ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:: ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ

ವರದಿ: ವಾಲ್ಟರ್ ಮೊಂತೇರೊ

 

 

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:: ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ

 

 

ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಜೇಸಿಐ ಬೆಳ್ಮಣ್ಣು, ಯುವಜೇಸಿ ವಿಭಾಗದ ಸಹಯೋಗದಲ್ಲಿ ನಂದಳಿಕೆ ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಆಡಳಿತ ಕಛೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು.
ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಇಂದಾರು ಸತ್ಯನಾರಾಯಣ ಭಟ್ ನಂದಳಿಕೆ ವರಕವಿ ಮುದ್ದಣನ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪುಷ್ಪರ್ಚನೆ ಸಲ್ಲಿಸುವ ಮೂಲಕ ನಂದಳಿಕೆ ವರಕವಿ ಮುದ್ದಣನ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ನಂದಳಿಕೆಯ ಪುಣ್ಯ ಮಣ್ಣಿನಲ್ಲಿ ಜನಿಸಿದ ಮುದ್ದಣ (ಲಕ್ಷ್ಮೀನಾರಾಯಣಪ್ಪ) ನಂದಳಿಕೆಯ ಹೆಸರನ್ನು ಸಾಹಿತ್ಯ ಲೋಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರಿಸುವಂತೆ ಮಾಡಿದ ಮಹಾನ್ ಸಾಧಕ. ಅವರು 32 ವರ್ಷ ಮಾತ್ರ ಬದುಕಿದರೂ, ಜೀವನವಿಡಿ ಕಹಿಯುಂಡವರೂ, ಸಾರಸ್ವತ ಲೋಕಕ್ಕೆ ಮಹಾನ್ ಕೃತಿಗಳನ್ನು ನೀಡಿದ ಹಿರಿಮೆಗೆ ಪಾತ್ರರಾಗಿರುವ ಅವರು ಶ್ರೀ ರಾಮಾಶ್ವಮೇಧ ಕೃತಿ, ಶ್ರೀ ರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ಮಹಾಕಾವ್ಯಗಳು, ರತ್ನಾವತಿ ಕಲ್ಯಾಣ, ಕುಮಾರ ವಿಜಯ ಯಕ್ಷಗಾನ ಕೃತಿಗಳು ಮುದ್ದಣನ ಹೆಸರನ್ನು ಚಿರಸ್ಥಾಯಿಯಾಗಿಸಿವೆ ಎಂದರು.
ಈ ಸಂಧರ್ಭದಲ್ಲಿ ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪದಾಧಿಕಾರಿಗಳಾದ ನಂದಳಿಕೆ ರಾಜೇಶ್ ಕೊಟ್ಯಾನ್, ನಂದಳಿಕೆ ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ ಗೋಳಿಕಟ್ಟೆ, ಬೆಳ್ಮಣ್ಣು ಯುವಜೇಸಿ ವಿಭಾಗದ ಅಧ್ಯಕ್ಷ ಸಂದೀಪ್ ಕುಲಾಲ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಜೊತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಪೂಜಾರಿ, ಸುಲೋಚನಾ ಕೋಟ್ಯಾನ್, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.