ವರದಿ: ವಾಲ್ಟರ್ ಮೊಂತೇರೊ
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ತುಳು ಆಲ್ಬಂ ಸಾಂಗ್ ಬಿಡುಗಡೆ
ನಂದಳಿಕೆ: ಗ್ರಾಮೀಣ ಭಾಗದ ಕ್ರೀಯಾಶೀಲ ವ್ಯಕಿತ್ವದ ಯುವಕರ ತಂಡದಿಂದ ಉತ್ತಮ ಕೆಲಸ ಕಾರ್ಯಗಳು ಕೈಗೂಡಲಿದೆ. ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ವಿಶ್ವಾಸವಿದ್ದರೆ ಯಶಸ್ಸು ಸದಾ ತಮ್ಮನ್ನು ಹಿಂಬಾಲಿಸಲಿದೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ತುಳು ಆಲ್ಬಂ ಸಾಂಗ್ ಬಿಡುಗಡೆಗೊಳಿಸಿ ಮಾತನಾಡಿದರು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಫಿಲ್ಮ್ ಬಾಯ್ ಪ್ರಸುತ್ತ ಪಡಿಸುವ ಡಿಫರೆಂಟ್ ಡೈರೆಕ್ಟರ್ ಖ್ಯಾತಿಯ ಬೋಳ ಭರತ್ ಪೂಜಾರಿ ನಿರ್ದೇಶನದ “ಪನಿ ಪನಿ” ತುಳು ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮವು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಶುಕ್ರವಾರ ಜರಗಿತು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಕಾರ್ತಿಕ್ ಮೂಲ್ಕಿ, ಸಂಗೀತಗಾರ ರಂಜಿತ್, ಸಾಹಿತ್ಯ ರಚನೆಗಾರ್ತಿ ಸುಷ್ಮಾ ಎಸ್. ಪೂಜಾರಿ, ನಟ ವೇಣು ಕಾರ್ಕಳ, ನಟಿ ಚರಿಷ್ಮಾ ಪೂಜಾರಿ ಹಾಗೂ ಪ್ರವೀಣ್ ಪೂಜಾರಿ, ದೀಪು ಮೊದಲಾದವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಕಾರ್ಯದರ್ಶಿ ವಂದಿಸಿದರು.