ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪು
ಕೋಲಾರ : ಟೈಪ್ 2 , ಟೈಪ್ -3 ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡಲು ಸರ್ಕಾರದಿಂದ ಒತ್ತು ನೀಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ ಶೆಟ್ಟರ ಅವರು ತಿಳಿಸಿದರು . ಇಂದು ಜಿಲ್ಲೆಯ ಕೆ.ಜಿ.ಎಫ್ ತಾಲ್ಲೂಕಿನ ಭಾರತ್ ಗೋಲ್ಡ್ ಮೈನ್ಸ್ ಲಿನ ಸ್ಥಳ ವೀಕ್ಷಣೆ ಮಾಡಿ ನಂತರ ಬಿ.ಇ.ಎಂ.ಎಲ್ ಗೆಸ್ಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು , ಬಿಜಿಎಂಎಲ್ ಒಡೆತನದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಲಾಗುವುದು ಎಂದರು . ಬಿಜಿಎಂಎಲ್ಗೆ ಸುಮಾರು 12 ಸಾವಿರ ಎಕರೆ ನೀಡಲಾಗಿತ್ತು , ಇದರಲ್ಲಿ 3200 ಎಕರೆಯನ್ನು ಯಾವುದಕ್ಕೂ ಉಪಯೋಗಿಸಿಲ್ಲ . ಈ 320೧ ಎಕರೆಯನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ , ಈ ಭೂಮಿಯನ್ನು ಕೆಐಎಡಿಬಿ ನೀಡಿ ಕೈಗಾರಿಕಾ ಅಭಿವೃದ್ಧಿ ಮಾಡಲಾಗುವುದು . ಈ ಬಾಗದಲ್ಲಿ ಚೆನೈ ಕಾರಿಡಾರ್ ನಿರ್ಮಾಣವಾಗುತ್ತಿರುವುದರಿಂದ ಮತ್ತು ಚೆನೈಗೆ ಹತ್ತಿರ ಇರುವುದರಿಂದ ಕೈಗಾರಿಕಾ ಅಭಿವೃದ್ದಿ ಉತ್ತಮ ಅವಕಾಶಗಳಿವೆ . ಬೆಂಗಳೂರಿನಲ್ಲಿ ಈಗಾಗಲೇ ಹೆಚ್ಚು ಕೈಗಾರಿಕೆಗಳಿವೆ . ಎಲ್ಲಾ ದೃಷ್ಟಿಗಳಿಂದ ಕೈಗಾರಿಕಾ ಕೆ.ಜಿ.ಎಫ್ ಸ್ಥಳವಾಗಿದೆ ಎಂದು ತಿಳಿಸಿದರು . ಈ ಪ್ರದೇಶದಲ್ಲಿ ಖನಿಜಗಳ ಮೈನಿಂಗ್ಗೆ ಅವಕಾಶವಿದ್ದು , ಖನಿಜ ಸಂಸ್ಕೂಲಗಳು ಇಲ್ಲದ ಪ್ರದೇಶವನ್ನು ಕೆಐಎಡಿಬಿ ಗೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ . ಕೋಲ್ ಮೈನಿಂಗ್ ಚಟುವಟಿಕೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ . ಬಿಇಎಂಎಲ್ ನಲ್ಲಿ ಇರುವ 900 ಎಕರೆ ಪ್ರದೇಶವನ್ನು ಕೈಗಾರಿಕಾ ಅಭಿವೃದ್ಧಿಗೆ ಪಡೆದುಕೊಳ್ಳಲಾಗುವುದು . ಕೈಗಾರಿಕೆಯಲ್ಲಿ ಟೆಕ್ನಿಕಲ್ ಹುದ್ದೆಗಳಲ್ಲಿ ಶೇ 70 ರಷ್ಟು ಸ್ಥಳೀಯರಿಗೆ ಹಾಗೂ ಉಳಿದ ಎಲ್ಲಾ ಹುದ್ದೆಗಳಲ್ಲಿ ಶೇ 100 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡಲಾಗುವುದು ಎಂದು ಹೇಳಿದರು . ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕಾ ನೀತಿಗಳನ್ನು ತುಂಬಾ ಸರಳೀಕರಣ ಮಾಡಲಾಗಿದೆ . 2020-25 ಕೈಗಾರಿಕಾ ನೀತಿಯಲ್ಲಿ ರಾಜ್ಯಗಳಿಗಿಂತ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿದೆ ಎಂದರು . ಸಂಸದರಾದ ಎಸ್ ಮುನಿಸ್ವಾಮಿ ಅವರು ಮಾತನಾಡಿ , ಜಿಲ್ಲೆಯಿಂದ ಸುಮಾರು 25 ಸಾವಿರ ಜನರು . ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ . ಖನಿಜಗಳು ಸಿಗುವ ಸ್ಥಳವನ್ನು ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಜಿಲ್ಲೆಯಲ್ಲಿ 4 ಸಾವಿರ ಎಕರೆಯನ್ನು ಕೆಐಡಿಎಬಿ ಗೆ ಹಸ್ತಾಂತರಿಸಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ . ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ದೇಶದಲ್ಲಿಯೇ ವಸ್ತುಗಳನ್ನು ಉತ್ಪಾದಿಸಲು ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು . ಈ ಸಂದರ್ಭದಲ್ಲಿ ಕೆ.ಜಿ.ಎಫ್ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ , ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ , ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಶ್ವಿನಿ ಸಂಪಂಗಿ , ಬಿ.ವಿ ಮಹೇಶ್ ಸೇರಿದಂತೆ ಮತ್ತಿತ್ತರು ಉಪಸ್ಥಿತಿಸಿದ್ದರು .