ಗುರುಗಳು ಶಿಕ್ಷಕರು ಅಂದರೆ ಕತ್ತಲಿನಿಂದ ಬೆಳಕಿನಡೆಗೆ ಕರೆದೊಯ್ಯುವವರು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹೆಚ್.ಆರ್. ದೇವರಾಜ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಗುರು ಅನ್ನುವ ಪದಕ್ಕೆ ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವವರು ಗುರುಗಳು ಅರ್ಥ. ಗುರು ಅಂದರೆ ಕತ್ತಲಿನಿಂದ ಬೆಳಕಿನಡೆಗೆ ಕರೆದೊಯ್ಯುವವರು ಶಿಕ್ಷಕರು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹೆಚ್.ಆರ್. ದೇವರಾಜ್ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಆಯ್ದ ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮವನ್ನುಪಟ್ಟಣದಜೆ.ಎಂ.ಎಫ್.ಸಿ. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹೆಚ್.ಆರ್. ದೇವರಾಜ್‍ರವರು ಉದ್ಘಾಟಿಸಿ ಮಾತನಾಡಿದರು

“ಪ್ರತಿ ವರ್ಷದಂತೆ ಡಾ: ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ಇವರ ಜ್ನಾಪಕಾರ್ಥವಾಗಿ ಉತ್ತಮ ಶಿಕ್ಷಕರನ್ನು ಗುರ್ತಿಸಿ ಅಂತಹ ಶಿಕ್ಷಕರನ್ನು ಗೌರವಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯವಾದುದು ಎಂದರು.
ಗುರುವಿನ ಸ್ಥಾನದ ಮಹತ್ವ ಅನನ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಬೆಳಕು ನೀಡುವ ಅಭೂತ ಪೂರ್ವ ಶಕ್ತಿ ಗುರುವಲ್ಲಿ ಆಡಗಿರುತ್ತದೆ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳೊಂದಿಗೆ ಉನ್ನತ ಸ್ಥಾನಗಳನ್ನು ಪಡೆಯಬೇಕಾದರೆಗುರುವಿನ ಭೋಧನೆ ಅಪಾರ ವಾಗಿರುತ್ತದೆ. ಆಗಾಗಿ ಗುರುವಿನ ಸ್ಥಾನಕ್ಕೆ ನಾವೆಲ್ಲರೂ ಗೌರವ ಕೊಡಬೇಕು. ಸರ್ವೇಪಲ್ಲಿ ರಾಧಾಕೃಷ್ಣನ್ ರವರು ಈ ದೇಶದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೆ ರಾಷ್ಟ್ರಪತಿಯಾಗಿದ್ದ ಅವರ ಜನ್ಮದಿನಾಚರಣೆ ಆಚರಿಸುವುದು ಸ್ವಾಗತ, ಇಂತಹ ಮಹನೀಯರ ಆಧರ್ಶ ಪ್ರಾಯಗಳು ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕು –
ನ್ಯಾಯಾಧೀಶ ಹೆಚ್.ಆರ್. ದೇವರಾಜ್‍


ಡಿ.ಡಿ.ಪಿ.ಐ. ಕೆ.ಎಂ. ಜಯರಾಮರೆಡ್ಡಿ ಮಾತನಾಡಿ, ಈ ತಾಲ್ಲೂಕಿನ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಜಿಲ್ಲೆಗೆ ಪ್ರಥಮ ಸ್ಥಾನ ಲಿಬಿಸುತ್ತಿದ್ದು, ಮುಂದಿನ ವರ್ಷ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವ ನಿಟ್ಟಿನಲ್ಲಿ ನೀವೆಲ್ಲರೂ ಕೆಲಸ ಮಾಡಬೇಕು, ರೋಟರಿ ಸಂಸ್ಥೆ ಉತ್ತಮ ಶಿಕ್ಷಕರನ್ನು ಗುರ್ತಿಸಿರುವುದಕ್ಕೆ ರೋಟರಿ ಸಂಸ್ಥೆಗೆ ಅಭಿನಂದನೆಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ಮೌಲ್ಯಾಧಾರಿತ ಗುಣಮಟ್ಟ ಶಿಕ್ಷಣವನ್ನು ನೀಡಿ, ಉತ್ತಮ ಫಲಿತಾಂಶ ವಿದ್ಯಾರ್ಥಿಗಳಿಗೆ ತಂದು ಕೊಟ್ಟಾಗ ಸಮಾಜದಲ್ಲಿ ಶಿಕ್ಷಕರ ಹಿರಿಮೆ ದೊಡ್ಡದಾಗಿ ಅಭಿನಂದನೆಗಳಿಗೆ ಅರ್ಹರಾಗುತ್ತೀರ, ಈ ನಿಟ್ಟಿನಲ್ಲಿ ಪೆÇೀಷಕರ ಸಹಕಾರದಿಂದ ನೀವು ಕೆಲಸ ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಹೆಚ್ಚು ಶ್ರಮ ವಹಿಸಬೇಕೆಂದು ತಿಳಿಸಿದರು.

ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ ಮಾತನಾಡಿ, ರೋಟರಿ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇವುಗಳಲ್ಲಿ ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಕೋವಿಡ್ ಸಮಯದಲ್ಲಿ ತಾಲ್ಲೂಕಿನ ಅನೇಕ ಶಾಲಾ ಶಿಕ್ಷರಿಗೆ ಮಾಸ್ಕ್ ನೀಡುವುದು, ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುವ ಕಾರ್ಯಕ್ರಮ, ಅನೇಕ ಶಾಲಾ ಆವರಣಗಳಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮಗಳು, ಸ್ಯಾನಿಟೈಸರ್ ಸ್ಟ್ಯಾಂಡ್ ನೀಡಿರುವುದು, ಹ್ಯಾಂಡ್ ವಾಷ್ ಕಾರ್ಯಕ್ರಮ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇಂದು ತಾಲ್ಲೂಕಿನ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ 30 ಮಂದಿ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಶ್ರೀನಿವಾಸಪುರ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ, ರೋಟರಿ ಜಿಲ್ಲೆಯ ಕಾರ್ಯದರ್ಶಿ ಕರೇಗೌಡ, ಎ.ಜಿ. ಗೋಪಾಲರೆಡ್ಡಿ, ಜಿ.ಎಸ್.ಆರ್. ಎಸ್.ವಿ. ಸುಧಾಕರ್, ಕಾರ್ಯದರ್ಶಿ ಹೆಚ್.ಎನ್. ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಕಜಾನ್ಸಿ ಎಸ್.ಎನ್ ಮಂಜುನಾಥರೆಡ್ಡಿ, ಪಬ್ಲಿಕ್ ಇಮೇಜ್ ನಿರ್ದೇಶಕರಾದ ಕೆ.ಎನ್. ವೇಣುಗೋಪಾಲ್, ಎಂ. ಬೈರೇಗೌಡ, ಗೋಪಾಲಗೌಡ ಹಾಗೂ ಸದಸ್ಯರು, ಶಿಕ್ಷಕರು ಹಾಜರಿದ್ದರು.