ್ದಾರೆ.
ಸರ್ಕಾರಿ ಸೇವೆಯಿಂದ ನಿವೃತ್ತಿ ನಂತರ ಇದೀಗ ಕೃಷಿಕರಾಗಿರುವ ಗೋಪಿನಾಥ್ ನಿವೃತ್ತಿ ಅಂಚಿನಲ್ಲಿ ತಮ್ಮ ಪಡೆದ ಮೊದಲಬೆಳೆಯೇ ಬಂಪರ್ ಆಗಿದ್ದು, ಶೇಂಗಾ ಅತ್ಯಂತ ಸೊಂಪಾಗಿ ಬೆಳೆದಿದ್ದು, ಪ್ರತಿ ಗಿಡದಲ್ಲೂ ನೂರಾರು ಶೇಂಗಾ ಬೆಳೆಯುವ ಮೂಲಕ ಮಾದರಿ ರೈತರಾಗಿದ್ದಾರೆ.
ನಿವೃತ್ತಿ ಜೀವನ ನನಗೆ ಬೇಸರ ತರಿಸಿಲ್ಲ, ನಾನೊಬ್ಬ ಉತ್ತಮ ರೈತನಾಗುವ ಹೆಬ್ಬಯಕೆ ಈವರೆಗೂ ಸಾಧ್ಯವಾಗಿರಿಲಿಲ್ಲ, ಕೆಲಸದ ನಡುವೆ ರಜಾ ದಿನಗಳಲ್ಲಿ ಮಾತ್ರ ಕೃಷಿಗೆ ಮೀಸಲಿಟ್ಟಿದ್ದೆ, ಇದೀಗ ಪೂರ್ಣಪ್ರಮಾಣದಲ್ಲಿ ತೊಡಗಿಕೊಳ್ಳಲು ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.