ಚಳಿ, ಗಾಳಿಯಲ್ಲಿಯೂ ಮನೆ ಮನೆಗೂ ಪತ್ರಿಕೆಗಳನ್ನು ಹಂಚುವ ಹುಡುಗರನ್ನುಗುರುತಿಸಿ ಶ್ರೀನಿವಾಸಪುರ ರೋಟರಿ  ಆಹಾರ ಕಿಟ್ ಅನ್ನು ನೀಡುತ್ತಿರುವುದು ಶ್ಲಾಘನೀಯ: ಪ್ರಭಾರಿ ಪಿ.ಎಸ್.ಐ ನಾರಾಯಣಪ್ಪ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಶ್ರೀನಿವಾಸಪುರ: ಬೆಳಗಿನ ಜಾವ ಪ್ರಾಮಾಣಿಕತೆಯಿಂದ ಚಳಿ, ಗಾಳಿ ಲೆಕ್ಕವಿಲ್ಲದೆ ಮನೆ ಮನೆಗೂ ಪತ್ರಿಕೆಗಳನ್ನು ಹಂಚುವ ಹುಡುಗರನ್ನು ಶ್ರೀನಿವಾಸಪುರರೋಟರಿ ಸಂಸ್ಥೆ ಗುರ್ತಿಸಿ ಆಹಾರ ಕಿಟ್ ಅನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪ್ರಭಾರಿ ಪಿ.ಎಸ್.ಐ ನಾರಾಯಣಪ್ಪ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಸೆಂಟ್ರಲ್ ಶ್ರೀನಿವಾಸಪುರ ವತಿಯಿಂದ ಪತ್ರಿಕಾ ಹಂಚುವ ಹುಡುಗರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪಿ.ಎಸ್.ಐ. ನಾರಾಯಣಪ್ಪ, ಪತ್ರಿಕಾ ಹಂಚುವ ಹುಡುಗರನ್ನು ಗುರ್ತಿಸಿರುವ ರೋಟರಿ ಸಂಸ್ಥೆಗೆ ಕೃತಜ್ನತೆಗಳು, ಪತ್ರಿಕೆ ಹಂಚುವ ಹುಡುಗರು, ಈ ದೇಶದ, ರಾಜ್ಯದ ಸುದ್ದಿ, ಸಮಾಚಾರ ಪತ್ರಿಕೆಗಳನ್ನು ಬೆಳಗಿನ ಜಾವ ಪಟ್ಟಣದ ಮನೆ-ಮನೆಗೂ ತಲುಪಿಸುವ ಹುಡುಗರ ಸೇವೆ ಅನನ್ಯವಾಗಿದೆ, ಅವರಿಗೆ ಈ ಕರೋನ ಕಷ್ಟ ದಿನಗಳ ಸಮಯದಲ್ಲಿ ಅಳಿಲು ಸೇವೆ ಮಾಡುತ್ತಿರುವ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ ಮಾತನಾಡಿ, 2020-21ನೇ ಸಾಲಿಗೆ ರೋಟರಿ ಸೆಂಟ್ರಲ್ ಅಧ್ಯಕ್ಷನಾಗಿ ಅಧಿಕಾರ ಪಡೆದ ನಾನು ನಮ್ಮ ರೋಟರಿಯ ಎಲ್ಲರ ಸಹಕಾರದಿಂದ ಕೈಲಾದಷ್ಟು ಸೇವೆ ಮಾಡಬೇಕೆಂಬುದು ಮೂಲ ಉದ್ದೇಶವಾಗಿದ್ದು, ಈಗಾಗಲೆ ತಾಲ್ಲೂಕಿನ ಹಲವು ಶಾಲಾ ಆವರಣ, ದೇವಸ್ಥಾನದ  ಆವರಣದಲ್ಲಿ ಸಸಿ ನಾಟಿ ಮಾಡುವ ಕಾರ್ಯಕ್ರಮವನ್ನು ಮಾಡುತ್ತಿದ್ದು, ಜೊತೆಗೆ ಪಟ್ಟಣದಲ್ಲಿ ಪತ್ರಿಕಾ ಏಜೆಂಟರ ಸಹಕಾರದಿಂದ ಪತ್ರಿಕೆ ಹಂಚುವ ಹುಡುಗರಿಗೆ ಕೈಲಾದಷ್ಟು ಈ ಸಂಸ್ಥೆಯ ಮೂಲಕ ಸೇವೆ ಮಾಡಲು ಮುಂದಾಗಿದ್ದೇವೆ, ಈ ಸೇವೆ ಮಾಡಲು ಸಹಕರಿಸಿದ ತಾಲ್ಲೂಕಿನ ಎಲ್ಲ ಪತ್ರಕರ್ತ ಮಿತ್ರರಿಗೆ ಕೃತಜ್ನತೆಗಳನ್ನು ತಿಳಿಸಿದರು.
ನಿರ್ದೇಶಕರಾದ ಬೈರೇಗೌಡ ಮಾತನಾಡಿ, ಈ ದೇಶದ ದಿ.ಮಾಜಿ ರಾಷ್ಟ್ರಪತಿಗಳು ಹಾಗೂ ವಿಜ್ನಾನಿಗಳೂ ಆದ ಅಬ್ದುಲ್ ಕಲಾಂ ಸಹ ಒಂದಾನೊಂದು ದಿನಗಳಲ್ಲಿ ಪತ್ರಿಕೆಯನ್ನು ವಿತರಣೆ ಮಾಡಿರುವ ಶುಭ ದಿನಗಳನ್ನು ಇಂದು ನಾವು ನೆನಪಿಸಿಕೊಳ್ಳಬಹುದು, ಹಾಗೆಯೆ ಪತ್ರಿಕೆಗಳನ್ನು ಹಂಚುವವರು ಕೀಳು ಎಂಬ ಮನೋಭಾವನ್ನು ಬಿಟ್ಟು ವಸ್ತು ನಿಷ್ಟೆಯಿಂದ ಪ್ರಾಮಾಣಿಕವಾಗಿ ಪತ್ರಿಕೆಗಳನ್ನು ತಲುಪಿಸುವ ಕೆಲಸ ಮಾಡುವ ಜವಾಬ್ದಾರಿ ನಿಮ್ಮಮೇಲಿದೆ. ನೀವು ಹಂಚುವ ಪತ್ರಿಕೆಗಳಿಗಾಗಿ ಓದುಗರು ಕಾತುರದಿಂದ ಕಾಯುತ್ತಿದ್ದು ಅವರಿಗೆ ನಿರಾಶೆಯನ್ನು ಪಡಿಸದೆ ನಿಮ್ಮ ವಿತರಕರಿಗೆ ಸಹಕರಿಸಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಈ ಸಮಯದಲ್ಲಿ ಮಾಧ್ಯಮ ಕಾರ್ಯದರ್ಶಿ ಎನ್.ಕೃಷ್ಣಮುರ್ತಿ, ಸದಸ್ಯರಾದ ಬಿ. ಆನಂದಕುಮಾರ್, ಶಶಿಕಲಾ ಹಾಜರಿದ್ದರು.