ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : ನಿವಾರ್ ಚಂಡಮಾರುತವು ಜಿಲ್ಲೆಯಾದ್ಯಂತ ಮುಂಬರುವ 3 ದಿನಗಳ ಕಾಲ ಬಿರುಗಾಳಿಯಿಂದ ಕೂಡಿದ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗುವುದಾಗಿ ಭಾರತದ ಹವಮಾನ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಘಟಕದಿಂದ ತಿಳಿಸಿದ್ದು , ಈ ಸಂಬಂಧ ಜಿಲ್ಲೆಯಾದ್ಯಾಂತ ಮಳೆಯಿಂದ ಸಾರ್ವಜನಿಕ ಆಸ್ತಿ ಹಾಗೂ ಮಾನವ , ಜಾನುವಾರುಗಳ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪ್ರತಿದಿನ ಹಾನಿಯ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ತಹಶಿಲ್ದಾರರುಗಳಿಗೆ ಸೂಚಿಸಿದ್ದಾರೆ . ದಿನದ 24 + 7 ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ . ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ . ಈಗಾಗಲೇ ಕಾರ್ಯನಿರ್ವಹಿಸುತ್ತಿದೆ . ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ – 1077 , 08152-243506 ವಿಪತ್ತಿನಲ್ಲಿರುವ ಸಾರ್ವಜನಿಕರು ಕರೆ ಮಾಡಿ ತಿಳಿಸಬಹುದಾಗಿದೆ . ಕಂಟ್ರೋಲ್ ರೂಂ ನ ಸಿಬ್ಬಂದಿ ಎನ್.ಗೋವಿಂದ ರಾಜು ಮೊಬೈಲ್ ಸಂಖ್ಯೆ 9740050061 , ವಿ.ಮಂಜುನಾಥ್ ಮೊಬೈಲ್ ಸಂಖ್ಯೆ 9141577499 ಇವರನ್ನು ಸಂಪರ್ಕಿಸಬಹುದಾಗಿದೆ . ನಿಯಂತ್ರಣ ಕ್ರಮಗಳು : ತಹಶೀಲ್ದಾರರು ತಮ್ಮ ಕಛೇರಿಗಳಲ್ಲಿ ಈ ಕೂಡಲೇ 24 * 7 ಕಂಟ್ರೋಲ್ ರೂಂಗಳನ್ನು ಚಾಲನೆಗೊಳಿಸಿ ಕಛೇರಿಯ ದೂರವಾಣಿಯ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಪ್ರಚುರ ಪಡಿಸಿ , ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ತಕ್ಷಣದಲ್ಲಿ ನಿವಾರಿಸುವಂತೆ ಕ್ರಮಗಳನ್ನು ಜರುಗಿಸಬೇಕು . ತಾಲ್ಲೂಕು ಕಂಟ್ರೋಲ್ ರೂಂಗಳ ದೂರವಾಣಿ ಸಂಖ್ಯೆ ಮತ್ತು ಕಾರ್ಯನಿರ್ವಹಿಸುವ ನೌಕರರ ವಿವರಗಳು , ಮೊಬೈಲ್ ಸಂಖ್ಯೆಯ ವಿವರಗಳನ್ನು ಕೂಡಲೇ ಜಿಲ್ಲಾಧಿಕಾರಿಗಳ ಕಛೇರಿಗೆ ಕಳುಹಿಸಬೇಕು . ತಹಶೀಲ್ದಾರರು ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ಪೂರ್ವಾನುಮತಿ ಇಲ್ಲದೆ ತಮ್ಮ ಕೇಂದ್ರಸ್ಥಾನಗಳನ್ನು ಬಿಡದೆ , ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು ಸಾರ್ವಜನಿಕರಿಂದ ಸ್ವೀಕರಿಸಲಾಗುವ ಕುಂದು ಕೊರತೆಗಳು ಹಾಗೂ ಅಗತ್ಯ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು . ಜಿಲ್ಲಾ ವ್ಯಾಪ್ತಿಯ ಆಯಾ ಗ್ರಾಮ ವೃತ್ತಗಳಿಗೆ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು , ರಾಜಸ್ವ ನಿರೀಕ್ಷಕರು ಹಾಗೂ ಉಪ ತಹಶೀಲ್ದಾರರು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು ಸೂಕ್ತ ಕ್ರಮಗಳನ್ನು ಜರುಗಿಸಿ , ಹಾನಿಯ ಬಗ್ಗೆ ಪ್ರತಿದಿನ ವರದಿಯನ್ನು ತಹಶೀಲ್ದಾರರಿಗೆ ನೀಡಬೇಕು . ತುರ್ತು ಸಂದರ್ಭಗಳಲ್ಲಿ ಇತರೆ ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು . ಅತಿವೃಷ್ಟಿಯಿಂದ ಸಂಭವಿಸಲಾದ ಸಾರ್ವಜನಿಕರ ಆಸ್ತಿ ಹಾನಿ , ಮಾನವ ಅಥವಾ ಜಾನುವಾರು ಜೀವಹಾನಿ , ಬೆಳೆಹಾನಿ , ಮನೆಗಳ ಹಾನಿ ಬಗ್ಗೆ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು , ರಾಜಸ್ವ ನಿರೀಕ್ಷಕರಿಂದ ವರದಿ ಪಡೆದು , ತಾಲ್ಲೂಕುವಾರು ಕ್ರೂಢಿಕರಿಸಿ ನಿಗಧಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಪ್ರತಿದಿನ ಬೆಳಿಗ್ಗೆ 10.00 ಗಂಟೆಗೆ ಹಾಗೂ ಸಂಜೆ 4.00 ಗಂಟೆಗೆ ತಪ್ಪದೇ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದ್ದಾರೆ .ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ