JANANUDI.COM NETWORK

ತುಳು ಚಿತ್ರರಂಗದ ನಟನೊಬ್ಬನ ಕೊಲೆ ನಡೆದಿದೆ. ಚಾಲಿಪೋಲಿಲು ಚಿತ್ರದಲ್ಲಿ ನಟಿಸಿದ್ದ ತುಳು ನಟ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಬಿ ಸಿ ರೋಡ್ ನ ಸಮೀಪದ ಭಂಡಾರಿಬೆಟ್ಟು ವಾಸ್ತಿ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯವಿದ್ದ ಸುರೇಂದ್ರ ಬಂಟ್ವಾಳ ನಿನ್ನೆಯಿಂದಲೇ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದು, ಮನೆ ಬಳಿ ಬಂದ ಪೋಲಿಸರಿಗೆ ಸುರೇಂದ್ರ ಅವರ ಶವ ಪತ್ತೆಯಾಗಿದೆ. ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಎರಡು ವರ್ಷಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಸಾರ್ವಜನಿಕವಾಗಿ ತಲಾವಾರ್ ಝಳಪಿಸುವ ಮೂಲಕ ಸುರೇಂದ್ರ ಬಂಟ್ವಾಳ್ ಕುಖ್ಯಾತಿ ಪಡೆದಿದ್ದರು