ಖಾಲಿಯಿರುವ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಯನ್ನು ಕೂಡಲೇ ಭರ್ತಿ ಮಾಡಲು ಒತ್ತಾಯಿಸಿ : ರೈತ ಸಂಘದಿಂದ ಮನವಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಸೆ.16: ಖಾಲಿಯಿರುವ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಯನ್ನು ಕೂಡಲೇ ಭರ್ತಿ ಮಾಡಿ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹಕರಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಪಂಚಾಯತ್ ಮುಂದೆ ಹೋರಾಟ ಮಾಡಿ ಉಪ ಕಾರ್ಯದರ್ಶಿಗಳ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು.

ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪ್ರಸ್ತುತ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸೇರಿದಂತೆ ರೈತರಿಗೆ ನಾನಾ ಸಮಸ್ಯೆಗಳು ತೀವ್ರವಾಗಿದ್ದು, ನೆರವಿಗೆ ಯಾರೂ ಬರದಂತಾಗಿದೆ. ಕಾರಣ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಅವಧಿ ಮುಗಿದಿದೆ. ಚುನಾವಣೆಯು ಸಮೀಪಿಸುತ್ತಿದೆ. ಇನ್ನು ಗ್ರಾಪಂಗಳಿಗೆ ಅಧ್ಯಕ್ಷರು ಇಲ್ಲದಿರುವ ಕಾರಣ ಆಡಳಿತಾಧಿಕಾರಿಗಳನ್ನಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಇಂತಿಷ್ಟು ಗ್ರಾಪಂಗಳ ಜವಾಬ್ದಾರಿಯನ್ನು ನೀಡಲಾಗಿದ್ದು, ಅವರ ಕೆಲಸದ ಒತ್ತಡದ ಜತೆಗೆ ಗ್ರಾಪಂಗಳ ಕೆಲಸಗಳನ್ನು ಮಾಡಲಾಗುತ್ತಿಲ್ಲ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಅನೇಕ ಇಲಾಖೆಗಳಿಂದ ರೈತರಿಗೆ ನಾನಾ ಸೌಲಭ್ಯಗಳು ಸಿಗಬೇಕಾಗಿದ್ದು, ಸಿಇಒ ಅವರೇ ಇಲ್ಲದ ಕಾರಣ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. 159 ಪಂಚಾಯಿತಿಗಳ ಜೊತೆಗೆ ತೋಟಗಾರಿಕೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಇನ್ನಿತರೆ ಸಹಭಾಗಿತ್ವವಿದೆ, ಆದರೆ ಸಿ.ಇಒ ಇಲ್ಲದೆಯಿರುವ ಕಾರಣ ಈ ಇಲಾಖೆಗಳಲ್ಲಿ ಯಾವುದೇ ಅಭಿವೃದ್ದಿ ಆಗುತ್ತಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲವೆಂದು ಆರೋಪಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಜಿಲ್ಲೆಯಲ್ಲಿ ಜನಪ್ರತಿನಿದಿಗಳ ತಾಳಕ್ಕೆ ತಕ್ಕಂತೆ ಕುಣಿಯಲ್ಲಿಲ್ಲ ಎಂಬ ಕಾರಣಕ್ಕೆ ದಕ್ಷ ಪ್ರಮಾಣಿಕ ಅಧಿಕಾರಿಯಾಗಿದ್ದ ದರ್ಶನ್‍ರವರನ್ನು ಕೇಲವೇ ತಿಂಗಳಲ್ಲಿ ವರ್ಗಾವಣೆ ಮಾಡಿದರು, ಸಿ.ಇ.ಒ ಇಲ್ಲದ ಕಾರಣ ಯಾವುದೇ ಕಾಮಗಾರಿಗಳು ಮತ್ತು ಅಭಿವೃದ್ದಿ ಕೆಲಸಗಳು ನರೇಗಾದಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಸಿಇಒ ಹುದ್ದೆ ಖಾಲಿಯಿದ್ದು, ಭರ್ತಿ ಮಾಡಲು ಸರ್ಕಾರವು ಈವರೆಗೆ ಮುಂದಾಗಿಲ್ಲ. ಜಿಲ್ಲಾಧಿಕಾರಿಗಳು ಪ್ರಭಾರ ಸಿಇಒ ಆಗಿದ್ದರೂ ಸಂಪೂರ್ಣವಾಗಿ ಇತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ 15 ದಿನಗಳೊಳಗಾಗಿ ಸಿಇಒ ಅವರನ್ನು ನೇಮಕ ಮಾಡಿ ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಪಡಿಸಬೇಕು ಇಲ್ಲವಾದಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು
ಮನವಿ ಸ್ವೀಕರಿಸಿ ಮಾತನಾಡಿದ ಉಪಕಾರ್ಯದರ್ಶಿ ಸಂಜೀವಪ್ಪನವರು ನಿಮ್ಮ ಈ ಮನವಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಪೊಮ್ಮರಹಳ್ಳಿ ನವೀನ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಿನೋದ್, ಮೀಸೆ ವೆಂಕಟೇಶಪ್ಪ, ವಡ್ಡಹಳ್ಲಿ ಮಂಜುನಾಥ್, ಸಹದೇವಪ್ಪ, ನಲ್ಲಾಂಡಹಳ್ಳಿ ಕೇಶವ, ಸುಧಾಕರ್, ರವಿ, ರವೀಂದ್ರ, ಮುನಿರಾಜು, ಜಗದೀಶ್, ಮುಂತಾದವರಿದ್ದರು
.