ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮುರಳಿಮೋಹನ್ ನೂತನ, ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಚೌಡಪ್ಪ ಅಭಿನಂದನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ವಿ.ಮುರಳಿಮೋಹನ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ವೆಂಕಟೇಶಪ್ಪ,ಖಜಾಂಚಿಯಾಗಿ ಆರ್.ನಾಗರಾಜ್ ಹಾಗೂ ಗೌರವಾಧ್ಯಕ್ಷರಾಗಿ ವಿ.ಶ್ರೀನಿವಾಸಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಪದಾಧಿಕಾರಿಗಳನ್ನು ಸಂಘದ ರಾಜ್ಯಾಧ್ಯಕ್ಷ ಎಸ.ಚೌಡಪ್ಪ ಅಭಿನಂದಿಸಿದರು.
ಜಿಲ್ಲಾ ನೌಕರರ ಭವನದಲ್ಲಿ ನಡೆದ ಜಿಲ್ಲಾ ದೈಹಿಕ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ನೂತನ ಪದಾಧಿಕಾರಿಗಳು ಸಂಘಟನೆಗೆ ಒತ್ತು ನೀಡಿ, ಶ್ರಮಿಸುವಂತೆ ಕರೆ ನೀಡಿ, ರಾಜ್ಯ ಸಂಘ ಈಗಾಗಲೇ ದೈಹಿಕ ಶಿಕ್ಷಕರ ವೃಂದ ನೇಮಖಾತಿ ನಿಯಮಗಳು, ಪ್ರೌಢಶಾಲೆಗಳಲ್ಲಿನ ಮುಖ್ಯಶಿಕ್ಷಕರ ಹುದ್ದೆಗೆ ಜೇಷ್ಟತೆ ಕಾಪಾಡುವುದು ಮತ್ತಿತರ ಅಂಶಗಳ ಕುರಿತು ಕ್ರಮವಹಿಸಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಮುರಳಿಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರನ್ನು ಸಂಘಟಿಸುವ ಮೂಲಕ ನಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.


ದೈಹಿಕ ಶಿಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ


ಕಾನೂನು ಸಲಹೆಗಾರರಾಗಿ ಬಸವರಾಜಚಿಲಕಾಂತ ಮಠ್, ಗೌರವ ಸಲಹೆಗಾರರಾಗಿ ಎಂ.ಮಂಜುನಾಥ್, ಅಬ್ದುಲ್ ಮನ್ನಾನ್, ಎಂ.ಎಸ್.ಹೇಮಂತಕುಮಾರ್, ಸಲಹೆಗಾರರಾಗಿ ಪ್ಲೂಡರ್ ಬೈಲೋ, ಕೆ.ವಿನೋದಬಾಬು, ಉಪಾಧ್ಯಕ್ಷರಾಗಿ ಕೆ.ವಿ.ನಾರಾಯಣಸ್ವಾಮಿ, ರಹೀಂ ಷರೀಫ್, ಯೋಗೇಂದ್ರಯ್ಯ, ಹೀರಣ್ನಗೌಡ ಆಯ್ಕೆಯಾದರು.
ಜಂಟಿ ಕಾರ್ಯದರ್ಶಿಗಳಾಗಿ ಕೆ.ನಾಗರಾಜ, ಎಸ್.ವೆಂಕಟಸ್ವಾಮಿ, ಜಿ.ಕೆ.ಶಶಿಕಲಾ, ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ಜಿ.ಮನುಕುಮಾರ್, ಬಿ.ಮಂಜುನಾಥ್,ಬಿ.ಎ.ಕಾವ್ಯಶ್ರೀ, ಸಂಪತ್‍ಕುಮಾರ್, ರಂಗಪ್ಪ, ಕ್ರೀಡಾ ಕಾರ್ಯದರ್ಶಿಗಳಾಗಿ ಜಿ.ಮುನಿಯಪ್ಪ,ಯುವರಾಣಿ, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಎಸ್.ಸುಧಾಮಣಿ,ಜಿ.ಸುಜಾತಾ, ಪತ್ರಿಕಾ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ಲೆಕ್ಕಪರಿಶೋದಕರಾಗಿ ಎಸ್.ಪಿ.ಭಾರತಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಇ.ಶ್ರೀನಿವಾಸಗೌಡ, ನಿವೃತ್ತ ದೈಹಿಕ ಶಿಕ್ಷಣಾ ಅಧೀಕ್ಷಕ ಬಸವರಾಜಚಿಲಕಾಂತಮಠ್ ಮತ್ತಿತರರಿದ್ದರು.