ಗೋಕುಲ ಮಿತ್ರಬಳಗದಿಂದ ಕೆ.ಎಸ್.ಗಣೇಶ್ 50ನೇ ಹುಟ್ಟುಹಬ್ಬ ಸಕಲ ಸಮುದಾಯ ಮೆಚ್ಚುವ ಸಜ್ಜನ-ಸ್ನೇಹಿತರಿಂದ ಅಭಿನಂದನೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಮಾಧ್ಯಮ ಅಕಾಡೆಮಿ ಸದಸ್ಯ,ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಜಿಲ್ಲಾ ಸೇವಾದಳದ ಅಧ್ಯಕ್ಷರಾದ ಕೆ.ಎಸ್.ಗಣೇಶ್ ಅವರ 50ನೇ ಹುಟ್ಟುಹಬ್ಬವನ್ನು ನಗರದ ಗೋಕುಲ ಮಿತ್ರಬಳಗ ಹಾಗೂ ಸ್ನೇಹಿತರು ಸಂಭ್ರಮದಿಂದ ಆಚರಿಸಿದರು.
ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ ಗೋಕುಲ ಮಿತ್ರಬಳಗದ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಮೈಸೂರು ಪೇಟ ತೊಡಿಸಿ ಗಣೇಶ್‍ರನ್ನು ಸನ್ಮಾನಿಸಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಮಿತ್ರಬಳಗದ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿ, ಗಣೇಶ್ ನೀರಿನಂತೆ ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದಾರೆ, ಅವರು ಬಂದ ದಾರಿಯನ್ನು ಹಿಂತಿರುಗಿ ನೋಡಿಕೊಂಡು ಆತ್ಮವಿಮರ್ಶೆಯಿಂದ ಮುಂದೆ ಸಾಗಲಿ ಎಂದು ಹಾರೈಸಿ, ಪತ್ರಕರ್ತರ ಸಂಘದಲ್ಲಿ ನನ್ನೊಂದಿಗೆ ಎರಡು ಕಂಬದಂತಿರುವ ಗಣೇಶ್ ಸಂಘವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಕೈಜೋಡಿಸಲಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಗಣೇಶ್ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ವ್ಯಕ್ತಿತ್ವದಲ್ಲಿ ರಾಜೀ ಮಾಡಿಕೊಳ್ಳಲಿಲ್ಲ, ಸದಾ ಮಿತ್ರರೊಂದಿಗೆ ಬೆರೆತು ಕಾಲ ಕಳೆಯುತ್ತಾರೆ, ಇಷ್ಟೊಂದು ಅಭಿಮಾನಿಗಳನ್ನು ಹೊಂದಿದ್ದಾರೆ, ಕೋವಿಡ್ ಸಂದರ್ಭದಲ್ಲೂ ಇಷ್ಟೊಂದು ಜನ ಹುಟ್ಟುಹಬ್ಬಕ್ಕೆ ಹಾಜರಿರುವುದು ಶ್ಲಾಘನೀಯ ಎಂದರು.

ನಾನು ದಾರಿತಪ್ಪದಂತೆ ಗೆಳೆಯರ ಸಹಕಾರ

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಗಣೇಶ್, ನಾನು ನೇರ ಗೆರೆಯಂತೆಯೇ ಜೀವನವಿಡಿ ಸಾಗಿ ಬಂದಿದ್ದೇನೆ, ನಾನು ದಾರಿತಪ್ಪಲು ನನ್ನ ಸ್ನೇಹಿತರು ಬಿಡಲ್ಲ, ದಿಕ್ಕುತೋರುತ್ತಾರೆ ಎಂದರು.
ಜಾತಿ,ಧರ್ಮ,ಭಾಷೆ ಸಂಘರ್ಷದಲ್ಲಿ ಸಿಲುಕಿ ಸಣ್ಣವರಾಗುತ್ತಿರುವ ನಾವು ಇದೆಲ್ಲವನ್ನು ಮೀರಿ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ಶಕ್ತಿ, ಆದರ್ಶ ಗೋಕುಲ ಮಿತ್ರ ಬಳಗ ನನಗೆ ತಂದುಕೊಟ್ಟಿತು ಎಂದರು.
ನನ್ನ ಬದುಕಿನಲ್ಲಿ ಮತ್ತೊಬ್ಬರಿಗೆ ನೋವುಂಟು ಮಾಡದಂತೆ ಎಲ್ಲರೊಂದಿಗೆ ಸಾಗಿ ನಡೆದರೆ ಅದೇ ನನಗೆ ತೃಪ್ತಿ ಎಂದ ಅವರು, ಜೀವನದಲ್ಲಿ ಮತ್ತಿನ್ನೇನು ಕೇಳುವುದಿಲ್ಲ ಎಂದರು.
ಬಳಗವನ್ನು ನೋಂದಣಿ ಮಾಡಲು ಬಂದಿರುವ ಸಲಹೆಯನ್ನು ಸ್ವೀಕರಿಸುವೆ ಅದಕ್ಕಾಗಿ ಎಲ್ಲರೂ ಪ್ರಯತ್ನಿಸೋಣ, ಬಳಗದಿಂದ ಬಡ ಹೆಣ್ಣ ಮಗಳ ಮದುವೆಗೆ ನೆರವು ನೀಡಿದ್ದು, ಸಿನಿಮಾ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮತ್ತಿತರ ಸೇವಾ ಕಾರ್ಯಗಳನ್ನು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, 35 ವರ್ಷದ ಸ್ನೇಹ ನಮ್ಮದು, ಪತ್ರಿಕಾ ರಂಗದಲ್ಲಿ ಯಾವುದೇ ಆರೋಪಗಳಿಗೆ ಸಿಲುಕದೇ ನೇರ ನುಡಿಯಿಂದಲೇ ಹೆಸರಾದ ಸ್ನೇಹಜೀವಿ ಎಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಸುಧಾಕರ್, ಗಣೇಶ್ ಹುಟ್ಟುಹಬ್ಬ ಎಂದರೆ ಗೋಕುಲ ಮಿತ್ರಬಳಗದ ವಾರ್ಷಿಕ ಮಹಾಸಭೆ ಇದ್ದಂತೆ, ನಮ್ಮ ಬಳಗದ ಗಣೇಶ ಮೂರ್ತಿ ಇವರು, ಎಂದು ತಿಳಿಸಿ, ಬಳಗ ನೋಂದಣಿಗೆ ಮುಂದಾಗಲು ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಹಲವಾರು ವರ್ಷಗಳ ಪರಿಚಯ ನಮ್ಮದು ಎಂದರೆ, ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ನನ್ನನ್ನು ಪತ್ರಿಕಾ ರಂಗದಲ್ಲಿ ಪರಿಚಯಿಸಿದ್ದೇ ಗಣೇಶ್ ಎಂದರು.
ಪತ್ರಕರ್ತ ರಾಜೇಂದ್ರ, ಹಲವಾರು ವರ್ಷಗಳಿಂದ ಗಣೇಶ್ ಅವರನ್ನು ಬಲ್ಲೆ, ಏನಾದರೂ ತಪ್ಪಾಗಿದ್ದರೆ ನೇರವಾಗಿ ನಿಷ್ಟೂರವಾಗಿ ಹೇಳುವ ಗುಣ ಗಣೇಶ್ ಅವರದು, ಅವರು ತಾಳ್ಮೆಯಿಂದ ನೀಡುವ ಸಲಹೆ ಶ್ಲಾಘನೀಯ ಎಂದರು.
ಕೆಯುಡಿಎ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡ ಖಾದ್ರಿಪುರ ಬಾಬು, ಸರಳತೆ,ಸೃಜನಶೀಲತೆಗೆ ಮತ್ತೊಂದು ಹೆಸರು ಗಣೇಶ್ ಎಂದು ತಿಳಿಸಿ ಶುಭ ಕೋರಿದರು.
ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ಆರ್.ಗೋಪಾಲ್, ಜಾತಿ ಬೇಧವಿಲ್ಲದಂತೆ ಎಲ್ಲರೊಂದಿಗೆ ಬೆರೆತು ಬಾಳುವ ಗಣೇಶ್ ನಮಗೆ ಆದರ್ಶವಾಗಿದ್ದಾರೆ, ಅವರು ನಮ್ಮ ಒಡನಾಡಿ ಮತ್ತು ಬಳಗದ ಸದಸ್ಯರು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದರು.
ಕಾರ್ಯಕ್ರಮ ನಿರೂಪಿಸಿದ ಕೋ.ನಾ.ಮಂಜುನಾಥ್, ಗಣೇಶ್ ಅವರ ಸ್ನೇಹಪರತೆಯೇ ಇಷ್ಟೊಂದು ಮಂದಿಯನ್ನು ಒಂದೆಡೆ ಸೇರಿಸಿದೆ, ಅವರು ಎಲ್ಲರೊಂದಿಗೆ ಬೆರೆತು ಕಾಲ ಕಳೆಯುತ್ತಾರೆ, ಅವರ ನಿಷ್ಟೂರವಾದಿತ್ವ ಸ್ವಾಗತಾರ್ಹ ಎಂದರು.
ಬಳಗದ ಚಲಪತಿ, ಮುನಿವೆಂಕಟಯಾದವ್, ಲಕ್ಷ್ಮಣ್,ಜ್ಯೂಸ್ ನಾರಾಯಣಸ್ವಾಮಿ, ಪಿಡಿಒ ನಾಗರಾಜ್, ವರದೇನಹಳ್ಳಿ ವೆಂಕಟೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್ ಗಣೇಶ್ ಅವರ ಸರಳತೆ,ಸಜ್ಜನಿಕೆ,ಸೌಹಾರ್ದತೆಯ ಗುಣಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಜರಂಗದಳದ ಬಾಲಾಜಿ, ಕಿಲಾರಿಪೇಟೆ ರಾಮಕೃಷ್ಣ, ಪತ್ರಕರ್ತ ವೆಂಕಟೇಶಬಾಬಾ, ಚಾನ್‍ಪಾಷ, ಬುಜ್ಜಿ,ಶ್ರೀನಿವಾಸಲು,ಚಂದ್ರು,ಸಾಕ್ಷಿ ಮಂಜುನಾಥ್,ಆಸೀಫ್ ಮತ್ತಿತರರು ಹಾಜರಿದ್ದು, ಶುಭ ಕೋರಿದರು.