ತಲ್ಲೂರು ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಮೂಳೆ ತಪಾಸಣೆ ಕಾರ್ಯಗಾರ

ತಲ್ಲೂರು ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಮೂಳೆ ತಪಾಸಣೆ ಕಾರ್ಯಗಾರ


ಕುಂದಾಪುರ,ಎ.12: ತಲ್ಲೂರಿನ ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಅಶ್ರಯದಲ್ಲಿ ಕಾರಿತಾಸ್ ಇಂಡಿಯಾ ಮತ್ತು ಸಂಪದ ಉಡುಪಿ ಧರ್ಮಕೇಂದ್ರದ “ಸುರಕ್ಷ” ಆರೋಗ್ಯ ಮತ್ತು ನೈರ್ಮಲೀಕರಣ ಕಾರ್ಯಕ್ರದಡಿ ಮೇಸಸ್ ಒರ್ಗಾಯ್ನಿಕ್ ಪೈ.ಲಿ.’ ಇವರಿಂದ ಮೂಳೆಗಳ ತಪಾಸಣೆ ಕಾರ್ಯಗಾರ ನೆಡೆಯಿತು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ, ಮಾಜಿ ಉಡುಪಿ ನಗರಸಭೆಯ ಸದಸ್ಯ ಪ್ರಕಾಶ್ ಅಂದ್ರಾದೆ ಕಾರ್ಯಗಾರವನ್ನು ಉದ್ಘಾಟಿಸಿ ‘ನಮ್ಮ ಹಿರಿಯವರು ಕ್ರಷಿ ಕೆಲಸ, ಬಟ್ಟೆ ಒಗೆಯುವುದು, ನೆಲ ಒರೆಸುವುದು, ಇಂತಹ ಶರೀರಕ್ಕೆ ವ್ಯಾಯಮ ಆಗುವಂತ ಕೆಲಸಗಳನ್ನು ಮಾಡುತಿದ್ದರು. ಹಾಗಾಗಿ ಅವರ ಆರೋಗ್ಯ ಉತ್ತಮವಿದ್ದು ಮೂಳೆಗಳು ಗಟ್ಟಿಯಾಗಿರುತಿದ್ದವು. ಆದರೆ ಈಗೀನ ಯಾಂತ್ರೀಕ ಜೀವನದಲ್ಲಿ ಶರೀರಕ್ಕೆ ಬೇಕಾದ ಕೆಲಸಗಳು ಕಡಿಮೆಯಾಗಿವೆ, ಹಾಗಾಗಿ ಪ್ರಾಯ ಕಳೆದಂತ್ತೆ ಮೂಳೆಗಳ ಕ್ಯಾಲ್ಸಿಯಂ ಸಾಂದ್ರತೆ ಕಡಿಮೆಯಾಗಿ ಅಪಾಯದ ಮಟ್ಟಕ್ಕೆ ಬರುತ್ತವೆ. ನಮ್ಮಲ್ಲಿನ ಪರೀಕ್ಷಾ ಯಂತ್ರಗಳಿಂದ ಮೂಳೆ ಸಾಂದ್ರತೆ ಮತ್ತು ಮೂಳೆಗಳ ಶಕ್ತಿಯನ್ನು ತಿಳಿದುಕೊಳ್ಳ ಬಹುದು, ಮಾತ್ರವಲ್ಲಾ ದೇಹಕ್ಕೆ ಬೇಕಾದ ಕೊಲೆಸ್ಟ್ರೊಲ್ ಕೊರತೆ ಮತ್ತು ಅಗತ್ಯತೆ ಕಂಡುಕೊಳ್ಳ ಬಹುದು, ಇಂತಹ ಶಿಬಿರಗಳಿಂದ ಹಲವಾರು ಜನರಿಗೆ ಪ್ರಯೋಜನವಾಗಿದ್ದು, ಇಂತಹ ಕಾರ್ಯಗಾರಗಳಿಗೆ ತುಂಬ ಬೇಡಿಕೆಯಿದೆ’ ಎಂದು ತಿಳುವಳಿಕೆ ನೀಡಿದರು.
ಉಡುಪಿ ಧರ್ಮ ಕೇಂದ್ರದ ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ಹಾಗೂ ಕಾರ್ಯಕ್ರಮದ ಸಂಚಾಲಕಿ ವಂ|ಭಗಿನಿ ಜಾನೆಟ್ ಫೆರ್ನಾಂಡಿಸ್ ಇವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮಕ್ಕೆ ಫಾತಿಮಾ ಸಿಸ್ಟರ್ ಮೇಳದ ಬೆಂಗಳೂರಿನ ಪೆÇ್ರವಿನ್ಸಿಯಲ್ ವಂ|ಭಗಿನಿ ಲಿಲ್ಲಿ ಮೇರಿ ಅಧ್ಯಕ್ಷತೆ ವಹಿಸಿದ್ದರು, ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ವ್ಯವಸ್ಥಾಪಕಿ ವಂ|ಭಗಿನಿ ಲಿಜ್ಜಿ, ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ವಂ|ಭಗಿನಿ ತೆರೆಸಾ ಮತ್ತು ವಂ|ಭಗಿನಿ ವಿಜಯಾ ಉಪಸ್ಥಿತರಿದ್ದರು. ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಶಿಕ್ಷಕಿಯರು ಪ್ರಾಥನೆಯನ್ನು ನೆಡೆಸಿಕೊಟ್ಟರು. ಕಾರ್ಯಗಾರದಲ್ಲಿ ಮೂಳೆ ತಪಾಸಣೆಯನ್ನು ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಯ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಮತ್ತು ಮಧುಕೇಶ್ವರ್ ನೆಡೆಸಿಕೊಟ್ಟರು. ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ವಂ|ಭಗಿನಿ ಲೀಲಾ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.