ನಂದಳಿಕೆ : ನಮ್ಮ ಗ್ರಾಮ-ಸ್ವಚ್ಛ ಗ್ರಾಮ ಸ್ವಚ್ಛತಾ ಕಾರ್ಯಕ್ರಮ

ವರದಿ;ವಾಲ್ಟರ್ ಮೊಂತೇರೊ

ನಂದಳಿಕೆ : ನಮ್ಮ ಗ್ರಾಮ-ಸ್ವಚ್ಛ ಗ್ರಾಮ ಸ್ವಚ್ಛತಾ ಕಾರ್ಯಕ್ರಮ

ನಂದಳಿಕೆ ಗ್ರಾಮ ಪಂಚಾಯತ್, ಮಂಗಳೂರು ರಾಮಕೃಷ್ಣ ಮಿಶನ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಸಂಯುಕ್ತ ಆಶ್ರಯದಲ್ಲಿ ನಂದಳಿಕೆ ಗ್ರಾಮ ಪಂಚಾಯತ್, ನಂದಳಿಕೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರವನ್ನು ಸ್ವಚ್ಛಗೊಳಿಸುವುದರ ಮೂಲಕ ಮಂಗಳೂರು ರಾಮಕೃಷ್ಣ ಮಿಶನ್‍ರವರು ಹಮ್ಮಿಕೊಂಡ “ನಮ್ಮ ಗ್ರಾಮ-ಸ್ವಚ್ಛ ಗ್ರಾಮ” ಸ್ವಚ್ಛತಾ ಕಾರ್ಯಕ್ರಮಕ್ಕೆ ನಂದಳಿಕೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಜಯಂತಿಯವರು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕರ್, ಗ್ರಾಮಪಂಚಾಯತ್ ಸದಸ್ಯರು, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತಿತರಿದ್ದರು.