ಜೀವ ವಿಮಾ ಪ್ರತಿನಿಧಿಗಳು ಕಳೆದ ವರ್ಷದಲ್ಲಿ ಉತ್ತಮ ವಹಿವಾಟು, ಈ ವರ್ಷ ಕೋವಿಡ್ ‌ನಿಂದ ವಹಿವಾಟ ಕಡಿಮೆ, ಮುಂದಿನ 5 ತಿಂಗಳಲ್ಲಿ ಹೆಚ್ಚಿನಪಾಲಿಸಿಗಳು ಮಾಡಿ : ಎಸ್.ಸತಿಶ್‌

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ , ಸ್ಥಳಿಯವಾಗಿ ಜೀವ ವಿಮಾ ಪ್ರತಿನಿಧಿಗಳು ಕಳೆದ ವರ್ಷದಲ್ಲಿ ಉತ್ತಮವಾಗಿ ವಹಿವಾಟು ನಡೆಸಿ ಹೆಚ್ಚಿನ ಪಾಲಿಸಿಗಳು ಮಾಡಿಸಲಾಗಿದೆ . ಈ ವರ್ಷ ಕೋವಿಡ್ ‌ನಿಂದ ವಹಿವಾಟ ಕಡಿಮೆ ಯಾಗಿದ್ದು ಇರುವ 5 ತಿಂಗಳಲ್ಲಿ ಹೆಚ್ಚಿನಪಾಲಿಸಿಗಳು ಮಾಡಿಸಿ ತಮ್ಮ ಕರ್ತವ್ಯಶಿಸ್ತುಬದ್ಧವಾಗಿ ನಿರ್ವಹಿಸಬೇಕೆಂದು ವ್ಯವಸ್ಥಾಪಕರು ಎಸ್.ಸತಿಶ್‌ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಎಲ್‌ಐಸಿ ತಾಲೂಕು ಆಭಿವೃದ್ಧಿಅಧಿಕಾರಿ ಆರ್‌. ವಿ. ಕುಲಕರ್ಣಿ ಏರ್ಪಡಿಸಿದ್ದ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು . ಯಾತ್ರಿಕ ಕೌಶಲ್ಯ ಮುಂದುವರೆದ ಈ ಕಾಲದಲ್ಲಿ ಜನರ ಆರೋಗ್ಯ ಸುರಕ್ಷತೆಗೆ ಜೀವ ವಿಮಾ ಮತ್ತು ಕ್ಯಾನ್ಸರ್‌ ಪಾಲಿಸಿಗಳು ಮಾಡಿಸಿ ಜನರ ಆರ್ಥಿಕ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ಕೊಡ ಬೇಕು . ಶ್ರೀನಿವಾಸಪುರದಲ್ಲಿ ಎಲ್ ಐ ಸಿ ಕಚೇರಿ ಪ್ರಾರಂಭಿಸಿರುವುದೆ ಇಲ್ಲಿನ ಜೀವ ವಿಮಾ ಗ್ರಾಹಕರಿಗೆ ಸಕಾರಾತ್ಮಕವಾಗಿ ಸೇವೆ ನೀಡ ಬೇಕೆನ್ನುವ ಉದ್ದೇಶದಿಂದ .
ಕೃಷಿ ಹೊಂದಿರುವ ರೈತರೆ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ತಾಲೂಕಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾವಾರಮಹಿ ವಾಟುಬೆಳೆಸಬೇಕು . ಕಾಲಕಾಲಕ್ಕೆ ಪಾಲಿಸಿದಾರರಿಗೆ ಇರುವಲ್ಲಿಗೆ ಸೇವೆ ನೀಡುವುದೆ ನಮ್ಮ ಗುರಿಯಾಗಿಸಿಕೊಳ್ಳಬೇಕೆಂದು ತಿಳಿಸಿದರು . ತಾಲೂಕು ಅಭಿವೃದ್ಧಿಅಧಿಕರಿ ಆರ್‌ ವಿ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ ಐ ಸಿ ಪ್ರತಿನಿಧಿಗಳು ಪ್ರತಿ ದಿನ ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು , ಅವರಿಗಾಗಿ ವರ್ಷಕ್ಕೆ ಕನಿಷ್ಟ 3 ಸಾವಿರರೂ. ಕ್ಯಾನ್ಸರ್‌ ಆರೋಗ್ಯ ವಿಮಾ ಪಾಲಿಸಿ
ಮಾಡಿಸಿದರೆ 10 ಲಕ್ಷರೂ ಭದ್ರತೆಯ ಪಾಲಿಸಿ ಕೊಡಬಹುದು .
ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಆರೋಗ್ಯಕ್ಷೀಣಿಸುತ್ತಿದೆ . ಕಾಯಿಲೆ ಬಂದಾಗ ಕಷ್ಟ ಪಡುವ ಬದಲು ಈಗಿಂದಲೆ ಎಚ್ಚರ ವಹಿಸಿ . ಸಮಯ ವ್ಯರ್ಥ ಮಾಡದೆ ಹಣದಂತೆ ಬಳಸಿಕೊಳ್ಳಿ ಹಣದಿಂದಲೆ ಎಲ್ಲವೂ ನಡೆಯುತ್ತದೆ ಎನ್ನಲಾಗದು . ಅಗತ್ಯಗಳಿಗೆ ಹಣ ಬೇಕೇಬೇಕು .
ನಮ್ಮ ತಂಡದಲ್ಲಿ ಈಗಾಗಲೆ ಇಬ್ಬರು ಎಂ ಡಿ ಆರ್ ಟಿ ಮಾಡಿ ತಂಡದ ಗೌರವ ಹೆಚ್ಚಿಸಿದ್ದಾರೆ . ನಾವು ಯಾವುದೆ ಕೆಲಸವನ್ನು ಮಾಡುವಾಗ ದೃಡ ಸಂಕಲ್ಪಮತು ಗುರಿ ಇರಬೇಕು . ಸರಕಾರಿ ಸೌಕರರಿಗೆ ನಿರಂತರ ಕೆಲಸ ಮಾಡಿದರೆ ವೇತನ ಸಿಗುತ್ತದೆ . ಅದೇ ರೀತಿ ಪ್ರತಿನಿಧಿಗಳು ವೃತ್ತಿ ಧರ್ಮ ಜವಾಬ್ದಾರಿ ಅರಿತು ಪ್ರತಿ ದಿನ ನಿರ್ಧಿಷ್ಟ ವಧಿ ಜೀವ ವಿಮೆ ಪಾಲಿಸಿ ಮಾಡಿಸಲು ಕಾಲ ಮೀಸಲಿಟ್ಟು ಕೆಲಸ ಮಾಡಬೇಕೆಂದು ತಿಳಿಸಿದರು .