ಗ್ರೀನ್ ಲ್ಯಾಂಡ್ ಮರೇನ್ ಮಾಲೀಕ (ಮುಂಬಯ್ – ಕುಂದಾಪುರ) ಜಾನ್ ಡಿ, ಮೆಲ್ಲೊ ಮುಂಬಯಲ್ಲಿ ನಿಧನ

JANANUDI.COM NETWORK

ಗ್ರೀನ್ ಲ್ಯಾಂಡ್ ಮರೇನ್ ಮಾಲೀಕ (ಮುಂಬಯ್ – ಕುಂದಾಪುರ)
ಜಾನ್ ಡಿ, ಮೆಲ್ಲೊ ಮುಂಬಯಲ್ಲಿ ನಿಧನ


ಕುಂದಾಪುರ : ಖ್ಯಾತ ಪೈಬರ್ ಬೋಟ್ ತಯಾರಿಕಾ ಸಂಸ್ಥೆ ಗ್ರೀನ್ ಲ್ಯಾಂಡ್ ಮರೇನ್ ಮಾಲೀಕ ಜಾನ್ ಡಿ, ಮೆಲ್ಲೋ(72) ಅವರು ಹ್ರದಯಾಘಾತದಿಂದ ತಾ.22.09.2019 ಆದಿತ್ಯವಾರ ಮುಂಜಾನೆ ಮುಂಬೈಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೂಲತ: ಬಾರ್ಕೂರಿನವರಾದ ಇವರು ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದು ಮುಂಬೈಯಲ್ಲಿ ಹೆಲ್ಮೇಟ್ ಹಾಗೂ ಫೈಬರ್ ಬೋಟ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದರು. 90 ರ ದಶಕದಲ್ಲಿ ಕುಂದಾಪರದಲ್ಲಿ ಸೌತ್ ಕೋಸ್ಟ್ ಸಂಸ್ಥೆಯ ಮೂಲಕ ಫೈಬರ್ ಗ್ಲಾಸ್ ಉತ್ಪನ್ನವನ್ನು ಪ್ರಥಮವಾಗಿ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದ ಇವರು, ತದ ನಂತರ, ಕುಂದಾಪುರದ ಮುವತ್ತು ಮುಡಿಯಲ್ಲಿ ಗ್ರೀನ್ ಲ್ಯಾಂಡ್ ಮರೇನ್ ಹೆಸರಿನ ಫೈಬರ್ ಬೋಟ್ ಉತ್ಪಾದನಾ ಘಟಕವನ್ನು ಆರಂಭಿಸಿದರು. ಮುಂಬೈ ಹಾಗೂ ಕುಂದಾಪುರದ ಚಿಕ್ಕನಸಾಲ್ ರಸ್ತೆಯಲ್ಲಿ  (ಸಂತ ಜುಜೆ ವಾಜ್ ವಾಳೆ) ನಿವಾಸವನ್ನು ಹೊಂದಿದ್ದ ಇವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಜನಾನುರಾಗಿಯಾಗಿದ್ದರು. ಪತ್ನಿ ಎರಡು ಗಂಡು ಹಾಗೂ ಎರಡು ಹೆಣ್ಣುಮಕ್ಕಳನ್ನು ಅಗಲಿರುವ ಇವರ ಅಂತ್ಯ ಸಂಸ್ಕಾರವು ಮುಂಬೈಯ ಮುಲುಂಡ್‍ನಲ್ಲಿ ನಡೆದಿದೆ.