JANANUDI.COM NETWORK
ನಿಮ್ಮ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ. – ವಿ.ಜಿ.ಶೆಟ್ಟಿ
ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಎಲ್ಲಾ ದೇಶಗಳಲ್ಲಿ ನಿಸ್ವಾರ್ಥ ಸೇವೆಯನ್ನು ಜನರಿಗೆ ನೀಡುತ್ತಾ ಬಂದಿದೆ. ಮಕ್ಕಳ ಕ್ಯಾನ್ಸರ್, ಅಂಧತ್ವದ ಸಮಸ್ಯೆ ಮತ್ತು ಮಧುಮೇಹ ರೋಗ ನಿವಾರಣೆಗಾಗಿ ಈ ಸಂಸ್ಥೆ ಅವಿರತ ಪ್ರಯತ್ನ ಮಾಡುತ್ತಿದ್ದು ಲಯನ್ ಸದಸ್ಯರು ನೀಡುವ ಪ್ರತಿಯೊಂದು ದೇಣಿಗೆಯ ಮುಖಾಂತರ ಒಂದು ಒಳ್ಳೆಯ ಸೇವೆಯನ್ನು ನೀಡುತ್ತಿದೆ. ನಿಮ್ಮ ಅಮೂಲ್ಯ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ ಈ ನಿಟ್ಟಿನಲ್ಲಿ 317ಸಿ ಲಯನ್ ಜಿಲ್ಲೆಯ ಸದಸ್ಯರು ಜನರ ಸೇವೆಗೆ ತಮ್ಮ ಅಮೂಲ್ಯ ಸಮಯ ಹಾಗೂ ಸ್ವಲ್ಪ ದೇಣಿಗೆಯನ್ನು ಮುಡಿಪಾಗಿಸಿರÀಬೇಕು ಎಂದು 317ಸಿ ಲಯನ್ ಜಿಲ್ಲೆಯ ಗವರ್ನರ್ ಆಗಿರುವ ಲಯನ್
ವಿ.ಜಿ. ಶೆಟ್ಟಿ ಪಿ.ಎಂ.ಜೆ.ಎಫ್‍ರವರು ಹೇಳಿದರು.
ಅವರು ಲಯನ್ಸ್ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಸೇವಾ ಸವಲತ್ತುಗಳನ್ನು ಹಸ್ತಾಂತರಿಸಿ ಸದಸ್ಯರನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಡಾ. ವಿನೋದಕುಮಾರರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 2 ಹೊಲಿಗೆಯಂತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸರಕಾರಿ ಪ್ರೌಢ ಪ್ರಾಥಮಿಕ ಶಾಲೆ ಆನಗಳ್ಳಿಗೆ ಧ್ವನಿವರ್ಧಕ, ಡಾ. ಬಿ,ಬಿ. ಹೆಗ್ಡೆ ಹಾಗೂ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿಗೆ ಮದ್ಯಾಹ್ನದ ಊಟದ ವ್ಯವಸ್ಥೆಗೆ ಧನಸಹಾಯ, ಎಚ್.ಐ.ವಿ ಪಾಸಿಟಿವ್ ಮಕ್ಕಳ ಪ್ರೋಟೀನ್‍ಯುಕ್ತ ಆಹಾರಕ್ಕೆ ರೆಡ್‍ಕ್ರಾಸ್ ಸೊಸೈಟಿಗೆ ದೇಣಿಗೆಯನ್ನು ನೀಡಲಾಯಿತು. ಶ್ರೀಮತಿ ಮೃದುಲಾ ರಮೇಶ ಶೆಟ್ಟಿ ತಮ್ಮ ತಂದೆ ತಾಯಿಯ ಸವಿ ನೆನಪಿಗಾಗಿ ನೀಡಿದ ರೂ. 10,000ವನ್ನು ವಿದ್ಯಾರ್ಥಿ ರಾಹುಲ್‍ಗೆ ನೀಡಲಾಯಿತು. ಇದಕ್ಕೆ ಮೊದಲು ಸಂಜೆ ಲಯನ್ ವಿ.ಜಿ.ಶೆಟ್ಟಿಯವರು ಚೈತನ್ಯ ವಿಶೇಷ ಶಾಲೆಯಲ್ಲಿ ಲಯನ್ ಸಿ.ಎ. ಸುಧಾಕರ ಹೆಗ್ಡೆ ದಂಪತಿಗಳ ದೊಡ್ಡ ಮೊತ್ತದ ನೆರವಿನಿಂದ ಆದ ಇಂಟರ್‍ಲಾಕ್ ವ್ಯವಸ್ಥೆಯನ್ನು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರದ ಪುನರ್‍ನವೀಕರಣಗೊಂಡ ಬಾಲಕರ ಶೌಚಾಲಯವನ್ನು ಉದ್ಘಾಟಿಸಿದ್ದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಜಾರ್ಜ್ ಸಾಮ್ಯುಯಲ್‍ರವರು ಕ್ಲಬಿನ ಚಟುವಟಿಕೆಯನ್ನು ಶ್ಲಾಘಿಸಿದರು.
ಪಿಡಿಜಿಗಳಾದ ಲಯನ್ ಪ್ರಕಾಶ ಟಿ. ಸೋನ್ಸ್, ಲಯನ್ ಕೆ.ಜಯಕರ ಶೆಟ್ಟಿ, ಪ್ರಾಂತೀಯ ಅಧ್ಯಕ್ಷರಾದ ಲಯನ್ ದಿನಕರ ಶೆಟ್ಟಿ, ವಲಯ ಅಧ್ಯಕ್ಷರಾದ ಲಯನ್ ರವಿಕಿರಣ ಡಿ. ಕೊಸ್ಟಾರವರು ಹಾಗೂ ಲಯನ್ ವಿ.ಜಿ. ಶೆಟ್ಟಿಯವರ ಪತ್ನಿ ವಿಲಾಸ ವಿ.ಜಿ. ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ
ಲ. ನವೀನ ಕುಮಾರ ಶೆಟ್ಟಿ ವರದಿವಾಚಿಸಿದರು. ಕೋಶಾಧಿಕಾರಿ ಲಯನ್ ಡಾ. ರಾಜೇಂದ್ರರವರು ವಂದಿಸಿದರು.