ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಜಲಸಂಪನ್ಮೂಲವನ್ನು ಕಾಯ್ದುಕೊಳ್ಳುವುದು ನಮ್ಮೆಲರ ಹೊಣೆ: ಶಾಸಕ ಕೆ.ಆರ್.ರಮೇಶ್ಕುಮಾರ್
ರಾಯಲ್ಪಾಡು 1 : ಭೂಮಿಯ ಮೇಲೆ ಮಾನವ ಜೀವನ ಅವಲಬಂತಿವಾಗಿರುವುದು ನೀರಿನ ಲಭ್ಯತೆಯ ಮೇಲೆಯೇ , ಈ ಅತ್ಯಮೂಲ್ಯವಾದ ಜಲಸಂಪನ್ಮೂಲವನ್ನು ಕಾಯ್ದುಕೊಳ್ಳುವುದು ನಮ್ಮೆಲರ ಹೊಣೆ ಎಂದು ಶಾಸಕರಾದ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.
ನೆಲವಂಕಿ ಪಂಚಾಯಿತಿಯ ಮಂಚಿನೀಳ್ಳಕೋಟೆ ಗ್ರಾಮದಲ್ಲಿ ಸರ್ಕಾರದವತಿಯಿಂದ ನೂತನವಾಗಿ ನಿರ್ಮಿಸಲಾದ ಶುದ್ದ ನೀರಿನ ಘಟಕವನ್ನು ಸೋಮವಾರ ಉದ್ಗಾಟಿಸಿ ಮಾತನಾಡಿದರು.
ಜಿಲ್ಲೆಯಾದ್ಯಾಂತ ಇತ್ತೀಚಿನ ದಿನಗಳಲ್ಲಿ ಅಂತರ್ಜಲವು ಮಟ್ಟವು ಹೆಚ್ಚುತ್ತಿದ್ದು , ಅಂತರ್ಮಟ್ಟದಿಂದ ಬರುವ ಪ್ಲೋರೈಡ್ ಅಂಶದ ನೀರು ವಿಷಪೂರಕವಾಗಿದ್ದು , ಇದರಿಂದ ಮೂಳೆಸವೆತ, ಹಲ್ಲುಗಳಿಗೆ ಸಂಬಂದಿಸಿದ ತೊಂದರೆಗಳು ಹೆಚ್ಚುತ್ತಿದೆ ಎಂದರು. ಆದ್ದರಿಂದ ನಾಗರೀಕರು ಶುದ್ದವಾದ ನೀರನ್ನು ಕುಡಿಯುವುದರ ಜೊತೆಗೆ ನೀರನ್ನು ಮಿತವಾಗಿ ಬಳಸುವಂತೆ ಸಲಹೆ ನೀಡಿದರು.
ಮುಂದಿನ ವಾರದಲ್ಲಿ ಲಕ್ಷ್ಮೀಪುರ ಸೊಸೈಟಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಸಂಬಂದಿಸಿದ ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್ನಿಂದ ಶೂನ್ಯ ಬಡ್ಡಿದರದಲ್ಲಿ ಸಾಲವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಟ್ಟೋನಪಲ್ಲಿ ಗ್ರಾಮದ ಬಳಿಯ ಮೋರಿ ಕಾಮಗಾರಿ ನಿರ್ಮಿಸಲು ಸಂಬಂಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರವು ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ದಿಗಾಗಿ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿ, ಬೀದಿದೀಪ, ಶುದ್ದನೀರಿನ ಘಟಕ, ಅಂತರ್ಜಲ ಅಭಿವೃದ್ದಿಗಾಗಿ ಚೆಕ್ಡ್ಯಾಮ್, ಸಮುದಾಯಭವನಗಳಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಂಚಾಯಿತಿಗೆ ಸಂಬಂದಿಸಿದ ಉಳಿದ ಕಾಮಗಾರಿಗಳನ್ನು ಪಟ್ಟಿ ಮಾಡುವಂತೆ ಸ್ಥಳೀಯರಿಗೆ ಹಾಗು ಅಧಿಕಾರಿಗಳಿಗೆ ತಿಳಿಸಿದರು. ಸಮುದಾಯದ ಕಟ್ಟಕಡೆಯವ್ಯಕ್ತಿಯು ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಸಮಯದಲ್ಲಿ ರಾಯಲ್ಪಾಡು ಕ್ಷೇತ್ರದ ಜಿ.ಪಂ.ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಇಒ ಆನಂದ್,ಅಭಿಯಂತರರಾದ ಅಪ್ಪಿರೆಡ್ಡಿ,ರಾಮಚಂದ್ರ,ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಸಂಜಯ್ರೆಡ್ಡಿ,ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ ಮುನಿಯಪ್ಪ, ಪಿಡಿಒ ಚಂದ್ರಶೇಖರ್,ಗ್ರಾ.ಪಂ ಸದಸ್ಯ ರೆಡ್ಡಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷೆ ಪ್ರಮೀಳಶಿವಣ್ಣ, ಗ್ರಾ.ಪಂ ಮಾಜಿ ಸದಸ್ಯ ವಕೀಲ ಮುನಿರಾಜು, ತಾ.ಪಂ ಮಾಜಿ ಸದಸ್ಯ ತಿಮ್ಮಯ್ಯ, ಸ್ಥಳಿಯರಾದ ಬಟ್ಟೋನಪಲ್ಲಿ ಉಪೇಂದ್ರ, ಕೊಂಡಸಂದ್ರ ಶಿವಾರೆಡ್ಡಿ,ಚಿಕ್ಕರಂಗೇಪಲ್ಲಿ ವೆಂಕಟೇಶ್ಮೂರ್ತಿ ಹಾಗು ಸ್ಥಳೀಯ ಮುಖಂಡರಿದ್ದರು.